Karnataka logo

Karnataka Tourism
GO UP
Image Alt

ರಾಮನಗರದ ಪ್ರೇಕ್ಷಣೀಯ ಸ್ಥಳಗಳು

separator
  /  ಬ್ಲಾಗ್   /  ರಾಮನಗರದ ಪ್ರೇಕ್ಷಣೀಯ ಸ್ಥಳಗಳು

ನೀವು ಬೆಂಗಳೂರಿನಿಂದ ಮೈಸೂರು ಅಥವಾ ಮಡಿಕೇರಿ ಕಡೆಗೆ ಪ್ರಯಾಣಿಸುವಾಗ ರಾಮನಗರಕ್ಕೆ ಬರಲೇ ಬೇಕು. ರಾಮನಗರವು ಹಲವು ಆಕರ್ಷಣೆಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.
ರೇಷ್ಮೆ ಸೀರೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವ ಏಷ್ಯಾ ಮತ್ತು ಭಾರತದಲ್ಲಿ ರೇಷ್ಮೆ ಕೋಕೂನ್‌ಗಳ ಅತಿದೊಡ್ಡ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿರುವ ರಾಮನಗರವು ‘ಸಿಲ್ಕ್ ಸಿಟಿ’ ಎಂದೂ ಜನಪ್ರಿಯವಾಗಿದೆ.
ರಾಮನಗರ ಜಿಲ್ಲೆ ಅನೇಕ ಬೆಟ್ಟಗಳು ಮತ್ತು ನದಿಗಳಿಗೆ ನೆಲೆಯಾಗಿದೆ ಮತ್ತು ಆದ್ದರಿಂದ ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ರಾಮನಗರದ ಚನ್ನಪಟ್ಟಣದ ಆಟಿಕೆಗಳಿಗೂ ಸಹ ಹೆಸರುವಾಸಿ ಆಗಿದೆ.
ರಾಮನಗರವು ಚಾರಣಿಗರ ಸ್ವರ್ಗವಾಗಿದೆ, ಪ್ರಾರಂಭಿಕರಿಂದ ಅನುಭವಿಗಳವರೆಗೆ ಹೀಗೆ ಎಲ್ಲರಿಗೂ ಇದು ಸ್ವರ್ಗವಾಗಿದೆ. ಸುಂದರವಾದ ಭೂದೃಶ್ಯಗಳ ಮೋಡಿಮಾಡುವ ನೋಟಗಳೊಂದಿಗೆ ಮಂಜು ಬೆಟ್ಟಗಳಲ್ಲಿ ಚಾರಣ ಮಾಡಲು ಎಲ್ಲರೂ ಇಷ್ಟಪಡುತ್ತಾರೆ.

ರಾಮನಗರದಲ್ಲಿರುವ ದೇವಾಲಯಗಳು

ರಾಮನಗರವು ಪುರಾಣಗಳಿಗೆ ಸಂಬಂಧಿಸಿದ ಬಹಳಷ್ಟು ನಂಬಿಕೆಗಳು ಮತ್ತು ಕಥೆಗಳನ್ನು ಹೊಂದಿದೆ. ವನವಾಸದ ಸಮಯದಲ್ಲಿ ಸ್ವಯಂ ಭಗವಾನ್ ರಾಮನೇ ಈ ಸ್ಥಳದಲ್ಲಿ ಕೆಲವು ಸಮಯಗಳವರೆಗೆ ವಾಸವಾಗಿದ್ದನು ಎಂದು ನಂಬಲಾಗಿದೆ. ನೀವು ಇಲ್ಲಿ ಭಗವಾನ್ ರಾಮನ ಉಪಸ್ಥಿತಿಯ ಪುರಾವೆಗಳನ್ನು ಹೊಂದಿರುವ ಅನೇಕ ದೇವಾಲಯಗಳನ್ನು ನೋಡಬಹುದಾಗಿದೆ.

