Karnataka logo

Karnataka Tourism
GO UP

ಜಾಮಿಯಾ ಮಸೀದಿ,ಕಲಬುರಗಿ

separator
ಕೆಳಗೆ ಸ್ಕ್ರಾಲ್ ಮಾಡಿ

ಕಲಬುರಗಿಯ ಜಾಮಿಯಾ ಮಸೀದಿ ವಿಶಿಷ್ಟ ಸ್ಪ್ಯಾನಿಷ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಜಾಮಿಯಾ ಮಸೀದಿ, ಕಲಬುರಗಿಯ ವಿನ್ಯಾಸವು ಸ್ಪೇನ್‌ನ ಕಾರ್ಡೊಬಾದ ಮಸೀದಿಯನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ.

ಹದಿನಾಲ್ಕನೆಯ ಶತಮಾನದ ಜಾಮಿಯಾ ಮಸೀದಿ ಕಲಬುರಗಿಯ ಕೋಟೆ ಸಂಕೀರ್ಣದ ಭಾಗವಾಗಿದೆ. ಪ್ರಾರ್ಥನಾ ಉದ್ದೇಶಗಳಿಗಾಗಿ 5000 ಭಕ್ತರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಜಾಮಿಯಾ ಮಸೀದಿಗೆ ಇದೆ.

ಜಾಮಿಯಾ ಮಸೀದಿ, ಕಲಬುರಗಿಯ ಬಗ್ಗೆ ಆಸಕ್ತಿದಾಯಕ ಮುಖ್ಯಾಂಶಗಳು

  • ಕ್ರಿ.ಶ 1367 ರಲ್ಲಿ ನಿರ್ಮಿಸಲಾಗಿದ ಜಾಮಿಯಾ ಮಸೀದಿಯನ್ನು ಪರ್ಷಿಯನ್ ವಾಸ್ತುಶಿಲ್ಪಿ ರಫಿ ವಿನ್ಯಾಸಗೊಳಿಸಿದ್ದಾರೆ
  • ಪ್ರಾರ್ಥನೆಗೆ ಮುಂಚಿತವಾಗಿ ಸಂದರ್ಶಕರು ಕೈ ಕಾಲು ತೊಳೆದುಕೊಳ್ಳಲು ಎರಡು ದೊಡ್ಡ ಕಪ್ಪು ಕಲ್ಲಿನ ನೀರಿನ ತೊಟ್ಟಿಗಳು ಪ್ರವೇಶದ್ವಾರದ ಬಳಿಯಿದೆ.
  • 50 ಅಡಿ ಎತ್ತರದ ಮುಖ್ಯ ದ್ವಾರ ಮತ್ತು ಮಸೀದಿಗೆ ಅಡ್ಡಲಾಗಿ 250 ಕಮಾನುಗಳು
  • ಕೇಂದ್ರದಲ್ಲಿ ಒಂದು ದೊಡ್ಡ ಗುಮ್ಮಟ, ಪ್ರತಿ ಮೂಲೆಯಲ್ಲಿ ನಾಲ್ಕು ಮಧ್ಯಮ ಗಾತ್ರದ ಗುಮ್ಮಟಗಳು ಮತ್ತು 107 ಸಣ್ಣ ಗುಮ್ಮಟಗಳನ್ನು ಒಳಗೊಂಡಿರುವ ಮೇಲ್ ಛಾವಣಿ

ಸಮಯ: ಕಲಬುರಗಿಯ ಜಾಮಿಯಾ ಮಸೀದಿಯನ್ನು ಶನಿವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪ್ರವೇಶಿಸಬಹುದು.

ಹತ್ತಿರದಲ್ಲಿ: ಕಲಬುರಗಿಯೊಂದಿಗೆ ಯಾದಗಿರಿ ಕೋಟೆ (85 ಕಿ.ಮೀ), ಬಸವಕಲ್ಯಾಣಕ್ಕೆ (82 ಕಿ.ಮೀ) ಭೇಟಿ ನೀಡಬಹುದಾಗಿದೆ. 

ಕಲಬುರಗಿ ತಲುಪುವುದು ಹೇಗೆ? ಕಲಬುರಗಿ ಬೆಂಗಳೂರಿನಿಂದ 575 ಕಿ.ಮೀ ದೂರದಲ್ಲಿದೆ. ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದೆ, ನಗರ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ, ವಾರದಲ್ಲಿ 3 ಬಾರಿ ಬೆಂಗಳೂರಿನಿಂದ ವಿಮಾನ ಹಾರಾಟವಿದೆ. ಬೀದರ್ ಕಲಬುರಗಿಯಿಂದ 110 ಕಿ.ಮೀ ದೂರದಲ್ಲಿರುವ ಮತ್ತೊಂದು ವಿಮಾನ ನಿಲ್ದಾಣವಾಗಿದೆ. ಕಲಬುರಗಿಯಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಉತ್ತಮ ಬಸ್ ಸಂಪರ್ಕವಿದೆ.

ವಸತಿ: ಕಲಬುರಗಿ ಪಟ್ಟಣದಲ್ಲಿ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳಿವೆ.

Tour Location

Leave a Reply

Accommodation
Meals
Overall
Transport
Value for Money

Screen Reader A- A A+