Karnataka logo

Karnataka Tourism
GO UP
Image Alt

ಧಾರವಾಡದಲ್ಲಿ ನೋಡಬೇಕಾದ ಆಕರ್ಷಣೀಯ ಸ್ಥಳಗಳು

separator
  /  ಬ್ಲಾಗ್   /  ಧಾರವಾಡದಲ್ಲಿ ನೋಡಬೇಕಾದ ಆಕರ್ಷಣೀಯ ಸ್ಥಳಗಳು
Places to See in Dharwad

ಧಾರವಾಡದಲ್ಲಿ ನೋಡಬೇಕಾದ ಆಕರ್ಷಣೀಯ ಸ್ಥಳಗಳು

ಸಾಂಸ್ಕೃತಿಕ,ಪಾರಂಪಾರಿಕ, ಶೈಕ್ಷಣಿಕ ಮತ್ತು ಐತಿಹಾಸಿಕ ಪ್ರಸಿದ್ಧವಾಗಿರುವ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಪ್ರವಾಸಿಗರಿಗೆ ಬೇಕಾದ ಎಲ್ಲವನ್ನೂ ಹೊಂದಿದೆ. ಧಾರವಾಡವು ಚಾಲುಕ್ಯರು, ಬಹಮನಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿಗಳು, ಮೊಘಲರು, ಶಿವಾಜಿ ಮಹಾರಾಜರು, ಪೇಶ್ವೆ ಬಾಲಾಜಿ ರಾವ್, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರಿಂದ ಆಳಲ್ಪಟ್ಟಿತ್ತು. ಧಾರವಾಡವು ಶೈಕ್ಷಣಿಕ ಮತ್ತು ಕೃಷಿ ವಿಜ್ಞಾನಗಳ ಕೇಂದ್ರವಾಗಿರುವುದರಿಂದ ಇಲ್ಲಿ ನೀವು ಅನೇಕ ಕಲಿಕಾ ಕೇಂದ್ರಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಇಲ್ಲಿಗೆ ಅನೇಕ ಪ್ರಯಾಣಿಕರು, ಇತಿಹಾಸಕಾರರು ಮತ್ತು ಸಂಶೋಧಕರು ಭೇಟಿ ನೀಡುತ್ತಾರೆ.

ಧಾರವಾಡವನ್ನು ಸಾಮಾನ್ಯವಾಗಿ ಸಂಸ್ಕೃತಿ, ಕಲೆ, ವಿಜ್ಞಾನದ ಸೃಜನಶೀಲತೆ ಮತ್ತು ಪಾಕಪದ್ಧತಿಯ ಕೇಂದ್ರವೆಂದು ಕರೆಯಲಾಗುತ್ತದೆ. ಇಲ್ಲಿಗೆ ಬರುವ ಪ್ರಯಾಣಿಕರು ಇಲ್ಲಿ ನ್ಬಹಳಷ್ಟು ಕಲಿಯುತ್ತಾರೆ . ಧಾರವಾಡ ನಗರವು ಒಂದು ಆಕರ್ಷಕ ಸ್ಥಳವಾಗಿದೆ.

ಧಾರವಾಡದಲ್ಲಿ ನೋಡಬೇಕಾದ ಸ್ಥಳಗಳು

Kapileshwara Temple

ಧಾರವಾಡ ಕೋಟೆ

ಐತಿಹಾಸಿಕ ಮತ್ತು ಪಾರಂಪರಿಕ ನಗರವಾದ ಧಾರವಾಡವು ಪ್ರತಿಯೊಬ್ಬ ಪ್ರವಾಸಿಗರಿಗೆ ಏನನ್ನಾದರೂ ಹೊಂದಿದೆ. ನೀವು ಇಲ್ಲಿ ವಸ್ತುಸಂಗ್ರಹಾಲಯಗಳು, ಧಾರ್ಮಿಕ ಸ್ಥಳಗಳು ಮತ್ತು ದೇವಸ್ಥಾನಗಳನ್ನು ನೋಡಬಹುದು.

