Karnataka logo

Karnataka Tourism
GO UP
Chitradurga Fort

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದು ಇಂದಿಗೂ ಎಪ್ಪತ್ತೈದು ವಸಂತಗಳು ಕಳೆದಿವೆ. ಈ ಅಮೋಘ ಸಂದರ್ಭವನ್ನು ಸ್ಮರಣೀಯವಾಗಿಸಲು ಭಾರತದ ಎಲ್ಲ ರಾಜ್ಯಗಳಲ್ಲಿ ಸ್ವಾತಂತ್ಯದ ಅಮೃತ ಮಹೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕವೂ ತನ್ನ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು :ಸ್ವಾತಂತ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ನೆನೆಪಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಇತರ ರಾಜ್ಯಗಳಂತೆ ಕರ್ನಾಟಕವೂ ಸ್ವಾತಂತ್ರ್ಯ ಹೋರಾಟದ ಧೈರ್ಯಶಾಲಿ ಕಥೆಗಳನ್ನು ಹೊಂದಿದೆ. ರಾಷ್ಟ್ರೀಯ ನಾಯಕರಿಂದ ಪ್ರಭಾವಿತ ಮತ್ತು ಸ್ಫೂರ್ತಿ ಪಡೆದ ಕರ್ನಾಟಕವು ದೂರದೃಷ್ಟಿಯ ನಾಯಕರನ್ನು ಹೊಂದಿತ್ತು.ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಇಸೂರು ಎಂಬ ಸಣ್ಣ ಹಳ್ಳಿಯು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಘೋಷಿಸಿದ ದೇಶದ ಮೊದಲ ಗ್ರಾಮವಾಗಿದೆ.

ಟಿಪ್ಪು ಅರಮನೆ-ಬೆಂಗಳೂರು

ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿದಾಯಕ ಕಥೆಗಳು

ಕರ್ನಾಟಕವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇಲ್ಲಿನ ಅನೇಕ ಸ್ಥಳಗಳು ಸ್ವಾತಂತ್ರ್ಯ ಹೋರಾಟದ ವೀರಗಾಥೆಗಳನ್ನು ಸಾರುತ್ತವೆ. ನಮ್ಮ ಕರ್ನಾಟಕವು ಅನೇಕ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮವನ್ನು ನೀಡಿದೆ.ಕ್ವಿಟ್ ಇಂಡಿಯಾ ಚಳುವಳಿ ನಂತರ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಯಿತು . ಈ ಸಂದರ್ಭದಲ್ಲಿ ಚಿತ್ರದುರ್ಗ, ಬೆಳಗಾವಿ, ಧಾರವಾಡ, ಮಂಗಳೂರು ಮತ್ತು ಮೈಸೂರು ಅತ್ಯಂತ ಕ್ರಿಯಾಶೀಲ ಜಿಲ್ಲೆಗಳಾಗಿದ್ದವು . ಈ ಸಮಯದಲ್ಲಿ ಕರ್ನಾಟಕದ ಅನೇಕ ವೀರಪುರುಷರು ಮತ್ತು ಮಹಿಳೆಯರು ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡು ಕೆಚ್ಚೆದೆಯ ಹೋರಾಟ ನಡೆಸಿದರು.