ರಾಮದೇವರ ಬೆಟ್ಟ ದೇವಸ್ಥಾನ
ರಾಮದೇವರ ಬೆಟ್ಟದ ಮೇಲೆ ನೆಲೆಗೊಂಡಿರುವ ಈ ದೇವಾಲಯವು ಭಗವಾನ್ ಶಿವ, ಪಾರ್ವತಿ ದೇವಿ ಮತ್ತು ಭಗವಾನ್ ರಾಮನಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ತಲುಪಲು ನೀವು ಸುಮಾರು 400 ಮೆಟ್ಟಿಲುಗಳನ್ನು ಏರಬೇಕು. ಇಲ್ಲದಿದ್ದರೆ ಚಾರಣದ ಮೂಲಕ ನೀವು ಈ ದೇವಸ್ಥಾನವನ್ನು ತಲುಪಬಹುದು.
ಕಬ್ಬಾಳಮ್ಮ ದೇವಸ್ಥಾನ
Kabbalamna Temple

ಕಬ್ಬಾಳಮ್ಮ ದೇವಸ್ಥಾನ

ಕನಕಪುರದಿಂದ ಕೇವಲ 14 ಕಿಮೀ ದೂರದಲ್ಲಿರುವ, ಶಿವಲಿಂಗವನ್ನು ಹೋಲುವ ಬೆಟ್ಟವು ಕಬ್ಬಾಳಮ್ಮ ದೇವಿಯ ನೆಲೆಯಾಗಿದೆ. ಈ ದೇವತೆಯನ್ನು ಕಾಳಿಕಾದೇವಿ ಎಂದೂ ಕರೆಯುತ್ತಾರೆ. ಇಲ್ಲಿ ವಾರ್ಷಿಕ ಜಾತ್ರೆಯು ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯುತ್ತದೆ. ಈ ಉತ್ಸವದ ಸಮಯದಲ್ಲಿ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ರಂಗನಾಥ ಸ್ವಾಮಿ ದೇವಾಲಯ
Kabbalamna Temple

ರಂಗನಾಥ ಸ್ವಾಮಿ ದೇವಾಲಯ

ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯವು ಸ್ವರ್ಣಾದ್ರಿ ಪರ್ವತ ಬೆಟ್ಟದಲ್ಲಿದೆ . ವಿಜಯನಗರದಲ್ಲಿರುವ ಈ ದೇವಾಲಯವು ಬಹಳ ದೂರದಿಂದಲೂ ಗೋಚರಿಸುವ ಆಕರ್ಷಕ ರಾಜಗೋಪುರದಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಮಾಗಡಿ
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಈ ದೇವಾಲಯವನ್ನು 1712 ರಲ್ಲಿ ನಿರ್ಮಿಸಲಾಯಿತು. ಇದು 1638 ರಲ್ಲಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ಬೆಂಗಳೂರು ತೊರೆದು ಮಾಗಡಿಯನ್ನು ತನ್ನ ಕೇಂದ್ರವಾಗಿ ಮಾಡಿಕೊಂಡಾಗ ಈ ದೇವಾಲಯವನ್ನು ನಿರ್ಮಿಸಿದರು. ಇಲ್ಲಿನ ಕೋಟೆ ಮತ್ತು ರಾಮೇಶ್ವರ ದೇವಾಲಯವು ಭೇಟಿ ನೀಡಲು ಯೋಗ್ಯವಾದ ಸ್ಥಳಗಳಾಗಿವೆ.

ಹನುಮಂತರಾಯನ ಗುಡಿ 
Kabbalamna Temple

ಹನುಮಂತರಾಯನ ಗುಡಿ

ಭಗವಾನ್ ಹನುಮಂತನಿಗೆ ಸಮರ್ಪಿತವಾಗಿರುವ ಈ ದೇವಾಲಯದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣನ ಗುಡಿಗಳು ಇವೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಕೇವಲ 3 ಕಿಮೀ ದೂರದಲ್ಲಿರುವ ಕೆಂಗಲ್ ದೇವಸ್ಥಾನದಲ್ಲಿನ ಹನುಮಂತನ ಪ್ರತಿಮೆಯನ್ನು ಕೆಂಗಲ್ ಎಂದು ಕರೆಯಲಾಗುವ, ಸ್ಥಳೀಯವಾಗಿ ಲಭ್ಯವಿರುವ ಕೆಂಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ.
ರಾಮನಗರವು ಹಲವು ದೇವಾಲಯಗಳ ಕೇಂದ್ರವಾಗಿದೆ. ನೀವು ಇಲ್ಲಿ ದೊಡ್ಡ ಮಲ್ಲೂರು, ದೇವರ ಹೊಸಹಳ್ಳಿ, ಬ್ರಹ್ಮಣಿಪುರ, ಹಾರೋಹಳ್ಳಿ, ಹೊಂಗನೂರು, ಜಾಲಮಂಗಲ, ಕಲ್ಲಹಳ್ಳಿ, ಕೆಂಗಲ್, ಕೂಡ್ಲೂರು, ಮತ್ತು ಸುಗ್ಗನಹಳ್ಳಿ ಮುಂತಾದವು ದೇವಾಲಯಗಳನ್ನು ನೋಡಬಹುದು.

