Karnataka logo

Karnataka Tourism
GO UP

Mullayanagiri Peak Tag

ನಮ್ಮ ನಾಡು ಕರುನಾಡು ಅದ್ಭುತವಾದ ಪ್ರಕೃತಿ ತಾಣಗಳು, ಅರಣ್ಯಗಳು, ಕಡಲತೀರಗಳು, ಗಿರಿಧಾಮಗಳು, ಐತಿಹಾಸಿಕ ತಾಣಗಳು, ದೇವಸ್ಥಾನಗಳನ್ನು ತನ್ನ ಉಡಿಯಲ್ಲಿ ಇರಿಸಿಕೊಂಡಿದೆ. ಹೀಗಾಗಿ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲ ರಾಜ್ಯದ ಪ್ರವಾಸಿಗರು ಭೇಟಿ ನೀಡಲು ಬಯಸುತ್ತಾರೆ. ನಮ್ಮ ರಾಜ್ಯವೂ ಎಲ್ಲ ಪ್ರವಾಸಿಗರಿಗೆ ಅತ್ಯುತ್ತಮವಾದ ಎಲ್ಲವನ್ನೂ ಹೊಂದಿದೆ.

ನಮ್ಮ ಗಂಧದ ನಾಡು ಕರ್ನಾಟಕವು ಪ್ರವಾಸಿಗರಿಗೆ ಬೇಕಾದ ಎಲ್ಲವನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಇತಿಹಾಸ, ಸಾಹಸ, ವನ್ಯಜೀವಿ ಮತ್ತು ನೈಸರ್ಗಿಕ ಸಮೃದ್ಧಿಯಿಂದ ಸಮೃದ್ಧವಾಗಿರುವ ಕರ್ನಾಟಕ ರಾಜ್ಯವು ಕೆಲವು ಅತ್ಯುತ್ತಮ ಪರ್ವತಗಳು ಮತ್ತು ಶಿಖರಗಳಿಗೆ ನೆಲೆಯಾಗಿದೆ. ಈ ಸುಂದರ ಬೆಟ್ಟಗಳು ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರು, ಸಾಹಸ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿವೆ.

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಪ್ರಶಾಂತ ಮತ್ತು ಸುಂದರವಾದ ಗಿರಿಧಾಮಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ‘ಕರ್ನಾಟಕದ ಕಾಫಿ ನಾಡು’ ಎಂದೂ ಕರೆಯಲ್ಪಡುವ ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಪ್ರಸಿದ್ಧ ಪ್ರದೇಶಗಳಿವೆ. ಪ್ರಾಚೀನ ದೇವಾಲಯಗಳು, ಜಲಪಾತಗಳು, ಹಸಿರು ಕಾಫಿ ತೋಟಗಳು, ಚಾರಣ ಪ್ರದೇಶಗಳು ಅಭಯಾರಣ್ಯಗಳು, ವನ್ಯಜೀವಿ ಪ್ರದೇಶಗಳು ಸೇರಿದಂತೆ ಚಿಕ್ಕಮಗಳೂರು ಎಲ್ಲವನ್ನು ಹೊಂದಿದೆ. ಚಿಕ್ಕಮಗಳೂರಿನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.