ಕರ್ನಾಟಕದಲ್ಲಿ ಸೈಕಲ್ ಟೂರ್
ಕರ್ನಾಟಕವು ಅತ್ಯುತ್ತಮ ಭೂದೃಶ್ಯಗಳು ಮತ್ತು ತೀರಗಳಿಂದ ಆಶೀರ್ವದಿಸಲ್ಪಟ್ಟಿದ್ದು ಇದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸೈಕಲ್ ಟೂರ್‌ಗಳು ಅತ್ಯಂತ ಜನಪ್ರಿಯವಾಗುತ್ತಿವೆ. ಈ ಸೈಕಲ್ ಪ್ರವಾಸಗಳು ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ . ನೀವು ಈ ಅಡ್ವೆಂಚೆರಿಯಸ್ ಟೂರ್ ಅನ್ನು ನಿಮ್ಮದೇ ರೀತಿಯಲ್ಲಿ ಆನಂದಿಸಬಹುದು. ಕರ್ನಾಟಕವು ಎಲ್ಲ ರೀತಿಯ ಪ್ರಕೃತಿ ವೈಭವವನ್ನು ಹೊಂದಿದೆ. ನೀವು ಇಲ್ಲಿ ಜಲಪಾತಗಳು ಮತ್ತು ಐತಿಹಾಸಿಕ ಸ್ಥಳಗಳು, ಬೆಟ್ಟ ಗುಡ್ಡಗಳು, ದೇವಾಲಯಗಳನ್ನು ನೋಡಿ ವಿಸ್ಮಯಗೊಳ್ಳಬಹುದು
ಕರ್ನಾಟಕದಲ್ಲಿ ಜನಪ್ರಿಯ ಸೈಕಲ್ ಪ್ರವಾಸಗಳು
ಬೆಂಗಳೂರು ಮತ್ತು ಸುತ್ತಮುತ್ತ ಸೈಕಲ್ ಸವಾರಿ ಮಾಡಿ ಮತ್ತು ಸ್ಥಳಗಳನ್ನು ಆನಂದಿಸಿ.
ನಂದಿ ಬೆಟ್ಟಗಳು
ನೀವು ನಂದಿಬೆಟ್ಟಕ್ಕೆ ಸೈಕಲ್ ಮೂಲಕ ಪಯಣಿಸಲು ನಿರ್ಧರಿಸಿದರೇ ಒಳ್ಳೆಯ ನಿರ್ಧಾರವೇ ಸರಿ. ಏಕೆಂದರೆ ಇದು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ಈ ಬೆಟ್ಟವು ಬೇಸಿಗೆಯ ಪ್ರವಾಸಿ ತಾಣಗಳಾಗಿ ಹೆಚ್ಚು ಜನಪ್ರಿಯವಾಗಿವೆ. ಇಲ್ಲಿ ಯಾವಾಗಲೂ ಪ್ರವಾಸಿಗಳಿಂದ ತುಂಬಿದ ವಾತಾವರಣವಿರುತ್ತದೆ. ಇದು ಬೆಂಗಳೂರು ನಗರದಿಂದ 45 ಕೀಲೊ ಮೀಟರ ದೂರದಲ್ಲಿದೆ.