ರಾಮನಗರದ ಪ್ರೇಕ್ಷಣೀಯ ಸ್ಥಳಗಳು

ರಾಮನಗರವು ಚಿಕ್ಕ ಪಟ್ಟಣವಾಗಿದ್ದರೂ ಸಹ ಇಲ್ಲಿ ನೋಡಲು, ಆನಂದಿಸಲು ಹಲವು ಸ್ಥಳಗಳಿವೆ. ಬೋಟಿಂಗ್, ಜಲಪಾತಗಳು, ಜಲಾಶಯಗಳು ಮತ್ತು ಅಣೆಕಟ್ಟುಗಳಂತಹ ಸುಂದರವಾದ ಮತ್ತು ರಮಣೀಯ ಸ್ಥಳಗಳನ್ನು ನೀವು ಇಲ್ಲಿ ನೋಡಬಹುದು. ರಾಮನಗರವು ಪ್ರಕೃತಿ ಪ್ರಿಯರ ಮತ್ತು ಸಾಹಸ ಪ್ರಿಯರಿಗೆ ಸ್ವರ್ಗವೆಂದೇ ಖ್ಯಾತವಾಗಿದೆ.
ಮೇಕೆದಾಟು ಮತ್ತು ಸಂಗಮ
ಮೇಕೆದಾಟು ಮತ್ತು ಸಂಗಮ

ಮೇಕೆದಾಟು ಮತ್ತು ಸಂಗಮ 

ಮೇಕೆದಾಟು ಮತ್ತು ಸಂಗಮ ರಾಮನಗರದ ಪ್ರಮುಖ ಆಕರ್ಷಣೆಗಳಾಗಿವೆ. ಕನಕಪುರ ತಾಲೂಕಿನಲ್ಲಿರುವ ಸಂಗಮವು ಕಾವೇರಿ ಮತ್ತು ಅಕ್ರಾವತಿ ನದಿಗಳ ಸಂಗಮವಾಗಿದ್ದು ಒಂದು ದಿನದ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ಮಕೆದಾಟು ಒಂದು ಜಲಮೂಲವಾಗಿದ್ದು ಸಂಗಮದಿಂದ ಕೇವಲ 5 ಕಿಮೀ ದೂರದಲ್ಲಿರುವ ಇದು ದಟ್ಟವಾದ ಕಾಡುಗಳು ಮತ್ತು ಭವ್ಯವಾದ ಬೆಟ್ಟಗಳ ಮೂಲಕ ಹಾದುಹೋಗುತ್ತದೆ. ಈ ಸ್ಥಳದಲ್ಲಿ, ನೀವು ಕಾವೇರಿ ನದಿಯ ಘರ್ಜನೆ ಮತ್ತು ಕಂಪನವನ್ನು ಕೇಳಬಹುದು.

ಸಲಹೆ: ದಯವಿಟ್ಟು ನೀವು ಹೋಗುವ ಈ ಪ್ರದೇಶವನ್ನು ಸ್ವಚ್ಛವಾಗಿಡಿ. ಕಸ ಹಾಕಬೇಡಿ.

ಕಣ್ವ ಜಲಾಶಯ
Kabbalamna Temple

ಕಣ್ವ ಜಲಾಶಯ

ಹಿನ್ನಲೆಯಲ್ಲಿ ಬೆಟ್ಟಗಳನ್ನು ಹೊಂದಿರುವ ಕಣ್ವ ಜಲಾಶಯವು ಒಂದು ದಿನದ ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ, ಕಣ್ವ ಜಲಾಶಯವು ಜಿಲ್ಲಾ ಕೇಂದ್ರದಿಂದ ಕೇವಲ 10 ಕಿಮೀ ದೂರದಲ್ಲಿರುವ ಆಕರ್ಷಕ ಸ್ಥಳವಾಗಿದೆ.

