Karnataka Tourism
GO UP

ಬ್ಲಾಗ್

ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಬೆಳಗಾವಿಯು ಅನೇಕ ನೈಸರ್ಗಿಕ ಅದ್ಭುತಗಳಿಗೆ ನೆಲೆಯಾಗಿದೆ. ಉತ್ತರ ಕರ್ನಾಟಕದ ಐತಿಹಾಸಿಕ ಪಟ್ಟಣವಾಗಿರುವ ಬೆಳಗಾವಿಯನ್ನು ಹಿಂದೆ ಬೆಳಗಾಮ್ ಎಂದು ಕರೆಯಲಾಗುತ್ತಿತ್ತು, ಇದು ಮಲೆನಾಡು ಪ್ರದೇಶದಲ್ಲಿದ್ದು ವರ್ಷವಿಡೀ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಬೆಳಗಾವಿಯು ಅನೇಕ ಐತಿಹಾಸಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ನೆಲೆಯಾಗಿದೆ.

ಸಾಂಸ್ಕೃತಿಕ,ಪಾರಂಪಾರಿಕ, ಶೈಕ್ಷಣಿಕ ಮತ್ತು ಐತಿಹಾಸಿಕ ಪ್ರಸಿದ್ಧವಾಗಿರುವ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಪ್ರವಾಸಿಗರಿಗೆ ಬೇಕಾದ ಎಲ್ಲವನ್ನೂ ಹೊಂದಿದೆ. ಧಾರವಾಡವು ಚಾಲುಕ್ಯರು, ಬಹಮನಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿಗಳು, ಮೊಘಲರು, ಶಿವಾಜಿ ಮಹಾರಾಜರು, ಪೇಶ್ವೆ ಬಾಲಾಜಿ ರಾವ್, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತ್ತು. ಧಾರವಾಡವು ಶೈಕ್ಷಣಿಕ ಮತ್ತು ಕೃಷಿ ವಿಜ್ಞಾನಗಳ ಕೇಂದ್ರವಾಗಿರುವುದರಿಂದ ಇಲ್ಲಿ ನೀವು

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ ರಾಮನಗರವು ‘ಸಿಲ್ಕ್ ಸಿಟಿ’ ಎಂದೂ ಜನಪ್ರಿಯವಾಗಿದೆ.

50 ಮಸೀದಿಗಳು, 20ಕ್ಕೂ ಹೆಚ್ಚು ಸಮಾಧಿಗಳು, ಕೆಲವು ಅರಮನೆಗಳು ಮತ್ತು ಅವಶೇಷಗಳನ್ನು ಹೊಂದಿರುವ ವಿಜಯಪುರವು, ರಾಜ್ಯದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ. ಹಿಂದೆ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ವಿಜಯಪುರ, ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಸೋಲಾಪುರ ಪಟ್ಟಣಗಳಿಗೆ ಹತ್ತಿರದಲ್ಲಿದೆ. ನಿಸ್ಸಂದೇಹವಾಗಿ ವಿಜಯಪುರವು ನೋಡಲು ಆಸಕ್ತಿದಾಯಕವಾದ ಅನೇಕ ಸ್ಥಳಗಳನ್ನು

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಪ್ರಶಾಂತ ಮತ್ತು ಸುಂದರವಾದ ಗಿರಿಧಾಮಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ‘ಕರ್ನಾಟಕದ ಕಾಫಿ ನಾಡು’ ಎಂದೂ ಕರೆಯಲ್ಪಡುವ ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಪ್ರಸಿದ್ಧ ಪ್ರದೇಶಗಳಿವೆ. ಪ್ರಾಚೀನ ದೇವಾಲಯಗಳು, ಜಲಪಾತಗಳು, ಹಸಿರು ಕಾಫಿ ತೋಟಗಳು, ಚಾರಣ ಪ್ರದೇಶಗಳು ಅಭಯಾರಣ್ಯಗಳು, ವನ್ಯಜೀವಿ ಪ್ರದೇಶಗಳು ಸೇರಿದಂತೆ ಚಿಕ್ಕಮಗಳೂರು ಎಲ್ಲವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.

ನೀವು ತುಮಕೂರಿನಲ್ಲಿ ಎತ್ತರದ ಬೆಟ್ಟಗಳು, ಚಾರಣ ಪ್ರದೇಶಗಳು, ಭವ್ಯವಾದ ಕೋಟೆಗಳು ಮತ್ತು ಪ್ರಾಚೀನ ದೇವಾಲಯಗಳನ್ನು ನೋಡಬಹುದು. ಬೆಂಗಳೂರಿನಿಂದ ಇಲ್ಲಿಗೆ ವಾರಾಂತ್ಯದ ರಜೆಯನ್ನು ಕಳೆಯಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ. ತುಮಕೂರು ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು, ಯಾತ್ರಿಕರು, ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಸಾಕಷ್ಟು ಆಕರ್ಷಕ ಸ್ಥಳಗಳನ್ನು ಹೊಂದಿದೆ. ತುಮಕೂರು ನಗರವು ಪ್ರಮುಖ ಶಿಕ್ಷಣ ಕೇಂದ್ರವು ಹೌದು.

