Karnataka Tourism
GO UP
Image Alt

ಕರ್ನಾಟಕದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

separator
  /  ಬ್ಲಾಗ್   /  ಕರ್ನಾಟಕದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
summer vacation in karnataka

ಕರ್ನಾಟಕದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು

ಈಗಾಗಲೇ ಮಕ್ಕಳ ಬೇಸಿಗೆಯ ರಜೆಗಳು ಆರಂಭವಾಗಿದೆ. ಬಹಳಷ್ಟು ಪೋಷಕರು ಈಗಾಗಲೇ ರಜೆಯ ದಿನಗಳನ್ನು ಯೋಜಿಸಲು ಆರಂಭಿಸಿದ್ದಾರೆ. ನಿಮಗೆ ಕರ್ನಾಟಕದಲ್ಲಿ ಬೇಸಿಗೆಯ ಸಮಯದಲ್ಲಿ ವೀಕ್ಷಿಸಲು ಸಾಕಷ್ಟು ಸ್ಥಳಗಳಿವೆ. ನೀವು ಬೇಸಿಗೆಯ ಸಮಯದಲ್ಲಿ ಮೈಸೂರು, ಬೆಂಗಳೂರು,ಕೂರ್ಗ ಸೇರಿದಂತೆ ಹಲವು ಜನಪ್ರಿಯ ತಾಣಗಳಿಗೆ ಭೇಟಿ ನೀಡಬಹುದು. ನೀವು ಕಡಲ ತೀರಗಳನ್ನು ಪ್ರೀತಿಸುತ್ತಿದ್ದರೇ ಗೋಕರ್ಣಕ್ಕೆ ಭೇಟಿ ನೀಡಬಹುದು.

ಬೆಂಗಳೂರು –

ದೇಶಾದ್ಯಂತದ ಜನರು ಹವಾಮಾನ, ರಾತ್ರಿಜೀವನ, ಆಹಾರ, ಶಾಪಿಂಗ್, ದೇವಾಲಯಗಳು ಮತ್ತು ಇನ್ನೂ ಹೆಚ್ಚಿನವುಗಳ ಕಾರಣದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ವಿಶೇಷವಾಗಿ ಯುವ ಪ್ರವಾಸಿಗರಿಗೆ ಬೆಂಗಳೂರು ತುಂಬಾ ಆಕರ್ಷಣೀಯ ಸ್ಥಳವಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ –

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಸಫಾರಿಯು ಪ್ರತಿಯೊಬ್ಬರಿಗೂ ಸಂಪೂರ್ಣ ಆನಂದವನ್ನು ನೀಡುತ್ತದೆ. ಈ ರಾಷ್ಟ್ರೀಯ ಉದ್ಯಾನವನವು ಚಿರತೆಗಳು, ಮಂಗಗಳು, ನವಿಲುಗಳು , ಅನೆಗಳು, ಸಿಂಹಗಳು, ಹುಲಿಗಳು ಮತ್ತು ಕರಡಿಗಳನ್ನು ಸೇರಿದಂತೆ ಹಲವು ಪ್ರಾಣಿಗಳಿವೆ. ಈ ಉದ್ಯಾನವನಕ್ಕೆ ಹತ್ತಿರ ಇರುವ ಬಟರ್‌ಫ್ಲೈ ಪಾರ್ಕ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಿ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಸಿಂಹ

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ-

ನೀವು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂಗೆ ಭೇಟಿ ನೀಡಿದರೆ ಬೆಂಗಳೂರಿಗೆ ಭೇಟಿ ನೀಡುವುದು ಅಪೂರ್ಣವಾಗಿರುತ್ತದೆ. ಮೋಜಿನ ಕಲಿಕೆಗಳು, ಪ್ರಯೋಗಗಳು, 3D ಪ್ರದರ್ಶನಗಳು, ಬ್ರಹ್ಮಾಂಡದ ರಹಸ್ಯಗಳು ಮತ್ತು ಹೆಚ್ಚಿನವುಗಳಿಗಾಗಿ ಮ್ಯೂಸಿಯಂನಲ್ಲಿ ಸಂಪೂರ್ಣ ದಿನವನ್ನು ಕಳೆಯಿರಿ.