ಮಂಚನಬೆಲೆ ಅಣೆಕಟ್ಟು
Kabbalamna Temple

ಮಂಚನಬೆಲೆ ಅಣೆಕಟ್ಟು

ಅಕ್ರಾವತಿ ನದಿಯ ಮೇಲೇ ಸಣ್ಣ ನೀರಿನ ಅಣೆಕಟ್ಟು ಇರುವ ಮಂಚನಬೆಲೆ ಶಾಂತ ಮತ್ತು ಹಿತವಾದ ಸ್ಥಳವಾಗಿದೆ. ಇದು ವಿಶೇಷವಾಗಿ ಪಕ್ಷಿ ವೀಕ್ಷಣೆಗೆ ಜನಪ್ರಿಯವಾಗಿದೆ. ಬೆಂಗಳೂರಿನಿಂದ ಕೇವಲ 45 ಕಿಮೀ ದೂರದಲ್ಲಿರುವ ಮಂಚನಬೆಲೆಯು ಕುಟುಂಬಗಳು ಮತ್ತು ಸ್ನೇಹಿತರೊಂದಿಗೆ ವಾರಾಂತ್ಯದ ಪ್ರವಾಸಗಳಿಗೆ ಬರುವ ಹಾಟ್‌ಸ್ಪಾಟ್ ಆಗಿದೆ.

ಜಾನಪದ ಲೋಕ
Kabbalamna Temple

ಜಾನಪದ ಲೋಕ

ಜಾನಪದ ಲೋಕವು 15 ಎಕರೆಗಳಲ್ಲಿ ಹರಡಿದ್ದು ಇದನ್ನು 1979 ರಲ್ಲಿ ಕರ್ನಾಟಕದ ಸ್ಥಳೀಯ ಜಾನಪದ ಸಂಸ್ಕೃತಿಯನ್ನು ಉತ್ತೇಜಿಸಲು, ಸಂರಕ್ಷಿಸಲು, ಪ್ರಕಟಿಸಲು ಮತ್ತು ಪ್ರಚಾರ ಮಾಡಲು ಸ್ಥಾಪಿಸಲಾಯಿತು. ಇದು ಶ್ರೀ ಎಚ್ ಎಲ್ ನಾಗೇಗೌಡರ ಕನಸಿನ ಕೂಸಾಗಿದ್ದು , ಗ್ರಾಮೀಣ ಕುಶಲಕರ್ಮಿಗಳು, ಸಂಗೀತಗಾರರು ಮತ್ತು ಕುಶಲಕರ್ಮಿಗಳಿಗೆ ತಮ್ಮ ಕಲಾ ಪ್ರಕಾರವನ್ನು ಪ್ರದರ್ಶಿಸಲು ಮತ್ತು ಮಾರಾಟದ ಆದಾಯದಿಂದ ಜೀವನ ನಡೆಸಲು ಒಂದು ಸೂಕ್ತವೇದಿಕೆಯಾಗಿದೆ. ಕರ್ನಾಟಕದ ಸುಮಾರು 5000 ಬೆರಗುಗೊಳಿಸುವ ಕಲಾಕೃತಿಗಳ ಸಂಗ್ರಹವನ್ನು ಹೊಂದಿರುವ ಜಾನಪದ ಲೋಕವು ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದೆ. ಇದು ಬಯಲು ರಂಗಮಂದಿರ, ಸ್ಟುಡಿಯೋ ಮತ್ತು ಇನ್ನೂ ಇತರ ಆಕರ್ಷಕ ಅಂಶಗಳನ್ನು ಒಳಗೊಂಡಿದೆ.

