Karnataka logo

Karnataka Tourism
GO UP

ಬ್ಲಾಗ್

ಕಾಳಾವರ ದುರ್ಗ ಎಂದೂ ಕರೆಯಲ್ಪಡುವ ಸ್ಕಂದಗಿರಿ ಬೆಟ್ಟಗಳು ತಮ್ಮ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗಳಿಗೆ ಹೆಸರುವಾಸಿಯಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ 18 ನೇ ಶತಮಾನದ ಟಿಪ್ಪು ಸುಲ್ತಾನ್ ಕೋಟೆಯ ಅವಶೇಷಗಳನ್ನು ಮೇಲ್ಭಾಗದಲ್ಲಿ ಕಾಣಬಹುದು. ನೀವು ತೇಲುವ ಮೋಡಗಳ ಮೇಲೆ ಮಂತ್ರಮುಗ್ಧಗೊಳಿಸುವ ಸೂರ್ಯೋದಯಕ್ಕಾಗಿ ಟ್ರೆಕ್ಕಿಂಗ್ ಮಾಡಬಹುದು ಅಥವಾ ಹಗಲಿನಲ್ಲಿಯೂ ಟ್ರೆಕ್ಕಿಂಗ್ ಮಾಡಿ ಮೋಡಿಗೊಳಿಸುವ ಸೂರ್ಯಾಸ್ತವನ್ನು

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯು ಈಗ ಅಧಿಕೃತವಾಗಿ ಅನಾವರಣಗೊಂಡಿದೆ. ಮಾಧ್ಯಮ ದೈತ್ಯ ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಮತ್ತು ಕರ್ನಾಟಕ ಪ್ರವಾಸೋದ್ಯಮದ ಈ ಉಪಕ್ರಮವು ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸಾರಿಗೆ ಅಭಿವೃದ್ಧಿ ನಿಗಮ ಮತ್ತು ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಂದ ಬೆಂಬಲಿತವಾಗಿದೆ. ಕರ್ನಾಟಕದ ಏಳು ಅದ್ಭುತಗಳನ್ನು ಆಯ್ಕೆ ಮಾಡುವುದು ಒಂದೇ ಸವಾಲೇ ಆಗಿತ್ತು.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿ ಬೈಲುಕುಪ್ಪೆ ಮೈಸೂರಿನಿಂದ ಕೇವಲ 80 ಕಿ.ಮೀ ದೂರದಲ್ಲಿದ್ದು ಹಲವಾರು ಟಿಬೆಟಿಯನ್ ವಸಾಹತುಗಳಿಗೆ ನೆಲೆಯಾಗಿದೆ. ಬೈಲಕುಪ್ಪೆ ವಿಶ್ವದಲ್ಲಿ ಧರ್ಮಶಾಲಾ ನಂತರ ಎರಡನೇ ಅತಿದೊಡ್ಡ ಟಿಬೆಟಿಯನ್ ವಸಾಹತು ಆಗಿದೆ. ಈ ಟಿಬೆಟಿಯನ್ ವಸಾಹತುಗಳನ್ನು 1961 ಮತ್ತು 1969 ರಲ್ಲಿ ಸ್ಥಾಪಿಸಲಾಯಿತು ಮತ್ತು ಈಗ ಇವುಗಳು ಪೂರ್ಣ ಪ್ರಮಾಣದ ಟೌನ್‌ಶಿಪ್‌ಗಳಾಗಿವೆ.

ಹೊನ್ನಾವರದ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ , ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಉತ್ತರ ಕನ್ನಡದ ಸುಂದರವಾದ ಈ ಚಿಕ್ಕ ಪಟ್ಟಣವು ಪ್ರಕೃತಿಯ ಅದ್ಭುತ ಕೊಡುಗೆ ಆಗಿದೆ. ನೀವು ಹೊನ್ನಾವರವನ್ನು ಬೆಂಗಳೂರು, ಮಂಗಳೂರು, ಗೋವಾ ಮತ್ತು ಶಿವಮೊಗ್ಗದಿಂದ ಸುಲಭವಾಗಿ ತಲುಪಬಹುದು.