ಜವಾಹರಲಾಲ್ ನೆಹರು ತಾರಾಲಯ-

1989 ರಲ್ಲಿ ಪ್ರಾರಂಭವಾದ ನೆಹರು ತಾರಾಲಯವು ಭಾರತದಲ್ಲಿ ವಿಜ್ಞಾನದ ಜನಪ್ರಿಯತೆ ಮತ್ತು ಅನೌಪಚಾರಿಕ ವಿಜ್ಞಾನ ಶಿಕ್ಷಣಕ್ಕೆ ಮೀಸಲಾದ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ತಾರಾಲಯವು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಲವಾರು ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಮಾಸಿಕ ನಕ್ಷತ್ರ ವೀಕ್ಷಣೆ, ಸೈನ್ಸ್ ಕ್ಲಬ್ ಚಟುವಟಿಕೆಗಳು, ವಿಜ್ಞಾನ ಚಲನಚಿತ್ರಗಳು, ಪ್ರತಿದಿನ ಸ್ಕೈ-ಥಿಯೇಟರ್ ಪ್ರದರ್ಶನಗಳು, ಖಗೋಳ ಘಟನೆಗಳ ವೀಕ್ಷಣೆಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ.

ಜವಾಹರಲಾಲ್ ನೆಹರು ತಾರಾಲಯದಲ್ಲಿ ಸ್ಕೈ ಥಿಯೇಟರ್

ಮೈಸೂರು

ಮೈಸೂರು ಎಲ್ಲಾ ವಯೋಮಾನದವರಿರು ಇಷ್ಟವಾಗುವ ಒಂದು ನಗರವಾಗಿದೆ. ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿರುವ ನಗರವು ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಒಂದು ಮಗು ರಜಾದಿನಗಳಲ್ಲಿ ಎದುರುನೋಡುವ ಎಲ್ಲವನ್ನೂ ಮೈಸೂರು ಹೊಂದಿದೆ. ಇದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್-

ಮೈಸೂರು ಮೃಗಾಲಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದು ಮಕ್ಕಳಿಗಾಗಿ ಮಾತ್ರವಲ್ಲದೆ ವಯಸ್ಕರಿಗೂ ಸಹ ನೆಚ್ಚಿನ ಸ್ಥಳವಾಗಿದೆ. ಮೃಗಾಲಯದಲ್ಲಿ ಜಿರಾಫೆಗಳು, ಹುಲಿಗಳು, ಸಿಂಹಗಳು, ಆನೆಗಳು ಸೇರಿದಂತೆ ಇನ್ನೂ ಅನೇಕ ಪ್ರಾಣಿ ಪಕ್ಷಿಗಳಿವೆ. ಗುಣಮಟ್ಟದ ಸಮಯವನ್ನು ಕಳೆಯಲು ನೀವು ಇದನ್ನು ಆಯ್ಕೆ ಮಾಡಬಹುದು.

ಮೈಸೂರು ಮೃಗಾಲಯದಲ್ಲಿ ಜಿರಾಫೆ

ರೇಲ್ವೆ ಮೂಸಿಯಂ –

1979 ರಲ್ಲಿ ಸ್ಥಾಪಿತವಾದ ರೈಲ್ ಮ್ಯೂಸಿಯಂ ಮಕ್ಕಳು ಮತ್ತು ನಿಮ್ಮಲ್ಲಿರುವ ಮಗುವಿಗೆ ಸಂತೋಷವನ್ನು ನೀಡುತ್ತದೆ. ಮೈಸೂರಿನ ಅತ್ಯಂತ ಆಸಕ್ತಿದಾಯಕ ಸ್ಥಳಗಳಲ್ಲಿ ಒಂದಾದ ಈ ವಸ್ತುಸಂಗ್ರಹಾಲಯವು ಹಳೆಯ ಇಂಜಿನ್‌ಗಳು, ಮೈಸೂರು ಮಹಾರಾಜರ ರಾಯಲ್ ಕೋಚ್‌ಗಳು ಮತ್ತು ಮಿನಿ ರೈಲು ಸವಾರಿಗಳನ್ನು ಪ್ರದರ್ಶಿಸುತ್ತದೆ.

ರೈಲ್ ಮ್ಯೂಸಿಯಂ, ಮೈಸೂರು

ಬೃಂದಾವನ ಗಾರ್ಡನ್ಸ್-

ಮೈಸೂರಿನ ಬೃಂದಾವನ ಉದ್ಯಾನವನವು ತಲೆಮಾರುಗಳಿಂದ ಕುಟುಂಬಗಳಿಗೆ ನೆಚ್ಚಿನ ತಾಣವಾಗಿದೆ. ಕೃಷ್ಣರಾಜ್ ಸಾಗರ್ ಅಣೆಕಟ್ಟು ಸೇತುವೆ,, ಸುಂದರವಾದ ಭೂದೃಶ್ಯಗಳು , ದೋಣಿ ವಿಹಾರ ಮತ್ತು ಸಂಗೀತ ಕಾರಂಜಿಯು ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಇಲ್ಲಿನ ಲೇಸರ್ ಶೋನ ಸಂಗೀತ ಸಂಜೆಯನ್ನು ಪ್ರತಿಯೊಬ್ಬರೂ ನೋಡಲೇಬೇಕು.