ರಾಮನಗರದಲ್ಲಿ ಸಾಹಸ ಚಟುವಟಿಕೆಗಳು

ರಾಮನಗರದಲ್ಲಿ ನೀವು ಅನೇಕ ಸಾಹಸ ಚಟುವಟಿಕೆಗಳನ್ನು ನೋಡಬಹುದು ಮತ್ತು ಆನಂದಿಸಬಹುದು. ಇದು ರಾಕ್ ಕ್ಲೈಂಬಿಂಗ್, ರಾಪ್ಪಲ್ಲಿಂಗ್, ಸೇಲಿಂಗ್ ಮತ್ತು ಇನ್ನಿತರ ಸಾಹಸ ಚಟುವಟಿಕೆಗಳಿಗೆ ನೆಲೆಯಾಗಿದೆ. ಒಂದು ದಿನದ ಟ್ರೆಕ್ಕಿಂಗ್ ಬಯಸುವುದಾದರೆ ಸಾವನದುರ್ಗ ಮತ್ತು ರಾಮದೇವರ ಬೆಟ್ಟದ ಚಾರಣ ಸೂಕ್ತವಾಗಿದೆ.
ಸಾವನದುರ್ಗಾ
ಸಾವನದುರ್ಗವು ಬೆಂಗಳೂರಿಗೆ ಹತ್ತಿರದಲ್ಲಿರುವ ಒಂದು ಬೆಟ್ಟವಾಗಿದೆ. ನೀವು ಇಲ್ಲಿ ಒಂದು ದಿನದ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು. ಇಲ್ಲಿ ವಾರಾಂತ್ಯದಲ್ಲಿ ಹೆಚ್ಚು ಜನರು ಭೇಟಿ ನೀಡುತ್ತಾರೆ. ಇದು ಪ್ರಸಿದ್ಧವಾದ ಬೆಟ್ಟವಾಗಿದೆ. ಇಲ್ಲಿನ ದೈತ್ಯಾಕಾರದ ಬಂಡೆಗಳು ಮತ್ತು ಹಚ್ಚ ಹಸಿರಿನ ದೃಶ್ಯಗಳು ಚಾರಣಿಗರನ್ನು ಆಕರ್ಷಿಸುತ್ತವೆ. ಆದರೆ ಇದರ ಚಾರಣ ಮಾರ್ಗವು ಕಷ್ಟಕರವಾಗಿದ್ದು, ನೀವು ಸೂಕ್ತ ಮಾರ್ಗದರ್ಶಕರೊಂದಿಗೆ ಚಾರಣವನ್ನು ಮಾಡುವುದು ಒಳ್ಳೆಯದು. ಚಾರಣ ಮಾಡಲು ಹೋಗುವಾಗ ನಿಮ್ಮೊಂದಿಗೆ ಆಹಾರ, ನೀರು ,ಸನ್ ಕ್ರೀಮ್ ಹಾಗೂ ಪ್ರಥಮ ಚಿಕಿತ್ಸಾ ಕಿಟ್ ತೆಗೆದುಕೊಂಡು ಹೋಗಲು ಮರೆಯದಿರಿ.

ರಾಮದೇವರ ಬೆಟ್ಟ ರಣಹದ್ದು ಅಭಯಾರಣ್ಯ ಮತ್ತು ಚಾರಣ
Kabbalamna Temple

ರಾಮದೇವರ ಬೆಟ್ಟ

ನೀವು ರಾಮದೇವರ ಬೆಟ್ಟವನ್ನು ಚಾರಣ ಮಾಡಬಹುದು. ಇದು ನಿಮಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ. ಇಲ್ಲಿ ಹಿಂದಿಯ ಜನಪ್ರಿಯ ಚಲನಚಿತ್ರ ಶೋಲೆಯ ಚಿತ್ರೀಕರಣವಾಗಿತ್ತು. ನೀವು ರಾಮನಗರದಲ್ಲಿ ಭಾರತದ ಏಕೈಕ ರಣಹದ್ದು ಅಭಯಾರಣ್ಯವನ್ನು ನೋಡಬಹುದು. ಇದು ಖಂಡಿತವಾಗಿಯೂ ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ನೀವು ಇಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಭಾರತೀಯ ಬಿಳಿ ಬೆನ್ನಿನ ರಣಹದ್ದುಗಳು ಮತ್ತು ಉದ್ದನೆಯ ಕೊಕ್ಕಿನ ರಣಹದ್ದುಗಳನ್ನು ನೋಡಬಹುದು.

ಸಲಹೆ: ಇದು ಸಂರಕ್ಷಿತ ಪ್ರದೇಶವಾಗಿದ್ದು ಅರಣ್ಯ ಇಲಾಖೆಯಿಂದ ಅನುಮತಿ ಅಗತ್ಯವಿದೆ. ಅಭಯಾರಣ್ಯದ ಪ್ರವೇಶದ್ವಾರದಲ್ಲಿ ಅನುಮತಿ ಪಡೆಯಬಹುದು.