ವಿದುರಾಶ್ವಥ- ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್

ಗೌರಿಬಿದುನೂರಿನಲ್ಲಿರುವ ಅಂಕೋಲಾ ಗ್ರಾಮವು ತನ್ನ ಸ್ವತಂತ್ರ ಹೋರಾಟದ ಕಥೆಗಳಿಂದಲೇ ಹೆಸರುವಾಸಿ ಆಗಿದೆ. ಈ ಗ್ರಾಮವನ್ನು ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ಎಂದು ಕರೆಯಲಾಗುತ್ತದೆ. ಇಲ್ಲಿ ಏಪ್ರಿಲ್ 25, 1938 ರಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಹಿಂಸಾಚಾರದ ಗೋಲೀಬಾರನ್ನು ನಡೆಸಲಾಯಿತು. ಈ ಸಮಯದಲ್ಲಿ 35ಕ್ಕೂ ಹೆಚ್ಚು ಜನರು ಈ ಗೋಲಿಬಾರನಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದು 1919 ರ, ಏಪ್ರಿಲ್ 13 ರಂದು ನಡೆದ ಪಂಜಾಬಿನ “ಜಲಿಯನ್ ವಾಲಾ ಬಾಗ್,” ಹತ್ಯಾಕಾಂಡದ ಕ್ರೌರ್ಯವನ್ನು ನೆನಪಿಸುತ್ತದೆ. ವಿದುರಾಶ್ವಥ ಹುತಾತ್ಮರ ಸ್ಮರಣಿಗಾಗಿ 1973 ರಲ್ಲಿ ಇಲ್ಲಿ ಹುತಾತ್ಮರ ಸ್ಮಾರಕವನ್ನು ನಿರ್ಮಿಸಲಾಯಿತು.ಹುತಾತ್ಮರ ಹೆಸರನ್ನು ಸ್ಮಾರಕ ಕಲ್ಲಿನ ಕಂಬದ ಮೇಲೆ ಕೆತ್ತಲಾಗಿದೆ.

ಇಲ್ಲಿಗೆ ತಲುಪುವುದು ಹೇಗೆ?
ವಿದುರಾಶ್ವಥ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಒಂದು ಪುಟ್ಟ ಗ್ರಾಮವಾಗಿದೆ. ಇದು ಬೆಂಗಳೂರಿನಿಂದ 90 ಕಿಮೀ ದೂರದಲ್ಲಿದೆ ಮತ್ತು ತಲುಪಲು ಸುಮಾರು 2 ಗಂಟೆ ತೆಗೆದುಕೊಳ್ಳುತ್ತದೆ.
ಬೆಂಗಳೂರು ತಲುಪಲು ಇಲ್ಲಿ ಕ್ಲಿಕ್ ಮಾಡಿ!

ಮೈಸೂರು

ಮೈಸೂರು ಹುಲಿ ಎಂದೂ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿದನು. ಅವರ ಆಡಳಿತದ ಪ್ರಮುಖ ನಗರ ಶ್ರೀರಂಗಪಟ್ಟಣ. ಆದಾಗ್ಯೂ ಅವರ ಹೋರಾಟದ ಕಥೆಗಳು ಮತ್ತು ನೆನಪುಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಣಬಹುದು.
ಮೈಸೂರು ಕುರಿತು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

ಬೆಳಗಾಂವಿ

ಬೆಳಗಾಂವಿ

ಕರ್ನಾಟಕದ ಬೆಳಗಾಂವಿ ಸ್ವತಂತ್ರ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.ಚನ್ನಪ್ಪ ವಾಲಿ, ಅಣ್ಣು ಗುರುಜಿ, ಗಂಗಾಧರರಾವ ದೇಶಪಾಂಡೆಯಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಬೆಳಂಗಾವಿಯ ಕೊಡುಗೆ ಆಗಿದ್ದಾರೆ.
ಬೆಳಗಾಂವಿ ಕುರಿತು ತಿಳಿದುಕೊಳ್ಳಲು  ಕ್ಲಿಕ್ ಮಾಡಿ!

ಚಿತ್ರದುರ್ಗ

ಚಿತ್ರದುರ್ಗ ಕೋಟೆ

ಮತ್ತೊಬ್ಬ ವೀರ ಮಹಿಳಾ ಯೋಧ ಒನಕೆ ಓಬವ್ವ, ಚಿತ್ರದುರ್ಗ ಸಾಮ್ರಾಜ್ಯದ ಮೇಲೆ ಬ್ರಿಟಿಷ್ ಸೈನ್ಯ ದಾಳಿ ಮಾಡಿದಾಗ ಏಕಾಂಗಿಯಾಗಿ ಹೋರಾಡಿ ತನ್ನ ಶೌರ್ಯವನ್ನು ಜಗತ್ತಿಗೆ ತೋರಿಸಿದಳು. ಅವಳ ಶೌರ್ಯವನ್ನು ಸ್ಮರಿಸಲು ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಲೇ ಬೇಕು.
ಚಿತ್ರದುರ್ಗದ ಕುರಿತು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