ಚಿಕ್ಕಬಳ್ಳಾಪುರ
ಹಳ್ಳಿಗಾಡಿನ ಪ್ರದೇಶ, ಗುಡ್ಡಗಾಡು ಪ್ರದೇಶಗಳ ಮೋಡಿ, ಹೆದ್ದಾರಿಯಲ್ಲಿನ ಬಂಡೆಗಳು, ಗ್ರಾಮೀಣ ಭೂದೃಶ್ಯಗಳು ಮತ್ತು ಐತಿಹಾಸಿಕ ಅವಶೇಷಗಳು ಚಿಕ್ಕಬಳ್ಳಾಪುರನ್ನು ಆಕರ್ಷಣೀಯ ಸ್ಥಳವನ್ನಾಗಿಸುತ್ತದೆ. ಬೆಂಗಳೂರು ನಗರದಿಂದ ಕೇವಲ 75 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರವು ಪಾದಯಾತ್ರೆಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಸೈಕಲ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಹೆಸರಘಟ್ಟ ಸರೋವರ
ನಿಮಗೆ ಸೈಕಲ್ ಪ್ರವಾಸ ಹೊಸದಾಗಿದ್ದರೇ ಮತ್ತು ನಿಮ್ಮ ಮಕ್ಕಳೊಂದಿಗೆ ಸೈಕಲ್ ಪ್ರವಾಸದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದರೆ, ಹೆಸರಘಟ್ಟವು ಪ್ರಾರಂಭಿಸಲು ಪರಿಪೂರ್ಣ ಆಯ್ಕೆಯಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್‌ನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಇದು ಹಸಿರು, ವಲಸೆ ಹಕ್ಕಿಗಳು, ಸೂರ್ಯಕಾಂತಿ ಹೊಲಗಳು, ಸರೋವರ, ಹಳ್ಳಿ ಮತ್ತು ಕೃಷಿಭೂಮಿಗಳ ಶಾಶ್ವತ ಆಹ್ಲಾದಕರ ನೋಟಗಳನ್ನು ನೀಡುತ್ತದೆ.
ಕಂಟ್ರಿಸೈಡ್ ಸೈಕ್ಲಿಂಗ್ ಟ್ರಯಲ್
ನೀವು ಕೆಲವು ಆಫ್-ಬೀಟ್ ಸ್ಥಳಗಳನ್ನು ಹುಡುಕುತ್ತಿರುವಿರಾ? ನಂದಿ ಬೆಟ್ಟಗಳ ಆಚೆಗಿನ ಘಾಟಿ ಸುಬ್ರಹ್ಮಣ್ಯದ ಕಡೆಗೆ ಸವಾರಿ ಮಾಡುವುದು ಉತ್ತಮ ಆಯ್ಕೆಯಾಗಿದೆ. ಆ ಹಳ್ಳಿಗಾಡಿನ ದೃಶ್ಯಗಳು, ಅಲ್ಲೊಂದು ಇಲ್ಲೊಂದು ಪುಟ್ಟ ದೇಗುಲಗಳು, ಸಮೃದ್ಧ ಕೃಷಿಭೂಮಿಗಳು, ಹಳ್ಳಿಯ ಜೀವನ ಇದೆಲ್ಲವೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಸ್ವಯಂ ಉದ್ಭವವಾದ ಕಾರ್ತಿಕೇಯ ದೇವಸ್ಥಾನವು ಸುಮಾರು 600 ವರ್ಷಗಳಷ್ಟು ಹಳೆಯದಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಕಣಿವೆಪುರದಿಂದ ದೊಡಬಳ್ಳಾಪುರದ ಕಡೆಗೆ 40 ಕಿಮೀ ದೂರದಲ್ಲಿರುವ ಈ ಹಾದಿಯು ಅನುಭವಿ ಸವಾರರು ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತವಾಗಿದೆ.