ಧಾರವಾಡದಲ್ಲಿ ಭೇಟಿ ನೀಡಬೇಕಾದ ಪಾರಂಪರಿಕ ತಾಣಗಳು ಮತ್ತು ಧಾರ್ಮಿಕ ಸ್ಥಳಗಳು

Kapileshwara Temple

ಚಂದ್ರಮೌಳೇಶ್ವರ ದೇವಸ್ಥಾನ, ಹುಬ್ಬಳ್ಳಿ

ಧಾರವಾಡ ನಗರವು ಪಾರಂಪರಿಕ ತಾಣಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಹೊಂದಿದೆ. ಈ ನಗರವು ವಿವಿಧ ರಾಜವಂಶಗಳಿಂದ ಆಳಲ್ಪಟ್ಟಿತು. ಇದು ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳನ್ನು ಒಳಗೊಂಡಿದೆ ಇಲ್ಲಿನ ಪ್ರತಿಯೊಂದು ಸ್ಮಾರಕ ಮತ್ತು ದೇವಾಲಯವು ಅತ್ಯುತ್ತಮ ಕಲಾತ್ಮಕ ಕೌಶಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ಸ್ಥಳಗಳು ಖಂಡಿತವಾಗಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿ ನೀವು ಕಡ್ಡಾಯವಾಗಿ ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಬನಶಂಕರಿ ದೇವಸ್ಥಾನ, ಧಾರವಾಡ ಕೋಟೆ, ಶಂಬುಲಿಂಗೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ, ಬಸವಣ್ಣ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ, ಮುರುಗ ಮಠ, ಭವಾನಿಶಂಕರ ದೇವಸ್ಥಾನ, ಸೇಂಟ್ಸ್ ಚರ್ಚ್ ಮತ್ತು ಬಾಸೆಲ್ ಮಿಷನ್ ಚರ್ಚ್, ಜುಮ್ಮಾ ಮಸೀದಿ, ಮಸ್ತಾನ್ ಸೋಫಾ ಮಸೀದಿ, ಅನಂತನಾಥ ಮತ್ತು ಪಾರ್ಶ್ವನಾಥ ಬಸದಿಗಳು, ನವಲಗುಂದ, ಮುಕ್ತಿ ಮಂದಿರ, ಕುಂದಗೋಳ, ಗುಡಗೇರಿ, ನುಗ್ಗಿಕೇರಿ ಹನುಮಾನ್ ದೇವಸ್ಥಾನ, ಸಿದ್ಧಾರೂಢ ಮಠ, ನದಿ ಜನ್ಮ ಸ್ಥಳ, ಚಾಂಗ್‌ದೇವ್ ಉರ್ಫ್ ರಾಜಾ ಬಾಗಸ್ವರ ದೇವಸ್ಥಾನ, ಅಜತ್ ನಾಗಲಿಂಗಸ್ವಾಮಿ ಮಠ, ಮಡಿವಾಳೇಶ್ವರ ಮಠ, ಮುರುಘಾ ಮಠ, ಹಜರತ್ ಸಯ್ಯದ್ ಶಹರ ದರ್ಗಾ, ಹಜರತ್ ಸಯ್ಯದ್ ಫತೇಶಾಹ್ವಾಲಿ ದರ್ಗಾ, ಸ. ಮೆಮೋರಿಯಲ್ ಚರ್ಚ್, ಆಲ್ ಸೇಂಟ್ಸ್ಚರ್ಚ್, ಸೇಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚ್, ಹೋಲಿ ನೇಮ್ ಕ್ಯಾಥೆಡ್ರಲ್ ಚರ್ಚ್, ಜೈನ್ ಬಸದಿ ಮತ್ತು ಇಸ್ಕಾನ್ ದೇವಾಲಯ ಸೇರಿವೆ.