ಮಂಗಳೂರು

ಮಂಗಳೂರು ಅನೇಕ ಸ್ವಾತಂತ್ರ್ಯ ಹೋರಾಟಗಳ ಮತ್ತು ವ್ಯಕ್ತಿಗಳ ನೆಲೆ ಆಗಿದೆ. ಕರ್ನಾಟಕದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮಂಗಳೂರಿನ ಕಾರ್ನಾಡ್ ಸದಾಶಿವ ರಾವ್ ಅವರು ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಭಾವನ್ನು ಸ್ಥಾಪಿಸಿದರು. ಅವರು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮೊದಲಿಗರು ಎಂದು ಅವರು ಪ್ರಸಿದ್ಧರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರ ಮತ್ತು ಮಂಗಳೂರಿನ ಕೆಎಸ್ ರಸ್ತೆಗೆ ಕಾರ್ನಾಡ್ ಸದಾಶಿವ ರಾವ್ ಅವರ ಗೌರವಾರ್ಥವಾಗಿ ಹೆಸರಿಡಲಾಗಿದೆ. ಮಂಗಳೂರಿನ ಮಹಾನ್ ಮಹಿಳಾ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅವರು ನಮಗೆ ಸ್ವಾತಂತ್ರ್ಯ ದೊರಕಿದ ನಂತರ ಮಹಿಳೆಯರಿಗಾಗಿ ಕರಕುಶಲ, ಕೈಮಗ್ಗ ಚಟುವಟಿಕೆಗಳನ್ನು ಉತ್ತೇಜಿಸಿ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢಗೊಳಿಸಿದರು.
ಮಂಗಳೂರು ಕುರಿತು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

ಕೂರ್ಗ್, ಸನ್ನಿ ಸೈಡ್ ಮ್ಯೂಸಿಯಂ

ಕೂರ್ಗ್‌ನಲ್ಲಿರುವ ಸನ್ನಿ ಸೈಡ್ ಮ್ಯೂಸಿಯಂ ನಿಮ್ಮನ್ನು ಬೆರಗುಗೊಳಿಸುವ ಸ್ಥಳವಾಗಿದೆ. ಇಲ್ಲಿ ಅನೇಕ ಯುದ್ಧದ ಕಥೆಗಳು ಮತ್ತು ನೆನಪುಗಳ ಸ್ಮಾರಕಗಳು ಈ ವಸ್ತುಸಂಗ್ರಹಾಲಯದಲ್ಲಿ ಸ್ಥಾನ ಪಡೆದಿವೆ. ಆರ್ಮಿ ಟ್ಯಾಂಕ್ ‘ಹಿಮ್ಮತ್’ ಮತ್ತು 1971 ರ ಇಂಡೋ-ಪಾಕಿಸ್ತಾನ ಯುದ್ಧದ MIG-21 ಮ್ಯೂಸಿಯಂನ ಪ್ರಮುಖ ಆಕರ್ಷಣೆಗಳಾಗಿವೆ. ಈ ವಸ್ತುಸಂಗ್ರಹಾಲಯದಲ್ಲಿ ಲೈಟ್ ಮೆಷಿನ್ ಗನ್ಸ್, ಮಧ್ಯಮ ಮೆಷಿನ್ ಗನ್ ಮತ್ತು ಸ್ವಯಂ ಲೋಡಿಂಗ್ ರೈಫಲ್‌ಗಳು,7.62, .38 ರೈಫಲ್, 303 ಬೋರ್ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, 32 ಎಂಎಂ ರೈಫಲ್ ಮತ್ತು 38 ಎಂಎಂ ರೈಫಲ್‌ಗಳಿವೆ. ಕರ್ನಾಟಕವು ಖಂಡಿತವಾಗಿ ಅನೇಕ ಸ್ವಾತಂತ್ರ್ಯ ಹೋರಾಟ ಮತ್ತು ಯುದ್ಧದ ಕಥೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ನಿಮ್ಮ ಪ್ರವಾಸವನ್ನು ನೀವು ಯೋಜಿಸಿದಾಗಲೆಲ್ಲಾ ಈ ಸ್ಥಳಗಳಿಗೆ ಭೇಟಿ ನೀಡಿ. ನಮ್ಮ ಹಿರಿಯರು ನಮ್ಮ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗವನ್ನು ಸ್ಮರಿಸಿ.
ಕೂರ್ಗ್ಕು ರಿತು ತಿಳಿದುಕೊಳ್ಳಲು ಕ್ಲಿಕ್ ಮಾಡಿ!

