Karnataka logo

Karnataka Tourism
GO UP
ranganathaswamy temple

ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ

separator
  /  ಬ್ಲಾಗ್   /  ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ
ರಂಗನಾಥಸ್ವಾಮಿ ದೇವಸ್ಥಾನ

ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣವು ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಒಂದು. ಕಾವೇರಿ ನದಿಯ ದ್ವೀಪವಾದ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಹೆಸರುವಾಸಿ ಆಗಿದೆ. ಇದು ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾಗಿದೆ. ಇದು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರ (ವಿಷ್ಣುಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳು) ಎಂದು ಪರಿಗಣಿಸಲಾಗಿದೆ. ಪ್ರಧಾನ ದೇವತೆಯನ್ನು ಆದಿ ರಂಗ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಮೇಲ್ದಂಡೆಯ ಮೊದಲ ದೇವಾಲಯವಾಗಿದೆ.

ದೇವಾಲಯವು ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ, ತನ್ನ ಉತ್ತಮ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಹಿಂದೂ ವಾಸ್ತುಶಿಲ್ಪದ ಒಂದು ಅದ್ಭುತ ಉದಾಹರಣೆಯಾಗಿದೆ. ದೇವಾಲಯವು ಪ್ರವೇಶದ್ವಾರದಲ್ಲಿ ಗರ್ಭಗುಡಿಯ ಸುತ್ತಲೂ ಎರಡು ಬೃಹತ್ ಪ್ರಾಕಾರಗಳೊಂದಿಗೆ ಗಮನಾರ್ಹವಾದ ಗೋಪುರವಿದೆ. ಕಂಬಗಳಿಂದ ಕೂಡಿದ ಮಂಟಪವು ಮುಖ್ಯ ದೇಗುಲದ ಅಡಿಪಾಯವಾಗಿದೆ. ಈ ಕಂಬಗಳನ್ನು ಸಂಕೀರ್ಣವಾಗಿ ಕೆತ್ತಲಾಗಿದೆ, ಹಿಂದಿನ ಯುಗದ ಜನರ ಅಸಾಧಾರಣ ಶಿಲ್ಪ ಕರಕುಶಲತೆಯನ್ನು ಪ್ರದರ್ಶಿಸುತ್ತದೆ.

ಶೀರಂಗನಾಥಸ್ವಾಮಿ ದೇವಾಲಯವು ನೋಡಲು ಸುಂದರವಾಗಿದ್ದು ಇಲ್ಲಿ ಭಗವಾನ್ ವಿಷ್ಣುವಿನ ವಿಗ್ರಹವು ಒರಗಿರುವ ಭಂಗಿಯಲ್ಲಿ ಇದೆ. ವಿಗ್ರಹಗಳು ಆದಿಶೇಷನ ಮೇಲೆ ಮಲಗಿರುವ ಶ್ರೀರಂಗನಾಥಸ್ವಾಮಿಯನ್ನು ನೋಡುವುದೆಂದರೇ ಕಣ್ಣಿಗೆ ಹಬ್ಬವೇ ಸರಿ. ಶ್ರೀರಂಗನಾಥನ ಪಾದದ ಬಳಿ ಲಕ್ಷ್ಮಿ ದೇವಿಯ ವಿಗ್ರಹವಿದೆ. ಅಲ್ಲದೆ, ನೀವು ದೇವಾಲಯದ ಒಳಗಡೆ ನರಸಿಂಹ, ಗರುಡ, ಗೋಪಾಲಕೃಷ್ಣ ಮತ್ತು ಹನುಮಾನ್ ದೇವರುಗಳಿಗೆ ಸಮರ್ಪಿತವಾದ ವಿವಿಧ ಸಣ್ಣ ದೇವಾಲಯಗಳನ್ನು ಸಹ ನೋಡಬಹುದು.

ಈ ದೇವಾಲಯವು ಕಾವೇರಿ ನದಿಯಿಂದ ಸುತ್ತುವರಿದಿದೆ, ಯಾತ್ರಿಕರು ದೇವಾಲಯವನ್ನು ಪ್ರವೇಶಿಸುವ ಮೊದಲು ಈ ನದಿಯಲ್ಲಿ ಸ್ನಾನ ಮಾಡುತ್ತಾರೆ. ಯಾತ್ರಿಕರು ವರ್ಷವಿಡೀ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.ದೇವಾಲಯದ ವೈಭವವನ್ನು ವೀಕ್ಷಿಸಲು ಉತ್ತಮ ಸಮಯವೆಂದರೆ ಇಲ್ಲಿ ಆಚರಿಸಲಾಗುವ ವಿವಿಧ ಹಬ್ಬಗಳು. ಬಂಗಾರದ ಗರುಡೋತ್ಸವ, ಶ್ರೀರಂಗ ಜಯಂತಿ, ಸುಧಾ ಪೂರ್ಣಿಮಾ ಮತ್ತು ಉಯ್ಯಾಲೋತ್ಸವ ಇಲ್ಲಿ ಆಚರಿಸಲಾಗುವ ಕೆಲವು ಪ್ರಮುಖ ಹಬ್ಬಗಳಾಗಿವೆ. ಈ ಆಚರಣೆಗಳ ಸಮಯದಲ್ಲಿ, ದೇಶದ ವಿವಿಧ ಭಾಗಗಳಿಂದ ಶ್ರೀರಂಗನ ಆಶೀರ್ವಾದ ಪಡೆಯಲು ಯಾತ್ರಾರ್ಥಿಗಳ ದೊಡ್ಡ ಸಾಲುಗಳು ಇಲ್ಲಿಗೆ ಬರುತ್ತವೆ. ನೀವು ಶ್ರೀರಂಗಪಟ್ಟಣಕ್ಕೆ ಜುಲೈ ಮತ್ತು ಸೆಪ್ಟೆಂಬರ್ ಮಾನ್ಸೂನ್ ತಿಂಗಳುಗಳಲ್ಲಿ ಸಹ ಭೇಟಿ ನೀಡಬಹುದು. ಈ ಋತುವಿನಲ್ಲಿ ಕಾವೇರಿ ನದಿಯು ತುಂಬಿ ಹರಿಯುತ್ತದೆ. ಈ ದೃಶ್ಯ ನೋಡಲು ನಯನ ಮನೋಹರವಾಗಿರುತ್ತದೆ. ನೀವು ದೇವಾಲಯಗಳ ಪ್ರವಾಸದಲ್ಲಿದ್ದರೆ, ನೀವು ಇಲ್ಲಿ ಭೇಟಿ ಕೊಡುವುದನ್ನು ಮರೆಯಲೇ ಬೇಡಿ.