ಧಾರವಾಡದಲ್ಲಿರುವ ವಸ್ತು ಸಂಗ್ರಹಾಲಯಗಳು

Kapileshwara Temple

ಕರ್ನಾಟಕ ಕಲಾ ಕಾಲೇಜು

ಶೈಕ್ಷಣಿಕ ಮತ್ತು ಕೃಷಿ ವಿಜ್ಞಾನದ ಕೇಂದ್ರವಾಗಿ ಭಾರತದಲ್ಲೇ ಹೆಸರುವಾಸಿಯಾದ ಧಾರವಾಡ-ಹುಬ್ಬಳ್ಳಿ ನಗರಗಳಲ್ಲಿ ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಇನ್ನೂ ಹೆಚ್ಚಿನ ವಸ್ತುಗಳಿಗೆ ಸಂಬಂಧಿಸಿದ ಅನೇಕ ವಸ್ತುಸಂಗ್ರಹಾಲಯಗಳಿವೆ. ಧಾರವಾಡದ ಈ ಪ್ರಸಿದ್ಧ ವಸ್ತುಸಂಗ್ರಹಾಲಯಗಳು ಕೇವಲ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನಷ್ಟೇ ಅಲ್ಲ, ಯಾವಾಗಲೂ ಕಲಿಯಲು ಮತ್ತು ಜ್ಞಾನದಿಂದ ತಮ್ಮನ್ನು ತಾವು ನವೀಕರಿಸಿಕೊಳ್ಳಲು ಉತ್ಸುಕರಾಗಿರುವ ಎಲ್ಲ ಪ್ರಯಾಣಿಕರನ್ನೂ ಸಹ ಆಕರ್ಷಿಸುತ್ತದೆ. ರೈಲ್ವೇ ಮ್ಯೂಸಿಯಂ, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿನ ವಸ್ತುಸಂಗ್ರಹಾಲಯಗಳು, ಕರ್ನಾಟಕ ಕಲಾ ಕಾಲೇಜಿನ ವಸ್ತುಸಂಗ್ರಹಾಲಯ, ಇಂಟಾಕ್ ಹೆರಿಟೇಜ್ ಮ್ಯೂಸಿಯಂ,ದ.ರಾ. ಬೇಂದ್ರೆ ಭವನ, ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಸ್ಮಾರಕ, ಸನ್ ರೇ ಸೋಲಾರ್ ಮ್ಯೂಸಿಯಂ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವೆಲ್ಲವೂ ನೋಡಲೇಬೇಕಾದ ವಸ್ತು ಸಂಗ್ರಹಾಲಯಗಳಾಗಿವೆ.
ಧಾರವಾಡದಲ್ಲಿ ನೀವು ನಿಮ್ಮ ಆತ್ಮೀಯರೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಿದ್ದರೇ ಇಲ್ಲಿ ಸಾಕಷ್ಟು ಉದ್ಯಾನವನಗಳು, ಸರೋವರಗಳು, ಬೆಟ್ಟಗಳಿವೆ. ನೃಪತುಂಗ ಬೆಟ್ಟ, ಉಣಕಲ್ ಕೆರೆ, ಸಾಧನಕೇರಿ ಕೆರೆ, ನೇಚರ್ ಫಸ್ಟ್ ಇಕೋ ವಿಲೇಜ್, ಕೆಲಗೇರಿ ಕೆರೆ, ಧಾರವಾಡ ನೀರಸಾಗರ, ಧುಮ್ಮವಾಡದೊರಿ ಕೆರೆ, ನೀಲಮ್ಮನ ಕೆರೆ, ಇವೆಲ್ಲವೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಕೆಲವು ಕೆರೆಗಳಾಗಿವೆ. ಧಾರವಾಡದ ಪರಿಸರ ಆಹ್ಲಾದಕರವಾಗಿದ್ದು ಪ್ರಯಾಣಿಕರಿಗೆ ಮೋಡಿ ಮಾಡುತ್ತದೆ.

