Karnataka logo

Karnataka Tourism
GO UP
Nagarhole National Park

ನಾಗರಹೊಳೆ –ರೋಮಾಂಚಕಾರಿ ಸಫಾರಿ

separator
  /  ಬ್ಲಾಗ್   /  ನಾಗರಹೊಳೆ –ರೋಮಾಂಚಕಾರಿ ಸಫಾರಿ
Nagarhole Wildlife Experience

ನಾಗರಹೊಳೆ

ನೀವು ನಿಮ್ಮ ವಾರಾಂತ್ಯದ ರಜೆಯ ಕುರಿತು ಯೋಚಿಸುತ್ತಿರುವಿರಾ? ಬೆಂಗಳೂರು, ಮೈಸೂರು, ಮಂಡ್ಯ ಅಥವಾ ಕೂರ್ಗ್‌ಗೆ ಹತ್ತಿರ ಇರುವ ಪ್ರದೇಶಗಳ ಕುರಿತು ಯೋಚಿಸುತ್ತಿರುವಿರಾ? ಹಾಗಾದರೆ ನಿಮಗೆ ಉತ್ತಮವಾದ ವಾರಾಂತ್ಯದ ಪ್ರದೇಶವೆಂದರೇ ಕಬಿನಿ ಅಥವಾ ನಾಗರಹೊಳೆ . ನಾಗರಹೊಳೆಗೆ ಪ್ರತಿ ಬಾರಿಯು ನಿಮಗೆ ಹೊಸದಂತೆ ಕಾಣುತ್ತದೆ. ನಾಗರಹೊಳೆ ಅಥವಾ ಕಬಿನಿಯಲ್ಲಿ ನೀವು  ಪ್ರತಿ ಬಾರಿಯೂ  ಹೊಸದನ್ನು ಅನುಭವಿಸುತ್ತೀರಿ.

ಬೇಸಿಗೆ ಸಮೀಪಿಸುತ್ತಿದ್ದಂತೆ, ಕಾಡು ಬೆಕ್ಕುಗಳು ಮತ್ತು ಕಾಡಿನ ಇತರ ಆವಾಸಸ್ಥಾನಗಳನ್ನು ನೋಡುವ ಸಂಭವನೀಯತೆ ಸಾಕಷ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ಕರ್ನಾಟಕದ ದಟ್ಟವಾದ ಕಾಡುಗಳ ನಡುವೆ ಈ  ಅನಿರೀಕ್ಷಿತ, ರೋಮಾಂಚಕ ಮತ್ತು ಸಾಹಸಮಯ ಪ್ರಯಾಣಕ್ಕಾಗಿ ನಿಮ್ಮ ಕ್ಯಾಮೆರಾಗಳನ್ನು ಚಾರ್ಜ್ ಮಾಡಿ.  ಕಬಿನಿ ನದಿಯ ದಡದಲ್ಲಿರುವ ನಾಗರಹೊಳೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲೇ ಹೆಚ್ಚು ಬೇಡಿಕೆಯಿರುವ ಕಾಡುಗಳಲ್ಲಿ ಒಂದಾಗಿದೆ. ಇದು ಹಲವಾರು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳಿಗೆ ಆವಾಸ ಸ್ಥಾನವಾಗಿದೆ.ಸಫಾರಿಯ ಆನಂದವನ್ನು ನಿಮ್ಮದಾಗಿಸಿಕೊಳ್ಳಿ. ಇಲ್ಲಿ ಕಂಡು ಬರುವ  ಓರಿಯೆಂಟಲ್ ಬಿಳಿ ಬೆನ್ನಿನ ರಣಹದ್ದುಗಳು ಮತ್ತು ಗರುಡಗಳು,  ನೀಲಗಿರಿ ಮರದ ಪಾರಿವಾಳ, ಭಾರತೀಯ ಕಾಡೆಮ್ಮೆ ಮುಂತಾದ ಅಪರೂಪದ ಪ್ರಾಣಿಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ನಾಗರಹೊಳೆ ಕುರಿತು