ಸಾವನದುರ್ಗ-ಮಂಚನಬೆಲೆ
ಬೆಂಗಳೂರಿನಿಂದ ಎಪ್ಪತ್ತು ಕೀಲೊ ಮೀಟರ ದೂರದಲ್ಲಿರುವ ಸಾವನದುರ್ಗ ಮತ್ತು ಮಂಚನಬೆಲೆಯು ತುಂಬಾ ಆಕರ್ಷಕ ಸ್ಥಳವಾಗಿದೆ. ಈ ಪ್ರಯಾಣದ ಸಮಯದಲ್ಲಿ ಬಿಡದಿಯ ಪ್ರಸಿದ್ಧವಾದ ತಟ್ಟೆ ಇಡ್ಲಿಯನ್ನು ಆನಂದಿಸಿ ಮತ್ತು 400 ವರ್ಷಗಳಷ್ಟು ಹಳೆಯದಾದ ದೊಡ್ಡ ಆಲದ ಮರಕ್ಕೆ ಭೇಟಿ ನೀಡಿ. ಸಾವನದುರ್ಗ ಕೋಟೆಯು ತುಂಬಾ ಆಕರ್ಷಕ ಸ್ಥಳವಾಗಿದೆ. ಇದೊಂದು ಏಕಶಿಲಾ ಬೆಟ್ಟವಾಗಿದೆ. ಆ ಪರಿಪೂರ್ಣ ದಿನದ ಪ್ರವಾಸವನ್ನು ಪೂರ್ಣಗೊಳಿಸಲು ಭವ್ಯವಾದ ಮಂಚನಬೆಲೆ ಅಣೆಕಟ್ಟಿನ ಕಡೆಗೆ ಸವಾರಿ ಮಾಡುವುದನ್ನು ಮರೆಯಬೇಡಿ.
ಮೈಸೂರು ಮತ್ತು ಕೂರ್ಗ್ ಪ್ರವಾಸಗಳು
ಬೆಂಗಳೂರಿನಿಂದ ಮೈಸೂರು ಸುಮಾರು 145 ಕಿಮೀ ಮತ್ತು ಕೂರ್ಗ್ 250 ಕಿಮೀ ದೂರದಲ್ಲಿದೆ. ನೀವು ಕರ್ನಾಟಕಕ್ಕೆ ಭೇಟಿ ನೀಡಿದರೆ ಮೈಸೂರು ಮತ್ತು ಮಡಿಕೇರಿಗೆ ಭೇಟಿ ನೀಡಲೇಬೇಕು. ಈ ಪ್ರವಾಸದ ವಿವರಗಳಲ್ಲಿ ಪರಂಪರೆ, ಸಾಹಸ, ಸಂಸ್ಕೃತಿ, ಆಹಾರ, ಸ್ಮಾರಕಗಳು ಮತ್ತು ತೀರ್ಥಯಾತ್ರೆಗಳು ಸೇರಿವೆ. ಮೈಸೂರು ಮತ್ತು ಕೂರ್ಗ್‌ನಲ್ಲಿನ ಸೈಕಲ್ ಪ್ರವಾಸಗಳು ಒಳಾಂಗಣ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಅನುಮತಿಸುತ್ತದೆ. ನಿಮ್ಮ ಸೈಕಲ್ ಟೂರ್ ಆಪರೇಟರ್‌ಗಳು ನಿಮಗಾಗಿ ಪ್ರವಾಸವನ್ನು ಕಸ್ಟಮೈಸ್ ಮಾಡಬಹುದು ಅಥವಾ ಪೂರ್ವ-ಯೋಜಿತ ಪ್ರವಾಸಗಳೊಂದಿಗೆ ಹೋಗಬಹುದು. ಮೈಸೂರು – ಕೊಡಗು ಪ್ರದೇಶದಲ್ಲಿ ಸೈಕಲ್ ಟೂರ್‌ಗಳ ಕುರಿತು ಮುಖ್ಯ ಅಂಶಗಳು ಹೀಗಿವೆ.
- ಮಡಿಕೇರಿಗೆ ನೀವು ದಟ್ಟವಾದ ಕಾಡುಗಳು, ಕಾಫಿ ತೋಟಗಳು ಮತ್ತು ಹಿನ್ನೀರಿನ ಮೂಲಕ ಸವಾರಿ ಮಾಡಿ.
- ಚಾಮುಂಡೇಶ್ವರಿ ದೇವಸ್ಥಾನ ಮತ್ತು ಶ್ರೀರಂಗ ಪಟ್ಟಣದ ದೇವಸ್ಥಾನಗಳು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ.
