Karnataka logo

Karnataka Tourism
GO UP
Image Alt

ಕೋಟಿಲಿಂಗೇಶ್ವರ ದೇವಾಲಯ

separator
  /  ಬ್ಲಾಗ್   /  ಕೋಟಿಲಿಂಗೇಶ್ವರ ದೇವಾಲಯ
ಕೋಟಿಲಿಂಗೇಶ್ವರ ದೇವಾಲಯ

ಕೋಟಿಲಿಂಗೇಶ್ವರ ದೇವಾಲಯಏಷ್ಯಾದಲ್ಲೇ ಅತಿ ದೊಡ್ಡದಾದ ಶಿವಲಿಂಗ ದೇವಾಲಯ

ನಾವು ನಿಧಾನ ಮತ್ತು ಹೆಚ್ಚು ಅರ್ಥಪೂರ್ಣ ಪ್ರಯಾಣದತ್ತ ಸಾಗುತ್ತಿರುವಾಗ, ದೀರ್ಘಾವಧಿಗಿಂತ ಒಂದು ವರ್ಷದಲ್ಲಿ ಹೆಚ್ಚು ಸಣ್ಣ ಪ್ರವಾಸಗಳನ್ನು ಕೈಗೊಳ್ಳುವುದು ಹೆಚ್ಚು ಅರ್ಥಪೂರ್ಣವಾಗಿದೆ. ಬೆಂಗಳೂರಿಗರು ತಮ್ಮ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯ ನಡುವೆ ಅವರು ನಿರ್ವಹಿಸಬಹುದಾದ ಸಣ್ಣ ವಾರಾಂತ್ಯದ ವಿಹಾರಗಳನ್ನು ಯಾವಾಗಲೂ ಹುಡುಕುತ್ತಿರುತ್ತಾರೆ. ಟ್ರೆಕ್ಕಿಂಗ್, ಗಿರಿಧಾಮಗಳು, ರಸ್ತೆ ಪ್ರವಾಸಗಳು ಮತ್ತು ಐತಿಹಾಸಿಕ ಸ್ಥಳಗಳು ಯಾವಾಗಲೂ ಹೆಚ್ಚು ಬೇಡಿಕೆಯಿರುವ ಪ್ರವಾಸೋದ್ಯಮಗಳಾಗಿದ್ದರೂ ಸಹ, ಕರ್ನಾಟಕದ ದೇವಾಲಯಗಳು ವಿಶೇಷ ಸ್ಥಾನವನ್ನು ಹೊಂದಿವೆ. ಕರ್ನಾಟಕದ ಐತಿಹಾಸಿಕ ಸ್ಮಾರಕಗಳು ಎಲ್ಲಾ ಪ್ರಕಾರಗಳನ್ನು ಆಕರ್ಷಿಸುತ್ತವೆ. ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇವಾಲಯ ಅಂತಹ ಆಕರ್ಷಕ  ದೇವಾಲಯಗಳಲ್ಲಿ ಒಂದಾಗಿದ್ದು ಸಾಕಷ್ಟು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕೋಲಾರವು ತನ್ನ ಚಿನ್ನದ ಗಣಿಗಳಿಗೆ  ಹೆಸರುವಾಸಿಯಾಗಿದೆ ಆದರೆ ದುರದೃಷ್ಟವಶಾತ್, ಪ್ರವಾಸಿಗರಾಗಿ ನೀವು ಅವುಗಳನ್ನು ನೋಡಲು  ಸಾಧ್ಯವಿಲ್ಲ. ಆದಾಗ್ಯೂ, ಬೆಂಗಳೂರಿನಿಂದ ಕೋಲಾರಕ್ಕೆ ಸ್ವಲ್ಪ ದೂರದಲ್ಲಿ, ಸುಮಾರು 70 ಕಿಮೀ ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವು ನಿಮ್ಮನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಇರುವ  ಹಸಿರು ಕೃಷಿಭೂಮಿಗಳು, ಕಲ್ಲಿನ ಭೂಪ್ರದೇಶದ ನೋಟಗಳು, ಸುಸಜ್ಜಿತವಾದ ರಸ್ತೆಯು ದೇವಸ್ಥಾನಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಈ ದೇವಸ್ಥಾನವು ಕೋಲಾರದ ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ.