About Nagarhole

ಟೈಗರ್ ಜೋಡಿ

ನಾಗರಹೊಳೆಯ 640 ಚದರ ಕಿ.ಮೀ ದಟ್ಟವಾದ ಅರಣ್ಯವು ಕರ್ನಾಟಕ ಪ್ರದೇಶದ ಮೈಸೂರು ಪ್ರಸ್ಥಭೂಮಿಗಳು ಮತ್ತು ತಮಿಳುನಾಡಿನ ನೀಲಗಿರಿ ಶ್ರೇಣಿಗಳ ನಡುವೆ ಇದೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲ್ಪಡುವ ಈ ಅಭಯಾರಣ್ಯವು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿದೆಈ ಅಭಯಾರಣ್ಯವು ಬಂಗಾಳ ಹುಲಿಗಳು, ಚಿರತೆಗಳು ಮತ್ತು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆಗಳಿಗೆ ನೆಲೆಯಾಗಿದೆ. ಇದು ಸಸ್ಯ ಮತ್ತು ಪ್ರಾಣಿಗಳು, ವಲಸೆ ಹಕ್ಕಿಗಳು, ಸರೀಸೃಪಗಳು, ಗೌರ್ ಗಳು, ಜಿಂಕೆಗಳು, ಹುಲ್ಲೆಗಳು, ಕಾಡು ನಾಯಿಗಳು, ಕರಡಿಗಳು ಮತ್ತು ಹಲವಾರು ಇತರ ಸಣ್ಣ, ಸಾಮಾನ್ಯ ಮತ್ತು ಅಪರೂಪದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಇಲ್ಲಿ ಕಂಡುಬರುವ  ಬ್ಲ್ಯಾಕ್ ಪ್ಯಾಂಥರ್ಸ್ ವಿಶೇಷವಾಗಿ ಬಘೀರಾ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಇದು ಬಹಳಷ್ಟು ಪ್ರಯಾಣಿಕರನ್ನು ಆಕರ್ಷಿಸಿದೆ. ಈ ಬಹುಕಾಂತೀಯ ಮತ್ತು ಅಪರೂಪದ ಕಾಡು ಬೆಕ್ಕನ್ನು ಗುರುತಿಸಲು ನೀವು ಅದೃಷ್ಟವಂತರಾಗಿರಬೇಕು. ಇಲ್ಲಿ ಎತ್ತರದ ರೋಸ್‌ವುಡ್, ತೇಗದ ಮರಗಳು, ಶ್ರೀಗಂಧ ಮರಗಳು ಮತ್ತು ಸಿಲ್ವರ್ ಓಕ್‌ನಂತಹ ಇತರ ಮರಗಳು ಹೇರಳವಾಗಿ ಕಂಡುಬರುತ್ತವೆ.

ಏನನ್ನು ನೋಡಬೇಕು ಮತ್ತು ಮಾಡಬೇಕು?

ಪುನಃ ಚೇತನಗೊಳ್ಳಿ, ರಿಲ್ಯಾಕ್ಸ್ ಆಗಿ

About Rejuvenate

ಕಬಿನಿ ನದಿಯಲ್ಲಿ ಸೂರ್ಯೋದಯ

ಜಂಗಲ್ ಲಾಡ್ಜ್ ಎಲ್ಲ ರೀತಿಯ ಆನಂದವನ್ನು ಅನುಭವಿಸಿ. ವಿವಿಧ ಬಗೆಯ ರುಚಿಕರವಾದ ಆಹಾರಗಳನ್ನು ಸೇವಿಸಿ.  ಜಂಗಲ್ ಲಾಡ್ಜ್ ಸುತ್ತ ಹಸಿರೇ ಹಸಿರು. ಇಂತಹ ಸುಂದರ ವಾತಾವರಣದಲ್ಲಿ ನಿಮ್ಮನ್ನು ನೀವು ಮರೆಯುವುದು ಖಂಡಿತ.  ಜಂಗಲ್ ಲಾಡ್ಜಗಳಲ್ಲಿ ನೀವು ಎರಡು ಮೂರು ದಿನ ಕಳೆಯುವುದು ನಿಮಗೆ ಅದ್ಭುತ ಅನುಭವನ್ನು ನೀಡುತ್ತದೆ. ಈ ಅವಕಾಶವನ್ನು ಚೆನ್ನಾಗಿ ಅನುಭವಿಸಿ. ಉತ್ತಮ ಮನರಂಜನೆ ಮತ್ತು ವಿಶ್ರಾಂತಿ ನಿಮ್ಮದಾಗಲಿ.