ಬೃಂದಾವನ ಉದ್ಯಾನ

ರಂಗನತಿಟ್ಟು ಪಕ್ಷಿಧಾಮ-

ಅಭಯಾರಣ್ಯದಲ್ಲಿ ವಾಸಿಸುವ ವಲಸೆ ಹಕ್ಕಿಗಳ ಅದ್ಭುತ ಹಾರಾಡುವಿಕೆಯನ್ನು ಅನ್ನು ವೀಕ್ಷಿಸಲು ಕಾವೇರಿ ನದಿಯ ಬೋಟ್ ಸವಾರಿಗೆ ಹೋಗಿ. ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚು ಆಕರ್ಷಕವಾಗಿರುವ ರಂಗನತಿಟ್ಟು ಬಣ್ಣಬಣ್ಣದ ಕೊಕ್ಕರೆಗಳು, ಸ್ಪೂನ್‌ಬಿಲ್‌ಗಳು, ಕಪ್ಪು ತಲೆಯ ಐಬಿಸ್‌ಗಳು, ಹೆರಾನ್‌ಗಳು ಮತ್ತು ಸ್ಪಾಟ್-ಬಿಲ್ಡ್ ಪೆಲಿಕಾನ್‌ಗಳು ಕಣ್ಣುಗಳಿಗೆ ಔತಣವನ್ನು ನೀಡುತ್ತದೆ.

ಮೈಸೂರು ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂಗನತಿಟ್ಟು ಪಕ್ಷಿಗಳು     ಚಿತ್ರ ಕೃಪೆ: ಆನಂದ ಕುಮಾರ್

ಕೂರ್ಗ್-

ಕೂರ್ಗ್ ಕರ್ನಾಟಕದ ಅತ್ಯಂತ ಜನಪ್ರಿಯ ಗಿರಿಧಾಮವಾಗಿದ್ದು ಇದನ್ನು ‘ಭಾರತದ ಸ್ಕಾಟ್‌ಲ್ಯಾಂಡ್’ ಎಂದು ಕರೆಯಲಾಗುತ್ತದೆ ಮತ್ತು ಇದು ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇದು ಮಕ್ಕಳನ್ನು ಸೇರಿದಂತೆ ಎಲ್ಲ ವಯೋಮಾನದವರನ್ನು ಆಕರ್ಷಿಸುತ್ತದೆ.

ದುಬಾರೆ ಆನೆಗಳ ಶಿಬಿರ-

ಮಕ್ಕಳಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ ಮತ್ತು ಪೋಷಕರು ತಮ್ಮ ಮಕ್ಕಳು ಪ್ರಾಣಿಗಳೊಂದಿಗೆ ಆಟವಾಡುವುದನ್ನು ನೋಡಲು ಇಷ್ಟಪಡುತ್ತಾರೆ. ಪ್ರಾಣಿ ಆನೆಯಾಗಿದ್ದರೆ ಹೇಗಿರುತ್ತದೆ ? ಹೌದು, ದುಬಾರೆ ಆನೆ ಶಿಬಿರದಲ್ಲಿ ಒಬ್ಬರು ಆಟವಾಡಬಹುದು, ಅವುಗಳನ್ನು ಅಲಂಕರಿಸಬಹುದು ಮತ್ತು ಆನೆಗಳಿಗೆ ಆಹಾರ ನೀಡುತ್ತಿರುವ ಮಾವುತರನ್ನು ವೀಕ್ಷಿಸಬಹುದು. ಅದು ರೋಮಾಂಚನಕಾರಿ ಎಂದು ತೋರುತ್ತದೆ, ಅಲ್ಲವೇ? ನೀವು ಜಂಗಲ್ ಲಾಡ್ಜ್‌ನಲ್ಲಿರುವಾಗ, ಕಾವೇರಿ ನದಿಯಲ್ಲಿ ಕೊರಾಕಲ್ ಬೋಟ್‌ನಲ್ಲಿ ಸವಾರಿ ಮಾಡುವುದು ನಿಮಗೆ ತುಂಬಾ ಇಷ್ಟವಾಗುತ್ತದೆ. ಇದು ಖಂಡಿತವಾಗಿಯೂ ಮಕ್ಕಳನ್ನು ಆಕರ್ಷಿಸುತ್ತದೆ ಮತ್ತು ನೀವು ಇಲ್ಲಿ ಮೊಸಳೆಗಳನ್ನು ಸಹ ನೋಡಬಹುದು.