ಚೆನ್ನಪಟ್ಟಣದ ಗೊಂಬೆಗಳು

ರಾಮನಗರವು ವಿವಿಧ ಆಕರ್ಷಣೆಗಳು, ದೇವಾಲಯಗಳು ಮತ್ತು ಸಾಹಸ ಸ್ಥಳಗಳ ಜೊತೆಗೆ ತನ್ನ ವಿಶಿಷ್ಟವಾದ ಕರಕುಶಲತೆಗೆ ಹೆಸರುವಾಸಿಯಾಗಿದೆ. ರಾಮನಗರದ ಚನ್ನಪಟ್ಟಣವು ಮರದ ಆಟಿಕೆಗಳು, ಆಭರಣಗಳು, ಗೃಹಾಲಂಕಾರಗಳು ಮತ್ತು ಅನೇಕ ವಸ್ತುಗಳಿಗೆ ಹೆಸರುವಾಸಿ ಆಗಿದೆ. ಇಲ್ಲಿ ಇಂತಹ ಆಕರ್ಷಕ ಆಟಿಕೆಗಳನ್ನು ತಯಾರಿಸುವ 3000 ಕ್ಕೂ ಹೆಚ್ಚು ಕುಶಲಕರ್ಮಿಗಳು ಇದ್ದಾರೆ. ಈ ಉತ್ಪನ್ನಗಳನ್ನು ವರ್ಲ್ಡ್ ಟ್ರೇಡ್ ಆರ್ಗನೈಜೇಷನ್ ಅಡಿಯಲ್ಲಿ GI (ಭೌಗೋಳಿಕ ಗುರುತು) ಟ್ಯಾಗ್ ಅಡಿಯಲ್ಲಿ ರಕ್ಷಿಸಲಾಗಿದೆ. ನೈಸರ್ಗಿಕ ತರಕಾರಿ ಬಣ್ಣಗಳಿಂದ ತಯಾರಿಸಿದ ಈ ಉತ್ಪನ್ನಗಳು ವಿಷಕಾರಿಯಲ್ಲ ಮತ್ತು ಮಕ್ಕಳಿಗೆ ಸುರಕ್ಷಿತವಾಗಿದೆ. ಚನ್ನಪಟ್ಟಣದಲ್ಲಿರುವ ಇವುಗಳ ಉತ್ಪಾದನಾ ಘಟಕಕ್ಕೆ ನೀವು ಭೇಟಿ ನೀಡದೆ ಹೋದರೆ ನಿಮ್ಮ ರಾಮನಗರ ಭೇಟಿ ಅಪೂರ್ಣವಾಗುತ್ತದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ ಕೇವಲ 60 ಕಿಮೀ ದೂರದಲ್ಲಿರುವ ರಾಮನಗರವು ಉತ್ತಮ ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವನ್ನು ಹೊಂದಿದೆ.
ವಿಮಾನದ ಮೂಲಕ
ರಾಮನಗರಕ್ಕೆ ಇರುವ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ಇದು ಸುಮಾರು 80 ಕಿಮೀ ದೂರದಲ್ಲಿದೆ.
ರೇಲ್ವೆ ಮೂಲಕ
ರಾಮನಗರವು ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಇದು ಬೆಂಗಳೂರು ಮತ್ತು ಮೈಸೂರಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಎಲ್ಲಾ ರೈಲುಗಳು ರಾಮನಗರದ ಮೂಲಕ ಹಾದು ಹೋಗುತ್ತವೆ.
ಬಸ್ ಮೂಲಕ
ರಾಮನಗರವು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಕೆಎಸ್‌ಟಿಆರ್‌ಸಿ, ರಾಜ್ಯ ಸಾರಿಗೆ ಬಸ್ , ಮತ್ತು ಐಷಾರಾಮಿ ಮತ್ತು ಎಸಿ ರಹಿತ ಖಾಸಗಿ ಬಸ್‌ಗಳು ಬೆಂಗಳೂರಿನಿಂದ ಮಂಡ್ಯ ಮತ್ತು ಮೈಸೂರು ಕ್ರಾಸ್ ಮೂಲಕ ರಾಮನಗರದ ಕಡೆಗೆ ಹೊರಡುತ್ತವೆ. ನೀವು ಬೆಂಗಳೂರಿನಿಂದ ರಾಮನಗರ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಸಹ ಬಾಡಿಗೆಗೆ ಪಡೆಯಬಹುದು.