ಇಲ್ಲಿ ನಿಮಗೆ ವೆಲನೆಸ್ ಮತ್ತು ರಿಕ್ರಿಯೇಷನಲ್ ಪ್ಯಾಕೇಜಗಳು ಲಭ್ಯ. ಈ ಪ್ಯಾಕೇಜಗಳು ಮಸಾಜ್ ಮತ್ತು ಸುಸಜ್ಜಿತ ಬಾರ್ ಸೌಲಭ್ಯಗಳನ್ನು ಸಹ ಹೊಂದಿರುತ್ತವೆ. ಕಾಡಿನ ಸಂಬಂಧಿತ ಚಿತ್ರಗಳನ್ನು ನೀವು ಆನಂದಿಸಿ. ಈ ಚಿತ್ರಗಳು ಮಕ್ಕಳನಷ್ಟೇ ಅಲ್ಲ ದೊಡ್ಡವರನ್ನು ಸಹ ಆಕರ್ಷಿಸುತ್ತದೆ.

ಸಾಹಸ

Makar Sankranti

ಕಬಿನಿ ನವಿಲು ಮತ್ತು ಸಫಾರಿ

ನಾಗರಹೊಳೆಯಲ್ಲಿ ಸಾಹಸ ಚಟುವಟಿಕೆಗಳು ಮತ್ತು ಉತ್ಸಾಹವು ನಿಮ್ಮನ್ನು ಕಾಯುತ್ತಿದೆ. ನೀವು ಬೋಟ್ ಸಫಾರಿಯಲ್ಲಿ ಜೀಪ್ ಅಥವಾ  ಕ್ರೂಸ್ ಮೂಲಕ ಕಾಡಿನೊಳಗೆ ಪ್ರವೇಶಿಸಬಹುದು. ನೀವು ಎರಡು ಸಫಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಈ ಎರಡು ಸಫಾರಿಗಳ  ಮೋಜು ಮತ್ತು ಸಾಹಸ ಒಂದೇ ಆಗಿರುತ್ತದೆ ಎಂದು ಭಾವಿಸಬೇಡಿ. ಈ ಎರಡೂ ಸಫಾರಿಗಳ ಸುಂದರ ಅನುಭವನ್ನು ನಿಮ್ಮದಾಗಿಸಿಕೊಳ್ಳಿ.   ಕಾಡುಗಳ ಮೂಲಕ ಕಬಿನಿ ನದಿಯ ಹಿನ್ನೀರಿನ ಮೇಲೆ ದೋಣಿಯಲ್ಲಿ ಸಾಗಿ. ಈ ಸಮಯದಲ್ಲಿ ನೀವು ಅದ್ಭುತ ದೃಶ್ಯಗಳನ್ನು ನೋಡಬಹುದು.  ಪ್ರಾಣಿಗಳು ವಿಶೇಷವಾಗಿ ಆನೆಗಳು ನದಿಯ ದಡದಲ್ಲಿ ನೀರು ಕುಡಿಯುವುದನ್ನು ಅಥವಾ ಮೋಜಿನ ಸ್ನಾನ ಮಾಡುವುದನ್ನು ನೋಡಿ ಆನಂದಿಸಿ. ಈ ಸಮಯದಲ್ಲಿ ನೀವು ವನ್ಯಜೀವಿಗಳ ಚಟುವಟಿಕೆಗಳನ್ನು ನೋಡುವುದನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಕಬಿನಿ ನದಿಯ ಹಿನ್ನೀರಿನ ಬಳಿ 1000 ಆನೆಗಳ ಗುಂಪನ್ನು ನೀವು ನೋಡಬಹುದು.  ಏಷ್ಯಾದ ಅತಿದೊಡ್ಡ ಆನೆಗಳ ಈ ಸಭೆಯನ್ನು ನೀವು ವೀಕ್ಷಿಸಿದರೆ ನೀವೇ ಅದೃಷ್ಟಶಾಲಿ ಎಂದು ಪರಿಗಣಿಸಿ. ಕೆಲವೊಮ್ಮೆ ನಿಮ್ಮೊಂದಿಗೆ ಪಯಣಿಸುವ ಸಫಾರಿ ಗೈಡ್ ಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆಸಕ್ತಿದಾಯಕ ಕಾಡಿನ ಕಥೆಗಳನ್ನು ಹಂಚಿಕೊಳ್ಳುತ್ತಾರೆ.