- ಮೈಸೂರಿನಿಂದ ಬಂಡೀಪುರ ಅರಣ್ಯಕ್ಕೆ ಹಳ್ಳಿಗಳು ಮತ್ತು ಕೃಷಿಭೂಮಿಗಳ ಮೂಲಕ ಒಂದು ರಮಣೀಯ ಸವಾರಿ ಸುಮಾರು 90 ಕಿ.ಮೀ.
- ಅದ್ಭುತವಾದ ಬೆಟ್ಟದ ನೋಟಗಳು, ಅಂಕುಡೊಂಕಾದ ರಸ್ತೆಗಳು ಮತ್ತು ಪ್ರಕೃತಿ ವೈಭವವು ನಿಮ್ಮನ್ನು ವಿಸ್ಮಯಗೊಳಿಸುತ್ತದೆ.
- ರಸ್ತೆಯ ಒಂದು ಬದಿಯಲ್ಲಿ ಹಚ್ಚ ಹಸಿರಿನ ಕೃಷಿಭೂಮಿಗಳು ಮತ್ತು ಇನ್ನೊಂದು ಬದಿಯಲ್ಲಿ ಬಂಡೆಗಳ ಸಾಟಿಯಿಲ್ಲದ ನೋಟಗಳು ನಿಮ್ಮ ಪ್ರವಾಸವನ್ನು ಸಂತೋಷದಾಯಕವಾಗಿಸುತ್ತದೆ.
- ಮೈಸೂರಿನ ಹಳೆಯ ದರ್ಶಿನಿ ಶೈಲಿಯ ಕೆಫೆಗಳಲ್ಲಿ ವಿಶೇಷ ಮೈಸೂರು ಮಸಾಲಾ ದೋಸೆ ಮತ್ತು ಮೈಸೂರು ಪಾಕ್ ಅನ್ನು ಸೇವಿಸಿ ಆನಂದಿಸಿರಿ.
ದಯವಿಟ್ಟು ಗಮನಿಸಿ:ಭಾರತದಲ್ಲಿನ ಅರಣ್ಯ ನಿಯಮಗಳು ಪ್ರಾಣಿ ಮತ್ತು ಮಾನವ ಸುರಕ್ಷತೆಯ ಹಿತದೃಷ್ಟಿಯಿಂದ ವನ್ಯಜೀವಿ ಮೀಸಲು ಪ್ರದೇಶಗಳಲ್ಲಿ ಮೂಲಕ ಸೈಕ್ಲಿಂಗ್ ಮತ್ತು ವಾಕಿಂಗ್ ಅನ್ನು ನಿಷೇಧಿಸುತ್ತವೆ. ಈ ಮೀಸಲು ಅರಣ್ಯ ಪ್ರದೇಶಗಳಲ್ಲಿ ಸೈಕ್ಲಿಂಗ್ ಪ್ರವಾಸಗಳನ್ನು ಮಾಡುವ ಹಾಗಿಲ್ಲ. ನಿಮ್ಮ ಟೂರ್ ಆಪರೇಟರ್ ನಿಮ್ಮ ವಿನಂತಿಯ ಮೇರೆಗೆ ಅರಣ್ಯ ಸಫಾರಿಗಳಿಗೆ ವ್ಯವಸ್ಥೆ ಮಾಡಬಹುದು.