ಅಂಕೋಲಾ ಉಪ್ಪಿನ ಸತ್ಯಾಗ್ರಹ

ಅಂಕೋಲಾ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮತ್ತೊಂದು ಹೆಗ್ಗುರುತು ಆಗಿದೆ. 1930 ರಲ್ಲಿ ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯ ಯಶಸ್ಸಿನ ನಂತರ, ಕರ್ನಾಟಕದ ಕಾಂಗ್ರೆಸ್ಸಿಗರು ಕರಾವಳಿ ಪಟ್ಟಣದಲ್ಲಿ ಸತ್ಯಾಗ್ರಹ ಮಾಡಲು ನಿರ್ಧರಿಸಿದರು. ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಕೌಜಲಗಿ ಅವರು ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲಾ ಅತ್ಯಂತ ಸೂಕ್ತವಾದ ಸ್ಥಳ ಎಂದು ವರದಿ ಮಾಡಿದರು. ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿರುವ ಅಂಕೋಲಾ, ಪುರಾತನ ದೇವಾಲಯಗಳು, ಕಡಲತೀರಗಳು ಮತ್ತು ಶ್ರೀಮಂತ ಪ್ರಾಚೀನತೆಯ ನೆಲೆಯಾಗಿದ್ದು ಇಲ್ಲಿ ನಡೆದ ಐತಿಹಾಸಿಕ ಸ್ವಾತಂತ್ರ್ಯ ಘಟನೆಗಳು ಅಂಕೋಲಾವನ್ನು ‘ಕರ್ನಾಟಕದ ಬಾರ್ಡೋಲಿ’ ಎಂದು ಹೆಸರಿಸಲು ಕಾರಣವಾಯಿತು.
ಉತ್ತರ ಕನ್ನಡ ಕುರಿತು ತಿಳಿದುಕೊಳ್ಳಲು ಇಲ್ಲಿಕ್ಲಿಕ್ ಮಾಡಿ

ಫ್ರಿಡಮ್ ಪಾರ್ಕ್, ಬೆಂಗಳೂರು

ಬೆಂಗಳೂರಿನ ಪ್ರಸಿದ್ಧ ಫ್ರೀಡಂ ಪಾರ್ಕ್ ಈ ಮುಂಚೆ 1866 ರಲ್ಲಿ ಬ್ರಿಟಿಷ್ ಸರ್ಕಾರದಿಂದ ನಿರ್ಮಿಸಲಾದ ಸೆಂಟ್ರಲ್ ಜೈಲ್ ಆಗಿತ್ತು. ಸ್ವಾತಂತ್ರ್ಯ ಚಳವಳಿಯು ವೇಗವನ್ನು ಪಡೆದುಕೊಂಡಂತೆ, ಈ ಜೈಲಿನಲ್ಲಿ ಹೆಚ್ಚು ಹೆಚ್ಚು ಕೈದಿಗಳನ್ನು ಇರಿಸಲಾಗುತ್ತಿತ್ತು. ಇದು ಸುಮಾರು 2000 ದವರೆಗೂ ಸೆಂಟ್ರಲ್ ಜೈಲ್ ಆಗಿ ಬಳಕೆಯಲ್ಲಿತ್ತು ಆದರೆ ನಂತರ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಫ್ರಿಡಮ್ ಪಾರ್ಕ್ ಎಂದು ಹೆಸರಿಸಲಾಯಿತು. ಫ್ರೀಡಂ ಪಾರ್ಕ್ ಇಂದು ಅತ್ಯಾಧುನಿಕ ಮಾಹಿತಿ ಕಾರಿಡಾರ್, ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯನ್ನು ಹೊಂದಿದೆ. ಈ ಐತಿಹಾಸಿಕ ಸ್ಥಳದ ಒಂದು ಭಾಗವನ್ನು ಈಗ ಪ್ರತಿಭಟನೆಗಳು ಮತ್ತು ರ್ಯಾಲಿಗಳಿಗಾಗಿ ಗುರುತಿಸಲಾಗಿದೆ. ಇದರಿಂದ ನಗರದಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಬಹುದು.
ಫ್ರಿಡಮ್ ಪಾರ್ಕ್ ಕುರಿತು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.