ನಾಗರಹೊಳೆಯಲ್ಲಿ ವನ್ಯಜೀವಿ ಸಫಾರಿ

Makar Sankranti

ಕಬಿನಿ ಸಫಾರಿ

ನೀವು ನಿಮ್ಮ ಬಜೆಟ್ ಮತ್ತು ಅನುಕೂಲತೆಯ ಆಧಾರದ ಮೇಲೆ ಸಫಾರಿ  ಸೌಲಭ್ಯವನ್ನು ಆಯ್ಕೆ ಮಾಡಬಹುದು.  ಸಫಾರಿಗಳಲ್ಲಿ ಜೀಪ್ ಮತ್ತು ಬೋಟ್ ಎಂಬ ಎರಡು ವಿಧಗಳಿವೆ. ಕಬಿನಿ ಹಿನ್ನೀರಿನಲ್ಲಿ ಮೋಟರ್ ಬೋಟ್ ಮೂಲಕ ಸಫಾರಿ ಮಾಡುವುದು ರೋಚಕ ಅನುಭವನ್ನು ನೀಡುತ್ತದೆ . ಆದಾಗ್ಯೂ, ಅರಣ್ಯ ಇಲಾಖೆಯು  ಪ್ರವಾಸಿಗರಿಗಾಗಿ ಸಫಾರಿಗಳನ್ನು ಆಯೋಜಿಸುತ್ತದೆ, ಜಂಗಲ್ ಲಾಡ್ಜಸ್ ರೆಸಾರ್ಟ್‌ಗಳು ನಡೆಸುವ ಸಫಾರಿಗಳು ಸ್ವತಃ ಒಂದು ರೋಮಾಂಚಕ  ಅನುಭವವಾಗಿದೆ. ಪ್ರತಿ ಸಫಾರಿಯು ಸುಮಾರು 2 ರಿಂದ 2 ಮತ್ತು ಅರ್ಧ ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಇದನ್ನು  ದಿನಕ್ಕೆ ಎರಡು ಬಾರಿ ನಡೆಸಲಾಗುತ್ತದೆ.

ಸಲಹೆ: ಸಫಾರಿಗಾಗಿ ಪೂರ್ವ-ಬುಕಿಂಗ್ ಮಾಡುವುದು ಸೂಕ್ತವಾಗಿದೆ.