ಧಾರವಾಡದಲ್ಲಿ ಶಾಪಿಂಗ್ ಅನುಭವ

Kapileshwara Temple

ಧಾರವಾಡ ಪೇಢ

ನೀವು ಧಾರವಾಡದಲ್ಲಿ ಶಾಪಿಂಗ್ ಮಾಡಬಹುದು. ನೀವು ಇಲ್ಲಿ ವಿವಿಧ ವಸ್ತುಗಳನ್ನು ಶಾಪಿಂಗ್ ಮಾಡಬಹುದು. ನವಲಗುಂದ ಡರ್ರಿಗಳು (ಕೈಯಿಂದ ನೇಯ್ದ ರತ್ನಗಂಬಳಿಗಳು), ಕೈಯಿಂದ ಮಾಡಿದ ಸಾಂಪ್ರದಾಯಿಕ ಕಸೂತಿ (ಕಸೂತಿಯ ಸಾಂಪ್ರದಾಯಿಕ ರೂಪ) ಸೀರೆಗಳು ಮತ್ತು ಧಾರವಾಡ ಪೇಢಾ (ಹಾಲಿನೊಂದಿಗೆ ತಯಾರಿಸಿದ ಸಿಹಿತಿಂಡಿ) ಧಾರವಾಡದ GI-ಟ್ಯಾಗ್ ಮಾಡಲಾದ ಉತ್ಪನ್ನಗಳಾಗಿವೆ ಮತ್ತು ಅವುಗಳನ್ನು ನೆನಪಿಗಾಗಿ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬೇಕು . ಹುಬ್ಬಳ್ಳಿ-ಧಾರವಾಡದಲ್ಲಿರುವ ಖಾದಿ ಗ್ರಾಮೋದ್ಯೋಗವು ಕೈಯಿಂದ ನೇಯ್ದ ಖಾದಿ ವಸ್ತುಗಳು ಮತ್ತು ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ ಮತ್ತು ಇಲ್ಲಿ ನೀವು ಕೈಯಿಂದ ನೇಯ್ದ ವಿವಿಧ ಗಾತ್ರಗಳ ರಾಷ್ಟ್ರೀಯ ಧ್ವಜಗಳ ಉತ್ಪಾದನೆಯನ್ನು ಕಾಣಬಹುದು.

ತಲುಪುವುದು ಹೇಗೆ?

ರಾಜ್ಯದ ವಾಯುವ್ಯ ಭಾಗದಲ್ಲಿರುವ ಧಾರವಾಡ – ಹುಬ್ಬಳ್ಳಿಯು ರಾಜ್ಯದ ರಾಜಧಾನಿ ಮತ್ತು ದೇಶದ ಇತರ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಧಾರವಾಡವು ರಾಜ್ಯದ ರಾಜಧಾನಿಯಿಂದ ವಾಯುವ್ಯ ದಿಕ್ಕಿನಲ್ಲಿದ್ದು 430 ಕಿಮೀ ದೂರದಲ್ಲಿದೆ.

ವಿಮಾನ ಸಾರಿಗೆ

ಹುಬ್ಬಳ್ಳಿಯು ಹತ್ತಿರದ ವಿಮಾನ ನಿಲ್ದಾಣವಾಗಿದೆ ಮತ್ತು ಜಿಲ್ಲಾ ಕೇಂದ್ರದಿಂದ ಕೇವಲ 20 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣವು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮಂಗಳೂರು, ಮುಂಬೈ ಮತ್ತು ಮೈಸೂರು ಮುಂತಾದ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ರೈಲು ಸಾರಿಗೆ

ಧಾರವಾಡವು ರೈಲ್ವೆ ನಿಲ್ದಾಣವನ್ನು ಹೊಂದಿದ್ದು , ರಾಜ್ಯದ ಎಲ್ಲಾ ಪ್ರಮುಖ ನಗರಗಳು ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ರಸ್ತೆ ಸಾರಿಗೆ

ಧಾರವಾಡ-ಹುಬ್ಬಳ್ಳಿ, ಅವಳಿ ನಗರಗಳ ರಸ್ತೆ ಮಾರ್ಗವೂ ಉತ್ತಮವಾಗಿದೆ. ಇಲ್ಲಿ ಉತ್ತಮ ಕೆ ಎಸ್ ಆರ್ ಟಿ ಸಿ ಸೇವೆ ಲಭ್ಯವಿದ್ದು ರಾಜ್ಯದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಧಾರವಾಡದ ಸ್ಥಳೀಯ ಆಕರ್ಷಣೆಗಳನ್ನು ಅನ್ವೇಷಿಸಲು ಟ್ಯಾಕ್ಸಿಗಳು ಮತ್ತು ಆಟೋ-ರಿಕ್ಷಾಗಳು ಸುಲಭವಾಗಿ ಲಭ್ಯವಿವೆ.

ಇತರ ಸ್ಥಳಗಳನ್ನು ಅನ್ವೇಷಿಸಿ

ಧಾರವಾಡ

ಧಾರವಾಡ ಪೇಢ
ನವಗ್ರಹ ಜೈನ ದೇವಾಲಯ