ಬೆಂಗಳೂರಿನ ಕೆರೆಗಳು ಬೆಂಗಳೂರಿಗರ ಮತ್ತು ಬೆಂಗಳೂರಿಗೆ ಭೇಟಿ ನೀಡುವ ಎಲ್ಲರ ಆಕರ್ಷಣೆಯ ಸ್ಥಳವಾಗಿವೆ. ಇವುಗಳು ಫಿಟ್‌ನೆಸ್ ಪ್ರೀಕ್ಸ್, ಯೋಗ ಉತ್ಸಾಹಿಗಳು, ಓಟಗಾರರು ಮತ್ತು ಜಾಗಿಂಗ್ ಮಾಡುವವರಿಗೆ ಒನ್-ಸ್ಟಾಪ್ ಸ್ಥಳವಾಗಿದೆ ಮತ್ತು ಪ್ರಶಾಂತತೆಯಲ್ಲಿ ಸಮಯ ಕಳೆಯಲು ಬಯಸುವ ಜನರಿಗೆ ಇವುಗಳು ಸೂಕ್ತವಾದ ಸ್ಥಳವಾಗಿದೆ.

ಬೀದರ್ ಐತಿಹಾಸಿಕ ನಗರ ಆಗಿದ್ದು ಇದನ್ನು ಸಾಮಾನ್ಯವಾಗಿ ‘ವಿಸ್ಪರಿಂಗ್ ಸ್ಮಾರಕಗಳ ನಗರ’ ಎಂದು ಕರೆಯಲಾಗುತ್ತದೆ ಮತ್ತು ವೈಭವಯುತ ಐತಿಹಾಸಿಕ ಗತಕಾಲದಿಂದ 60 ಕ್ಕೂ ಹೆಚ್ಚು ಸ್ಮಾರಕಗಳನ್ನು ಹೊಂದಿದೆ. ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ ಬೀದರ್ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಬೀದರ್ ನಗರವನ್ನು ಚಾಲುಕ್ಯರು, ಕಾಕತೀಯರು, ತುಘಲಕ್‌ಗಳು, ರಾಷ್ಟ್ರಕೂಟರು, ಬಹಮನಿ ಶಾಹಿ ಮತ್ತು ಹೈದರಾಬಾದಿ ನಿಜಾಮರಂತಹ

ಆಗಸ್ಟ್ ನಂತರದ ಅವಧಿಯು ವರ್ಷದ ಅತ್ಯುತ್ತಮ ಸಮಯವಾಗಿದ್ದು ಈ ತಿಂಗಳಿನಿಂದ ಹಬ್ಬಗಳ ಸರಣೆ ಆರಂಭವಾಗಲಿದೆ. ಬರಲಿವೆ. ಈ ಹಬ್ಬಗಳ ರಜೆಯಲ್ಲಿ ಪ್ರವಾಸಿಗರು ವಾರಾಂತ್ಯದ ಪ್ರವಾಸಗಳನ್ನು ಆನಂದಿಸಬಹುದು. ಕರ್ನಾಟಕ ರಾಜ್ಯವು ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು, ವಾರಾಂತ್ಯದಲ್ಲಿ ಯೋಜಿಸಬಹುದಾಗಿದೆ.

ನಮ್ಮ ಕರ್ನಾಟಕ ರಾಜ್ಯವು ತನ್ನ ಹಚ್ಚ ಹಸಿರು ಪ್ರಕೃತಿ, ಉಕ್ಕಿ ಹರಿಯುವ ಜಲಪಾತಗಳು, ಧುಮ್ಮಿಕ್ಕುವ , ಹರಿಯುವ ನದಿಗಳು, ಮಂಜು ಮುಸುಕಿದ ಬೆಟ್ಟಗಳು, ಬೀಚ್‌ಗಳು, ಕಾಡುಗಳು, ಜೀವ ವೈವಿಧ್ಯಗಳು ಮುಂತಾದವುಗಳಿಗಾಗಿ ಪ್ರಸಿದ್ಧವಾಗಿವೆ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳಗಳಿವೆ. ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗ ಎಲ್ಲರೂ ಪ್ರವಾಸದತ್ತ ಆಕರ್ಷಿತರಾಗುತ್ತಿದ್ದಾರೆ