ಭೇಟಿ ನೀಡುವ ಸಮಯ

Adventure

ಕಬಿನಿ ಭೂದೃಶ್ಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ

ನೀವು ಒಬ್ಬ ಉತ್ಸಾಹಿ ಪ್ರವಾಸಿಗರು, ಪಯಣಿಗರು ಅಥವಾ ಅನ್ವೇಷಕರು ಆಗಬಹುದು. ಆದರೆ ಫಾರೆಸ್ಟ್ ಸ್ಟೇ ಎಂಬುದು ಎಲ್ಲರಿಗೂ ಅನನ್ಯ ಅನುಭವವನ್ನು ನೀಡುತ್ತದೆ.ನಾಗರಹೊಳೆ ಪ್ರಕೃತಿ ಪ್ರಿಯರು, ವನ್ಯಜೀವಿ ಛಾಯಾಗ್ರಹಕರು, ಪಕ್ಷಿ ವೀಕ್ಷಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಮಾರ್ಚ್, ಏಪ್ರೀಲ್ ಮತ್ತು ಮೇ ತಿಂಗಳು ತುಂಬಾ ಬಿಸಿಲಿರುತ್ತದೆ. ಆದರೆ ಈ ಸಮಯದಲ್ಲಿ ವನ್ಯಜೀವಿಗಳು ಅದರಲ್ಲೂ ವಿಶೇಷವಾಗಿ ಆನೆಗಳು ನದಿಯ ದಡದಲ್ಲಿ ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.ಇಲ್ಲಿ ಮಾನ್ಸೂನ್ ತಿಂಗಳುಗಳು ಹಚ್ಚ ಹಸಿರಿನಿಂದ ಕೂಡಿರುತ್ತವೆ ಮತ್ತು ಈ ಸಮಯದಲ್ಲಿ ಪ್ರಾಣಿಗಳು ಕಡಿಮೆ ಕಂಡುಬರುತ್ತವೆ.  ಚಳಿಗಾಲದ ತಿಂಗಳುಗಳು ತಂಪಾಗಿದ್ದು ಈ ಸಮಯದಲ್ಲಿ ನೀವು ಸುಂದರ ಪ್ರಕೃತಿ ದೃಶ್ಯಗಳನ್ನು ಸವಿಯಬಹುದು.

ವಸತಿ ಸೌಲಭ್ಯ

ನಿಮಗೆ ಕಾಡಿನೊಳಗೆ ವಸತಿ ಸೌಲಭ್ಯಕ್ಕಾಗಿ  ಒಂದೆರಡು ಆಯ್ಕೆಗಳು ಲಭ್ಯವಿವೆ. ಆದರೆ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳ ಸರ್ಕಾರಿ ಸ್ವಾಮ್ಯದ ಕಬಿನಿ ರಿವರ್ ಲಾಡ್ಜ್ ಅತ್ಯಂತ ಜನಪ್ರಿಯವಾಗಿದೆ. ನೀವು ಇಲ್ಲಿ ಉಳಿದರೆ  ಅತ್ಯುತ್ತಮ ಸಫಾರಿಗಳನ್ನು ನೀವು ವೀಕ್ಷಿಸಬಹುದು.

ರೆಸಾರ್ಟ್ ಸಂಪರ್ಕ ಮಾಹಿತಿ

ಕಬಿನಿ ರಿವರ್ ಲಾಡ್ಜ್, ನಿಸ್ಸಾನ ಬೆಳ್ತೂರು  ಪೋಸ್ಟ್, ಎಚ್‌ಡಿ ಕೋಟೆ ತಾಲೂಕು, ಕಾರಾಪುರ, ಮೈಸೂರು ಸುತ್ತಮುತ್ತ – 571 114 ಕರ್ನಾಟಕ,

ವ್ಯವಸ್ಥಾಪಕರು: ಶ್ರೀ ಅನಿಕೇತನ್ ಸಿ

ಸಂಪರ್ಕ ಸಂಖ್ಯೆ: : +91 9449597896
ಇಮೇಲ್ ಐಡಿ: info@junglelodges.com
ನಾಗರಹೊಳೆ ಅರಣ್ಯ ಸಫಾರಿ ಮತ್ತು ಕಬಿನಿ ರಿವರ್ ಲಾಡ್ಜ್ ವಾಸ್ತವ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ, Junglelodges.com ಗೆ ಭೇಟಿ ನೀಡಿ

ತಲುಪುವುದು ಹೇಗೆ?