ಹಾಸನ-ಸಕಲೇಶಪುರ-ಚಿಕಮಗಳೂರು
ಬೆಂಗಳೂರಿನಿಂದ ಹಾಸನದ ರಸ್ತೆಗಳು ಪಟ್ಟಣ ಮತ್ತು ಗ್ರಾಮಗಳ ಮೂಲಕ ಹಾದುಹೋಗುತ್ತದೆ. ನೀವು ಈ ರಸ್ತೆಗಳ ಮೂಲಕ ಹಾದುಹೋಗುವಾಗ ಕೃಷಿಭೂಮಿಗಳು ಮತ್ತು ಕಣಿವೆಗಗಳನ್ನು ದಾಟಿ ಹೋಗುತ್ತೀರಿ. ಮತ್ತು ಮುಂದೆ ಕಾಫಿ ತೋಟಗಳ ಮೂಲಕ ಸುಂದರ ತಾಣವಾದ ಸಕಲೇಶಪುರವನ್ನು ತಲುಪಿ. ಇದು ಗಿರಿಧಾಮವಾಗಿರುವುದರಿಂದ ಇಲ್ಲಿನ ಸವಾರಿಗಳು ಹೆಚ್ಚಿನ ಸವಾಲಿನವುಗಳಾಗಿವೆ. ಇದು ಪ್ರವಾಸಿಗರಿಗೆ ರೋಚಕ ಅನುಭವವನ್ನು ನೀಡುತ್ತದೆ. ದೇವರಮನೆ ಬೆಟ್ಟವು ರಮಣೀಯವಾಗಿದ್ದು ಕಠಿಣ ಸವಾಲಿನ ಪ್ರದೇಶವನ್ನು ಹೊಂದಿದೆ. ಪಶ್ಚಿಮ ಘಟ್ಟಗಳ ನೋಟ ಮತ್ತು ಸುಂದರ ಭೂದೃಶ್ಯದೊಂದಿಗೆ ಮಂಜಿನ ಪರ್ವತಗಳು ಸಕಲೇಶಪುರದಲ್ಲಿ ನಿಮ್ಮ ಸವಾರಿಗಳನ್ನು ಅತ್ಯಾಕರ್ಷಕವಾಗಿಸುತ್ತದೆ.
1. ಸಕಲೇಶಪುರವು ಸುಂದರವಾದ ಭೂದೃಶ್ಯವನ್ನು ಹೊಂದಿದ್ದು ಸೈಕಲ್ ಪ್ರವಾಸಗಳಿಗೆ ಉತ್ತಮವಾದ ಹವಾಮಾನವನ್ನು ಹೊಂದಿದೆ.
2. ಸಕಲೇಶಪುರದಲ್ಲಿ ನೀವು ಕುದುರೆಮುಖ ರಾಷ್ಟ್ರೀಯ ಉದ್ಯಾನವನಗಳು, ಆಗುಂಬೆ ರಾಷ್ಟ್ರೀಯ ಉದ್ಯಾನವನ ಮತ್ತು ದೇವಾಲಯಗಳಿಗೆ ಭೇಟಿ ನೀಡಬಹುದು.
3. ಕಾಫಿ ಮತ್ತು ಮಸಾಲೆ ತೋಟಗಳು, ಕಣಿವೆಯ ವಿಹಂಗಮ ನೋಟಗಳು, ರೈಡ್ ಮಾರ್ಗಗಳ ಉದ್ದಕ್ಕೂ ಮಳೆ-ಆಧಾರಿತ ತೊರೆಗಳು ಮತ್ತು ಜಲಪಾತಗಳು ನಿಮ್ಮನ್ನು ಆಕರ್ಷಿಸುತ್ತವೆ.
4. ಸಾಮಾನ್ಯವಾಗಿ, ಸಕಲೇಶಪುರ ರೈಡ್‌ಗಳು ಪಶ್ಚಿಮ ಘಟ್ಟಗಳಿಂದ ಇಳಿದು, ಕರಾವಳಿಯ ಕರ್ನಾಟಕದಲ್ಲಿ ಕೊನೆಗೊಳ್ಳುತ್ತವೆ.
5. ಸಕಲೇಶಪುರವು ತನ್ನ ಮಾನ್ಸೂನ್‌ಗೆ ಹೆಸರುವಾಸಿಯಾಗಿದ್ದು ಇಲ್ಲಿನ ಹಚ್ಚು ಹಸಿರಿನ ಪ್ರಕೃತಿಯು ನಿಮಗೆ ಜೀವಮಾನದ ಅನುಭವವನ್ನು ನೀಡುತ್ತದೆ.
