GO UP

ಮೈಸೂರು ಮೃಗಾಲಯ

separator
Scroll Down

ಮೈಸೂರು ಮೃಗಾಲಯ ಕರ್ನಾಟಕದ ಅತ್ಯಂತ ಜನಪ್ರಿಯ ಮೃಗಾಲಯವಾಗಿದೆ ಮತ್ತು ಇದು ಭಾರತದ ಅತ್ಯಂತ ಹಳೆಯ ಪ್ರಾಣಿಸಂಗ್ರಹಾಲಯವಾಗಿದೆ. ಮೈಸೂರು ಮೃಗಾಲಯವು 168 ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಮೈಸೂರು ಮೃಗಾಲಯದ ಅಧಿಕೃತ ಹೆಸರು ಶ್ರೀ ಚಾಮರಾಜೇಂದ್ರ ವನ್ಯಜೀವಿ ಉದ್ಯಾನವನ. ಮೈಸೂರಿನಲ್ಲಿ ಮೃಗಾಲಯವು ಪ್ರಾಣಿ ಪ್ರಿಯರು ಮತ್ತು ಮಕ್ಕಳಿರುವ ಕುಟುಂಬಗಳು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಮೈಸೂರು ಮೃಗಾಲಯದಲ್ಲಿರುವ ಜನಪ್ರಿಯ ಪ್ರಾಣಿಗಳು:

  • ಹುಲಿಗಳು (ಬಿಳಿ ಹುಲಿ ಸೇರಿದಂತೆ)
  • ಸಿಂಹಗಳು
  • ಜಿರಾಫೆ
  • ಜೀಬ್ರಾ
  • ಚಿರತೆಗಳು
  • ರೆನೋಸ್ ಖಡ್ಗಮೃಗಗಳು
  • ಪಕ್ಷಿಗಳು
  • ಆನೆಗಳು
  • ನೀರಾನೆಗಲು (ಹಿಪಪಾಟಮಸ್)

ಪ್ರಾಣಿಗಳನ್ನು ದತ್ತು ಪಡೆಯುವ ಅವಕಾಶ: ಮೈಸೂರು ಮೃಗಾಲಯ (Mysore Zoo) ದತ್ತು ಕಾರ್ಯಕ್ರಮವನ್ನು ಹೊಂದಿದೆ. ಸಂದರ್ಶಕರು ಪ್ರಾಣಿಗಳ ಆರೈಕೆ ವೆಚ್ಚಗಳಿಗೆ ಹಣವನ್ನು ನೀಡಿ ಪ್ರಾಯೋಜಿಸಬಹುದಾಗಿದೆ. 

ಸಮಯ: ಮೈಸೂರು ಮೃಗಾಲಯವು (Mysore Zoo) ಮಂಗಳವಾರ (ವಾರದ ರಜಾದಿನ) ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ. ಮುಂಜಾನೆ ಅಥವಾ ಮಧ್ಯಾಹ್ನ 3 ಗಂಟೆಯ ನಂತರ ಪಕ್ಷಿಗಳು ಮತ್ತು ಪ್ರಾಣಿಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಬಿಸಿಲು ಜೋರಾಗಿದ್ದಾಗ ಮಧ್ಯಾಹ್ನದ ಸಮಯ ಪ್ರಾಣಿಗಳು ವಿಶ್ರಾಂತಿ ಪಡೆಯಬಯಸುತ್ತವೆ. ಗರಿಷ್ಠ ಅನುಭವಕ್ಕಾಗಿ ಎರಡು ಮೂರು ಗಂಟೆಗಳ ಕಾಲ ಮೃಗಾಲಯದ ವೀಕ್ಷಣೆಗೆ ಮೀಸಲಿಡಬಹುದಾಗಿದೆ. 

ತಲುಪುವುದು ಹೇಗೆ: ಮೈಸೂರು ಬೆಂಗಳೂರಿನಿಂದ 150 ಕಿ.ಮೀ ದೂರದಲ್ಲಿದೆ. ಮೈಸೂರು ವಾಯು, ರೈಲು ಮತ್ತು ರಸ್ತೆ ಮೂಲಕ  ಉತ್ತಮ ಸಂಪರ್ಕ ಹೊಂದಿದೆ. ಮೈಸೂರು ಮೃಗಾಲಯವು ಮೈಸೂರು ಬಸ್ ನಿಲ್ದಾಣದಿಂದ 2.5 ಕಿ.ಮೀ, ಮೈಸೂರು ರೈಲ್ವೆ ನಿಲ್ದಾಣದಿಂದ 3.5 ಕಿ.ಮೀ ಮತ್ತು ಮೈಸೂರು ವಿಮಾನ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ. ಮೈಸೂರು ಮೃಗಾಲಯವನ್ನು ಆಟೋ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದಾಗಿದೆ. 

ವಸತಿ: ಮೈಸೂರು ನಗರದಲ್ಲಿ ಹಲವು ಬಜೆಟ್ ಹೋಟೆಲ್‌ಗಳು ಮತ್ತು ಐಷಾರಾಮಿ ರೆಸಾರ್ಟ್‌ಗಳಿವೆ.

     

    Tour Location

     

    Leave a Reply

    Accommodation
    Meals
    Overall
    Transport
    Value for Money