ನಾಗರಹೊಳೆಯು ಅರಣ್ಯ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಪ್ರವೇಶಿಸಲು ಅಗತ್ಯ ಅನುಮತಿಯ ಅಗತ್ಯವಿದೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಿಂದ ರಸ್ತೆಯ ಮೂಲಕ ಈ ಆರಣ್ಯವನ್ನು ಪ್ರವೇಶಿಸಬಹುದಾಗಿದೆ.

ವಿಮಾನದ ಮೂಲಕ

ಬೆಂಗಳೂರು ಮತ್ತು ಮಂಗಳೂರು ವಿಶ್ವದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಹತ್ತಿರದ ದೇಶೀಯ ವಿಮಾನ ನಿಲ್ದಾಣವೆಂದರೆ ಮೈಸೂರು ಇದು ಬೆಂಗಳೂರಿಗೆ ಸಂಪರ್ಕ ಹೊಂದಿದೆ.

ರೇಲ್ವೆ ಮೂಲಕ

ಮೈಸೂರು ಹತ್ತಿರದ ರೈಲು ನಿಲ್ದಾಣವಾಗಿದೆ ಮತ್ತು ಇದು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ರಸ್ತೆ ಮೂಲಕ

ನೀವು ನಾಗರಹೊಳೆಯನ್ನು ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ಇದು ಬೆಂಗಳೂರಿನಿಂದ 223 ಕಿಮೀ ದೂರದಲ್ಲಿದೆ ಮತ್ತು ಮೈಸೂರಿನಿಂದ ಕೇವಲ 75 ಕಿಮೀ ದೂರದಲ್ಲಿದೆ.

ಸಲಹೆಗಳು

  1. ನೀವು ಲಸಿಕೆ ಹಾಕಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಎಲ್ಲಾ ಸಮಯದಲ್ಲೂ ಮಾಸ್ಕ್ ಧರಿಸಿ.
  2. ದಯವಿಟ್ಟು ಸಫಾರಿ ಸಮಯ, ವೆಚ್ಚ ಮತ್ತು ಮೋಡ್ ಕುರಿತು  ಮುಂಚಿತವಾಗಿ ಖಚಿತಪಡಿಸಿಕೊಳ್ಳಿ. ಜೀಪ್ ಮತ್ತು ಬೋಟ್ ಸಫಾರಿಗಳಲ್ಲಿ ಎರಡು ವಿಧಗಳಿವೆ.
  3. ಸಫಾರಿ ಸುಂಕಗಳ ಹೊರತಾಗಿ DSLR ಮತ್ತು ವೀಡಿಯೊ ಕ್ಯಾಮರಾಗಳು ಪ್ರವೇಶ ಶುಲ್ಕವನ್ನು ಹೊಂದಿವೆ.
  4. ಸೂಕ್ತವಾದ ಬಟ್ಟೆಗಳನ್ನು ಧರಿಸಿ. ಗಾಢವಾದ ಬಣ್ಣಗಳನ್ನು ತಪ್ಪಿಸಿ ಮತ್ತು ಖಾಕಿ, ಕಡು ಹಸಿರು, ಕಂದು ಮುಂತಾದ ಮಣ್ಣಿನ ಜಂಗಲ್ ಬಣ್ಣಗಳನ್ನು ಆಯ್ಕೆಮಾಡಿ.
  5. ಆರಾಮದಾಯಕ ಬೂಟುಗಳನ್ನು ಧರಿಸಿ.
  6. ಸಫಾರಿ ಸಮಯದಲ್ಲಿ ಹೆಚ್ಚು ಶಬ್ದ ಮಾಡಬೇಡಿ.
  7. ಪ್ರಾಣಿಗಳಿಗೆ ಆಹಾರ ನೀಡುವುದು ಅಥವಾ ಕೀಟಲೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  8. ಪ್ಲಾಸ್ಟಿಕ್ ಬಳಕೆ ತಪ್ಪಿಸಿ ಮತ್ತು ಎಲ್ಲೆಂದರಲ್ಲಿ ಕಸ ಹಾಕಬೇಡಿ.