6. ಸಾಮಾನ್ಯವಾಗಿ, 5-6 ದಿನಗಳ ಪ್ರಯಾಣವು ಸುಮಾರು 300 ಪ್ಲಸ್ ಕಿ.ಮೀ.ಆಗಿದೆ.
7. ಇಲ್ಲಿನ ಸುಂದರ ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ ಮತ್ತು ಕೆಮ್ಮನಗುಂಡಿ ಅತ್ಯಂತ ಮೋಡಿಮಾಡುವ ಸ್ಥಳಗಳಾಗಿವೆ.
ಕರಾವಳಿ ಸೈಕಲ್ ಪ್ರವಾಸಗಳು
ಸಕಲೇಶಪುರ ಮತ್ತು ಚಿಕಮಗಳೂರಿನ ಸುಂದರವಾದ ಸ್ಥಳಗಳಿಂದ ಸವಾರಿ ಮಾಡಿದ ನಂತರ, ಕರ್ನಾಟಕದ ಬಹುಕಾಂತೀಯ ಕರಾವಳಿ ಪ್ರದೇಶಗಳ ಸವಾರಿ ಮಾಡಿ. ಕಡಲತೀರದ ಉದ್ದಕ್ಕೂ ಅಥವಾ ಕಾಡುಗಳ ಮೂಲಕ ಪಟ್ಟಣದೊಳಗೆ ಹಾದುಹೋಗುವ ಸುಂದರವಾದ ಹಾದಿಗಳು ಉತ್ತರ ಮತ್ತು ದಕ್ಷಿಣಕ್ಕೆ ಎರಡೂ ದಿಕ್ಕುಗಳಲ್ಲಿ ಸುಂದರವಾಗಿರುತ್ತದೆ. ಮಂಗಳೂರು ಅಥವಾ ಉಡುಪಿ ಕಡೆಗೆ ಸೈಕಲ್ ಸವಾರಿಗಳು ನಿಮಗೆ ಸವಾಲಿನ ಮತ್ತು ಸುಂದರ ದೃಶ್ಯ ಅನುಭವಗಳನ್ನು ನೀಡುತ್ತವೆ.ಹೆಚ್ಚಿನ ಕಡಲ ತೀರಗಳು 50-60 ಕೀಲೊ ಮೀಟರ ವ್ಯಾಪ್ತಿಯಲ್ಲಿವೆ.
1. ಮಂಗಳೂರಿಗೆ ಹತ್ತಿರ ಇರುವ ಸಸಿಹಿತ್ಲು ಬೀಚ್ ಸವಾರಿಯು ಮಂಗಳೂರಿನಿಂದ ಕೇವಲ 10 ಕಿಮೀ ದೂರದಲ್ಲಿದೆ. ಇದು ಹಳ್ಳಿಗಾಡಿನ ಮತ್ತು ಶಾಂತಿಯುತ ಹಿನ್ನೀರಿನ ಪರಿಸರಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
2. ಸುರತ್ಕಲ್ ಬೀಚ್ ರಸ್ತೆಯು ಸಾಂಪ್ರದಾಯಿಕ ಹಳ್ಳಿಯ ಜೀವನಶೈಲಿ ಮತ್ತು ಹಳ್ಳಿಯ ಗುಡಿಸಲುಗಳ ಮೂಲಕ ಹೋಗುತ್ತದೆ.
3. ಉಡುಪಿ ಕಡೆಗೆ ಸವಾರಿ ಮಾಡುವುದು ಎಂದರೆ ಆನಂದವೇ ಸರಿ. ನೀವು ಇಲ್ಲಿ ಅನೇಕ ಬೀಚ್ ಗಳು ಮಾರ್ಗದ ಉದ್ದಕ್ಕೂ ತೆಂಗಿನ ಮರಗಳನ್ನು ನೋಡಿ ಅನಂದಿಸಬಹುದು.