ಕೋಟಿಲಿಂಗೇಶ್ವರ ದೇವಾಲಯ

ಕೋಟೆ ಲಿಂಗೇಶ್ವರ ದೇವಸ್ಥಾನದ ಕುರಿತು

ಕನ್ನಡದಲ್ಲಿ ‘ಕೋಟಿ’ ಎಂದರೆ ಕೋಟಿ ಮತ್ತು ಕೋಟಿಲಿಂಗೇಶ್ವರ ಎಂದರೆ 1 ಕೋಟಿ ಶಿವಲಿಂಗಗಳು. ಇಲ್ಲಿ  ವಿಶ್ವದ ಅತಿ ಎತ್ತರದ ಶಿವಲಿಂಗವನ್ನು ಹೊಂದಿರುವ ದೇವಾಲಯವನ್ನು ಸ್ಥಾಪಿಸಲಾಗಿದ್ದು,  ಇದರ ಜೊತೆಗೆ ವಿವಿಧ ಗಾತ್ರದ 90+ ಲಕ್ಷ ಇತರ ಶಿವಲಿಂಗಗಳಿವೆ. 33 ಮೀಟರ್ ಎತ್ತರದ ಶಿವಲಿಂಗ ಮತ್ತು 11 ಮೀಟರ್ ಎತ್ತರದ ನಂದಿ, ಮಹಿಷಿಯು ಈ ದೇವಾಲಯದ ಪ್ರಮುಖ ಆಕರ್ಷಣೆಗಳಾಗಿವೆ. ನೀವು ದೇವಾಲಯಕ್ಕೆ ವಿವಿಧ ಗಾತ್ರದ ಶಿವಲಿಂಗಗಳನ್ನು ದೇಣಿಗೆಯಾಗಿ ನೀಡಬಹುದು ಮತ್ತು ಅದರ ಮೇಲೆ ದಾನಿಗಳ ಹೆಸರನ್ನು ಅಳವಡಿಸಬಹುದಾಗಿದೆ.

ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ದೇವರು

1980 ರಲ್ಲಿ ಈ ದೇವಾಲಯವನ್ನು ಸ್ವಾಮಿ ಸಾಂಭ ಶಿವ ಮೂರ್ತಿ ಎಂಬ ಗಣ್ಯರು ನಿರ್ಮಿಸಿದರು.  ಇದು ಕೋಲಾರ ಜಿಲ್ಲೆಯ ಸಣ್ಣ ಹಳ್ಳಿಯಾದ ಕಮ್ಮಸನದ್ರದಲ್ಲಿದೆ. ಈ ದೇವಾಲಯಕ್ಕೆ ಪ್ರತಿದಿನ ಸಾಕಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಹರಕೆಯನ್ನು ಸಲ್ಲಿಸಿ ಆಶೀರ್ವಾದವನ್ನು ಪಡೆಯುತ್ತಾರೆ, ವಿಶೇಷವಾಗಿ ಮಹಾ ಶಿವರಾತ್ರಿಯಂದು ದೇವಾಲಯವು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಿವರಾತ್ರಿಯು ಶಿವನಿಗೆ ಸಮರ್ಪಿತವಾದ ಹಬ್ಬವಾಗಿದ್ದು ಪ್ರತಿ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬರುತ್ತದೆ. ಇದು ಸಮಸ್ತ ಹಿಂದುಗಳಿಗೆ ಪೂಜನೀಯ ಸ್ಥಳವಾಗಿದೆ.

ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ

ನೀವು ಈ ದೇವಸ್ಥಾನದಲ್ಲಿ ವಿಷ್ಣು, ಬ್ರಹ್ಮ, ಮಹೇಶ್ವರ, ರಾಮ, ದೇವಿ ಅನ್ನಪೂರ್ಣೇಶ್ವರಿ, ಕರುಮಾರಿ ಅಮ್ಮ, ವೆಂಕಟರಮಣ ಸ್ವಾಮಿ, ಪಾಂಡುರಂಗ ಸ್ವಾಮಿ, ರಾಮ, ಸೀತಾ ಮತ್ತು ಲಕ್ಷ್ಮಣ ದೇವಸ್ಥಾನ, ಪಂಚಮುಖ ಗಣಪತಿ, ಆಂಜನೇಯ ಮುಂತಾದ ಇತರ ದೇವತೆಗಳಿಗೆ ಅರ್ಪಿತವಾಗಿರುವ ಇತರ 11 ಸಣ್ಣ ದೇವಾಲಯಗಳನ್ನು ನೋಡಬಹುದು. ಮತ್ತು ಇದೇ ಆವರಣದಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನವಿದ್ದು  ಮಾತೆಯ ದರ್ಶನವನ್ನು ನೀವು ಪಡೆಯಬಹುದು.

ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗಗಳು

ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಿರುವ ಸೌಲಭ್ಯಗಳು

ಇದು ಪ್ರಾಚೀನ ಕಾಲದ ದೇವಾಲಯವಲ್ಲ. ಈ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಎಲ್ಲಾ ಮೂಲಭೂತ ಸೌಕರ್ಯಗಳು ಲಭ್ಯವಿದೆ. ವಾಶ್‌ರೂಮ್‌ಗಳು, ಕೈ ತೊಳೆಯಲು ವಿವಿಧ ಸ್ಥಳಗಳಲ್ಲಿ ನಲ್ಲಿಗಳು, ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ವಿವಾಹ ಮಂದಿರ, ಧ್ಯಾನ ಮಂದಿರ ಮತ್ತು ಆವರಣದಲ್ಲಿ ಪ್ರದರ್ಶನ ಕೇಂದ್ರ, ಹೀಗೆ ಹಲವು ಸೌಲಭ್ಯಗಳನ್ನು ನೀವು ಕಾಣಬಹುದು. ದೇವಸ್ಥಾನದ ಹೊರಭಾಗದಲ್ಲಿ ಚಿಕ್ಕ ಚಿಕ್ಕ ಮಾರುಕಟ್ಟೆ ಇದ್ದು, ಚಿಕ್ಕ ಶಿವಲಿಂಗಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ. ಸಾಕಷ್ಟು ಪಾರ್ಕಿಂಗ್ ಸ್ಥಳಗಳು ಮತ್ತು ಆಹಾರ ಮಳಿಗೆಗಳು ಲಭ್ಯವಿದೆ.

ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗಗಳು

ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನವನ್ನು ತಲುಪುವುದು ಹೇಗೆ?

ವಿಮಾನದ ಮೂಲಕ

ಬೆಂಗಳೂರು ಕೆಂಪೇಗೌಡ ಹತ್ತಿರದ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಿಂದ ಕೋಲಾರವನ್ನು ತಲುಪಲು ಪ್ರಯಾಣಿಕರು ಟ್ಯಾಕ್ಸಿಗಳನ್ನು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಾಡಿಗೆಗೆ ಪಡೆಯಬಹುದು. ಇದು ಸುಮಾರು 100 ಕಿಮೀಯ ಪ್ರಯಾಣವಾಗಿದೆ ಮತ್ತು ತಲುಪಲು ಸುಮಾರು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ರೈಲು ಮೂಲಕ

ಬೆಂಗಳೂರು, ಮಂಗಳೂರು, ಹಾಸನ ಮತ್ತು ಹುಬ್ಬಳ್ಳಿಯಿಂದ ಕೋಲಾರಕ್ಕೆ ಉತ್ತಮ ಸಂಪರ್ಕವಿರುವ ರೈಲು ಸೌಲಭ್ಯವಿದೆ.

ರಸ್ತೆ ಮೂಲಕ

ಬೆಂಗಳೂರಿನಿಂದ ರಸ್ತೆ ಸಾರಿಗೆ ಮೂಲಕ ಕೋಲಾರವನ್ನು ತಲುಪಬಹುದು. ಇದು ಸುಮಾರು 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಈ ಸಮಯದಲ್ಲಿ ನೀವು  ರಸ್ತೆಯ ಎರಡೂ ಬದಿಗಳಲ್ಲಿ ಇರುವ ಕೃಷಿಭೂಮಿಗಳ ಹಚ್ಚ ಹಸಿರಿನ ಸಿರಿಯನ್ನು ಆನಂದಿಸಬಹುದು

ಹೆಚ್ಚಿನ ಮಾಹಿತಿ:

  • ದೇವಸ್ಥಾನ ಪ್ರವೇಶ ಸಮಯ : 6:00 AM- 9:00 PM
  • ದೇವಾಲಯದ ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ ರೂ 20
  • ಕ್ಯಾಮರಾ ಶುಲ್ಕ: ರೂ 100
  • ಪಾರ್ಕಿಂಗ್ ಶುಲ್ಕಗಳು: ರೂ 30
  • ಶಿವಲಿಂಗ ಪ್ರತಿಷ್ಠಾಪನೆ ಶುಲ್ಕ: ರೂ 6,000 ರಿಂದ ಪ್ರಾರಂಭವಾಗುತ್ತದೆ, ಯಾರು ಬೇಕಾದರೂ ಅದನ್ನು ತಮ್ಮ ಹೆಸರಿನಲ್ಲಿ ಸ್ಥಾಪಿಸಬಹುದು.
  • ಬೆಂಗಳೂರಿನಿಂದ ದೇವಸ್ಥಾನವನ್ನು ತಲುಪಲು ಸುಮಾರು ಎರಡೂವರೆ ಗಂಟೆಗಳು ಬೇಕಾಗುತ್ತದೆ ಮತ್ತು ಮಾರ್ಗವು ಪ್ರಯಾಣಕ್ಕೆ ತುಂಬಾ ಚೆನ್ನಾಗಿದೆ.
ಇನ್ನಷ್ಟು ತಿಳಿಯಲು ಮತ್ತು ಕೋಲಾರವನ್ನು ಹೇಗೆ ತಲುಪುವುದು ಇಲ್ಲಿ ಕ್ಲಿಕ್ ಮಾಡಿ