ಮತ್ತೆ ಕ್ರಿಸಮಸ್ ಬಂದಿದೆ! ಕ್ರಿಸಮಸ್ ಹಬ್ಬವೆಂದರೇ ಎಲ್ಲೆಲ್ಲಿಯೂ ಸಡಗರವೇ. ಬೀದಿಬೀದಿಗಳು ಸಂತೋಷ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಈ ಸಂದರ್ಭದಲ್ಲಿ ಇಡೀ ಜಗತ್ತೆ ರಜೆಯ ಮೂಡ್‌ನಲ್ಲಿದ್ದು ಜನರು ಸುಂದರ ಸ್ಥಳಗಳಿಗೆ ಪ್ರಯಾಣಿಸಲು, ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಅಥವಾ ನಗರದ ಗಡಿಬಿಡಿಯಿಂದ ತಪ್ಪಿಸಿಕೊಳ್ಳಲು ಕಾಯುತ್ತಿರುತ್ತಾರೆ.

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ ಎಲ್ಲವನ್ನೂ ಹೊಂದಿದೆ.

ವಿರೂಪಾಕ್ಷ ದೇವಾಲಯ, ಅಪ್ರತಿಮವಾದ ಕಲ್ಲಿನ ರಥ ಮತ್ತು ವಿಜಯನಗರ ಸಾಮ್ರಾಜ್ಯದ ಅವಶೇಷಗಳಿಗೆ ಹೆಸರುವಾಸಿಯಾಗಿರುವ ಐತಿಹಾಸಿಕ ನಗರ ಹಂಪಿಯಲ್ಲಿ ಪ್ರವಾಸಿಗರು ಹಲವಾರು ಸ್ಥಳಗಳನ್ನು ನೋಡಬಹುದು. ಹಂಪಿಯು ಪ್ರಾಯೋಗಿಕ ಮತ್ತು ನಿಧಾನಗತಿಯ ಪ್ರಯಾಣ ಮಾಡುತ್ತ ಸ್ಥಳ ವೀಕ್ಷಣೆಯಲ್ಲಿ ಮುಳುಗಿ ಹೋಗಬಹುದಾದ ಸ್ಥಳವಾಗಿದೆ. ಒರಟಾದ ಮತ್ತು ಭವ್ಯವಾದ ಬಂಡೆಯ ಭೂದೃಶ್ಯದಲ್ಲಿ ನೆಲೆಗೊಂಡಿರುವ ಈ ಪಟ್ಟಣ ಒಂದು ಕಾಲದಲ್ಲಿ ಪ್ರಬಲವಾದ ವಿಜಯನಗರ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಮತ್ತು ಪ್ರಶಾಂತ ಪಟ್ಟಣವಾದ ಗೋಕರ್ಣವು ಬೆನ್ನಿಗೆ ಬ್ಯಾಗ್‌ ಹೊತ್ತು ತಿರುಗುವ ಪ್ರಯಾಣಿಕರಿಗೆ ಸ್ವರ್ಗವಾಗಿತ್ತು. ಆದರೆ ಈಗ ಬದಲಾಗಿದೆ. ಸಮುದ್ರ ದಂಡೆಯಲ್ಲಿನ ಸ್ಥಳಾನ್ವೇಷಣೆಯಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಹೊಂದಿರುವ ಗೋಕರ್ಣ ಪಟ್ಟಣವು ಇನ್ನೂ ಆನೇಕ ವಿಷಯಗಳನ್ನು ಒಳಗೊಂಡಿದೆ.

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.

ಪಶ್ಚಿಮ ಘಟ್ಟಗಳ ಸುಂದರ ಮತ್ತು ಹಚ್ಚ ಹಸಿರಿನ ಕಣಿವೆಗಳಲ್ಲಿ ನೆಲೆಸಿರುವ ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದೆ ಮಲೆನಾಡು ಪ್ರದೇಶದ ಅಡಿಯಲ್ಲಿದೆ.ಸಕಲೇಶಪುರವು ಕರ್ನಾಟಕದಲ್ಲಿ ಹೆಚ್ಚು ಬೇಡಿಕೆಯಿರುವ ವಾರಾಂತ್ಯದ ತಾಣಗಳಲ್ಲಿ ಒಂದಾಗಿದ್ದು, ಇಲ್ಲಿ ನೋಡಲು ಹಲವು ಆಸಕ್ತಿದಾಯಕ ಸ್ಥಳಗಳಿವೆ. ಇಲ್ಲಿ ನೀವು ಅತಿಸುಂದರ ಭೂದೃಶ್ಯಗಳು, ಕಾಫಿ ಮತ್ತು ಮಸಾಲೆ ತೋಟಗಳು, ಆಕರ್ಷಕವಾದ ಜಲಪಾತಗಳು, ಟ್ರೆಕ್ಕಿಂಗ್ ಹಾದಿಗಳು ಮತ್ತು ಕೆಲವು ಪ್ರಾಚೀನ