ಹಂಪಿ ಮತ್ತು ಬಾದಾಮಿ- ಕರ್ನಾಟಕದ ಐತಿಹಾಸಿಕ ಮತ್ತು ಪರಂಪರೆಯ ಪಟ್ಟಣಗಳಿಗೆ ಪಯಣ
ಉತ್ತರ ಕರ್ನಾಟಕದ ಹಂಪಿ ಮತ್ತು ಬದಾಮಿ ಸ್ಥಳಗಳು ಐತಿಹಾಸಿಕ ಪ್ರಸಿದ್ಧ ಸ್ಥಳಗಳಾಗಿವೆ. ಇಲ್ಲಿ ನೀವು ಅನೇಕ ಐತಿಹಾಸಿಕ ದೇವಾಲಯಗಳು ಮತ್ತು ಸ್ಮಾರಕಗಳನ್ನು ನೋಡಬಹುದು. ಹಂಪಿ ಮತ್ತು ಬಾದಾಮಿಯಲ್ಲಿನ ಭೂಪ್ರದೇಶವು ಸಮತಟ್ಟಾದ ಮೈದಾನದಿಂದ ಮಧ್ಯಮ ಏರಿಕೆಯನ್ನು ಹೊಂದಿದೆ ನೀವು ಈ ಭೂಪ್ರದೇಶದಲ್ಲಿ ಪ್ರತಿದಿನ 40 ರಿಂದ 60 ಕಿಲೋಮೀಟರ್‌ಗಳ ವರೆಗೆ ಸೈಕಲ್ ಸವಾರಿ ಮಾಡಬಹುದು.
- ಹಂಪಿ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳು 100 ಕಿ.ಮೀ. ವ್ಯಾಪ್ತಿಯಲ್ಲಿವೆ.
- ಹಂಪಿಯಲ್ಲಿ ಹಲವು ರೀತಿಯ ಸವಾರಿ ಆಯ್ಕೆಗಳಿವೆ. ನೀವು ಡ್ರೈವ್ ಮಾಡಬಹುದು ಮತ್ತು ರೈಡ್ ಕೂಡ ಮಾಡಬಹುದು.
- ನೀವು ಇಲ್ಲಿಗೆ ಹತ್ತಿರವಿರುವ ಆನೆಗುಂದಿ ಮತ್ತು ಕಿಷ್ಕಿಂದೆ ಪ್ರದೇಶಗಳನ್ನು ಸಹ ನೋಡಿ ಆನಂದಿಸಬಹುದು.
- ಹಂಪಿಯ ವಿರೂಪಾಕ್ಷ ದೇವಾಲಯವು ತುಂಬಾ ಆಕರ್ಷಣೀಯ ಸ್ಥಳವಾಗಿದೆ.
- 140 ಕೀಲೊ ಮೀಟರ್ ದೂರದಲ್ಲಿರುವ ಬದಾಮಿಯನ್ನು ಸೈಕಲ್ ಮೂಲಕ ನೀವು ತಲುಪಬಹುದು.
- ಬಾದಾಮಿ ಗುಹೆಗಳು ಸರಿಸುಮಾರು 30 ಕಿಮೀ ಇದೆ. ನೀವು ಭವ್ಯವಾದ ಬಾದಾಮಿ ಗುಹೆಗಳಿಂದ ಆಶ್ಚರ್ಯಚಕಿತರಾಗಿರಿ.
- ದೂರ ಮತ್ತು ಗ್ರೇಡಿಯಂಟ್ ಕ್ಲೈಂಬಿಂಗ್ ವಿಷಯದಲ್ಲಿ ಮಾರ್ಗವು ಕಡಿಮೆ ತೀವ್ರತೆಯನ್ನು ಹೊಂದಿದೆ.