ದುಬಾರೆ ಆನೆ ಶಿಬಿರ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ:

ಈ ಕರ್ನಾಟಕದಲ್ಲಿ ಒಂದು ಕುಟುಂಬಕ್ಕೆ ಮತ್ತೊಂದು ರೋಮಾಂಚಕಾರಿ ಬೇಸಿಗೆ ರಜೆಯ ತಾಣವಾಗಿದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ. ನಾಗರಹೊಳೆ ಹುಲಿಗಳು, ಕಾಡೆಮ್ಮೆಗಳು, ಕಾಡು ನಾಯಿಗಳು, ಸಿವೆಟ್ಸ್ ಮತ್ತು ಇತರ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ.ಇಲ್ಲಿನ ಕಾಡಿನ ಮೌನದ ಧ್ವನಿಯನ್ನು ಕೇಳಿ, ಉಕ್ಕಿ ತೊರೆಯುವ ತೊರೆಗಳು, ಶಾಂತವಾದ ಸರೋವರಗಳು ಮತ್ತು ಅರಣ್ಯವು ಈ ಉದ್ಯಾನವನದ ಪ್ರಮುಖ ಆಕರ್ಷಣೆಗಳಾಗಿವೆ. ಬೇಸಿಗೆಯ ರಜಾದಿನಗಳಲ್ಲಿ ಮಕ್ಕಳು ಇಲ್ಲಿ ಉಳಿಯಲು ಖಂಡಿತ ಇಷ್ಟಪಡುತ್ತಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಗೋಕರ್ಣ-

ಕಡಲತೀರಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ವಿಶೇಷವಾಗಿ ಮಕ್ಕಳಿಗೆ ತುಂಬಾ ಇಷ್ಟ. ಈ ಬೇಸಿಗೆಯಲ್ಲಿ ಕಡಲ ತೀರದಲ್ಲಿ ಸ್ಪ್ಲಾಶ್ ಮಾಡುವುದು ಮಕ್ಕಳಿಗೆ ನೆಚ್ಚಿನ ವಿಹಾರವಾಗಿದೆ. ಗೋಕರ್ಣವು ಕರ್ನಾಟಕದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ.

  1. ಬೇಸಿಗೆ ರಜೆಯಲ್ಲಿ ಮಕ್ಕಳು ಮತ್ತು ಪೋಷಕರಿಗೆ ವಾಟರ್ ಸ್ಪೋರ್ಟ್ಸ್ ನೆಚ್ಚಿನ ಚಟುವಟಿಕೆಗಳಾಗಿವೆ.
  2. ಮರಳಿನಲ್ಲಿ ಆಟವಾಡುವುದು ಮತ್ತು ಸೂರ್ಯಾಸ್ತ ಆಗುತ್ತಿರುವಾಗ ಮರಳಿನಲ್ಲಿ ಕೋಟೆ ನಿರ್ಮಿಸುವುದು ಯುವಕ , ಯುವತಿಯರು ಮತ್ತು ಮಕ್ಕಳು ಇಷ್ಟ ಪಡುವ ಕೆಲಸವಾಗಿದೆ.
  3. ಪಾರಂಪರಿಕ ದೇವಾಲಯಗಳಿಗೆ ಭೇಟಿ ನೀಡಿ ಮತ್ತು ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಇಂದಿನ ಪೀಳಿಗೆಗೆ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಮಹಾಬಲೇಶ್ವರ ದೇವಾಲಯವು ಎಲ್ಲಾ ಮಕ್ಕಳು ಭೇಟಿ ನೀಡಲೇಬೇಕಾದ ಒಂದು ಪರಂಪರೆಯ ದೇವಾಲಯವಾಗಿದೆ.
  4. ದೋಣಿ ಸವಾರಿ, ಪ್ಯಾರಾಸೈಲಿಂಗ್ ಮತ್ತು ಜೆಟ್ ಸ್ಕೀಯಿಂಗ್‌ನಂತಹ ಜಲ ಕ್ರೀಡೆಗಳೊಂದಿಗೆ ಆ ಅಡ್ರಿನಾಲಿನ್ ರಶ್‌ಗಳನ್ನು ಪಡೆಯಿರಿ.

ಗೋಕರ್ಣ ಮತ್ತು ಉತ್ತರ ಕನ್ನಡ ಜಿಲ್ಲೆಯ ಇತರ ಸ್ಥಳಗಳಿಗಾಗಿ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಗೋಕರ್ಣ ಬೀಚ್