ಮಹತ್ವದ ಮಾಹಿತಿ:
- ಪ್ರವಾಸದ ದೂರವನ್ನು ಮುಂಚಿತವಾಗಿ ಪರಿಶೀಲಿಸಿ.
- ಯಾವುದೇ ದಿನದಲ್ಲಿ, ಒಬ್ಬರು 50-100 ಕಿಮೀ ವರೆಗೆ ಸವಾರಿಯನ್ನು ಮಾಡಬಹುದು. ನಿಮ್ಮ ಸಾಹಸಮಯ ಪ್ರವಾಸಕ್ಕಾಗಿ ಮುಂಚಿತವಾಗಿ ತಯಾರು ಮಾಡಿ. ಅಗತ್ಯವಿರುವ ಫಿಟ್ನೆಸ್ ಮಟ್ಟವನ್ನು ಎಲ್ಲಾ ಸಮಯದಲ್ಲೂ ನೀವು ಕಾಪಾಡಿಕೊಳ್ಳಬೇಕು.
- ಇಲ್ಲಿ ನಿಮಗೆ ಸಹಾಯ ಮಾಡಲು ವಿಶೇಷ ಕಾರ್ಯ ಯಾತ್ರೆ ಸೌಲಭ್ಯ ಇದೆ. ಇದು ಅಗತ್ಯ ವಸ್ತುಗಳು ಬಿಡಿ ಸಾಮಾನುಗಳನ್ನು ಸಾಗಿಸುವ ಬೆಂಬಲ ವಾಹನದೊಂದಿಗೆ ಇರುತ್ತದೆ ಮತ್ತು ಯಾವುದೇ ನಿರ್ದಿಷ್ಟ ದಿನದಂದು ವಿಶ್ರಾಂತಿ ಪಡೆಯಲು ಬಯಸುವ ಅಥವಾ ಸೈಕಲ್ ಮಾಡಲು ಸಾಧ್ಯವಾಗದ ಸೈಕ್ಲಿಸ್ಟ್‌ಗಳು ಇದನ್ನು ಬಳಸಬಹುದು.
- ಟೂರ್ ಆಪರೇಟರ್ನಿಂದ ಉತ್ತಮ ನೈರ್ಮಲ್ಯ ಸ್ನಾನಗೃಹಗಳಿರುವ ಮಧ್ಯಮ-ವಿಭಾಗದ ಹೋಟೆಲ್ಗಳು ಮತ್ತು ಹೋಂಸ್ಟೇಗಳಲ್ಲಿ ವಸತಿ ಒದಗಿಸಲಾಗುತ್ತದೆ.
- ಟೂರ್ ಆಪರೇಟರ್ನಿಂದ ಊಟವನ್ನು ಒದಗಿಸಲಾಗುತ್ತದೆ, ಆದರೂ ನಿಮ್ಮ ಜೊತೆ ನಿಮಗೆ ಸೂಕ್ತವೆನಿಸುವ ಆಹಾರವನ್ನು ಕೊಂಡೊಯ್ಯುವುದು ಸೂಕ್ತ.
- ನಿಮಗೆ ಅವಶ್ಯಕ ಔಷಧಿಗಳನ್ನು ಜೊತೆಗೆ ತಪ್ಪದೇ ಒಯ್ಯಿರಿ.
ಮಾಹಿತಿ ಮತ್ತು ಚಿತ್ರಗಳು ಕೃಪೆ: ಆರ್ಟ್ ಆಫ್ ಬೈಸಿಕಲ್, ಪೆಡಲ್ ಟಂಡೆಮ್, ಲೋಹಿತ್ ರಾವ್ ಮಂಗಳೂರು, ಅನ್ವೆಂಚರ್ಡ್ ಎಕ್ಸ್ಪೆಡಿಶನ್ಸ್ ಮತ್ತು ಟೂರ್ಸ್ ಆಫ್ ಕರ್ನಾಟಕ