ಮದ್ದೂರು ವಡೆ
ಮದ್ದೂರು ವಡೆ ಕರ್ನಾಟಕದ ಜನಪ್ರಿಯ ತಿಂಡಿ, ಇದು ಬೆಂಗಳೂರಿನ ನೈರುತ್ಯಕ್ಕೆ 85 ಕಿ.ಮೀ ದೂರದಲ್ಲಿರುವ ಮದ್ದೂರು ಎಂಬ ಊರಿನಲ್ಲಿ ಮೊದಲು ಬಳಕೆಗೆ ಬಂದ ಕಾರಣ ಊರಿನ ಹೆಸರಿನಿಂದ ಹೆಸರುವಾಸಿಯಾಗಿದೆ.
ರಾಗಿ ಅಂಬಲಿ
ರಾಗಿ ಅಂಬಲಿ ( ರಾಗಿ ಮಾಲ್ಟ್) ಕರ್ನಾಟಕದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಾನೀಯವಾಗಿದೆ. ಕರ್ನಾಟಕ ರಾಗಿ ಉತ್ಪಾದಿಸುವ ಪ್ರಮುಖ ರಾಜ್ಯವಾಗಿದ್ದು ರಾಗಿ ಅಂಬಲಿ ರಾಜ್ಯಾದ್ಯಂತ ಸುಲಭವಾಗಿ ಲಭ್ಯವಿದೆ.
ಜೋಳದ ರೊಟ್ಟಿ
ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದೆ. ಜೋಳದ ರೊಟ್ಟಿ ಎಣ್ಣೆ ಮುಕ್ತ, ಪೌಷ್ಠಿಕ ಆಹಾರವಾಗಿದ್ದು ಕರ್ನಾಟಕಕ್ಕೆ ಭೇಟಿನೀಡುವ ಬಹುತೇಕ ಪ್ರವಾಸಿಗರು ತಪ್ಪದೇ ರುಚಿ ನೋಡಬಯಸುತ್ತಾರೆ.
ಧಾರವಾಡ ಪೇಡ
ಧಾರವಾಡ ಪೇಡ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಪರಿಚಯಿಸಲ್ಪಟ್ಟ ರುಚಿಕರವಾದ ಸಿಹಿ ತಿಂಡಿ. ಧಾರವಾಡ ಪೇಡ 175 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಜಿಐ (ಭೂವೈಜ್ಞಾನಿಕ ಗುರುತಿನ) ಟ್ಯಾಗ್ ಅನ್ನು ಪಡೆದಿದೆ. ಜಿಐ ಮುದ್ರೆ ಆಹಾರದ ಭೌಗೋಳಿಕ ಮೂಲವನ್ನು ಧೃಡೀಕರಿಸುತ್ತದೆ.
ದಾವಣಗೆರೆ ಬೆಣ್ಣೆ ದೋಸೆ
ದಾವಣಗೆರೆ ಬೆಣ್ಣೆ ದೋಸೆ ಉತ್ತರ ಕರ್ನಾಟಕದ ದಾವಣಗೆರೆ ನಗರದಲ್ಲಿ ಮೊದಲು ಪರಿಚಯಿಸಲ್ಪಟ್ಟ ಜನಪ್ರಿಯ ದೋಸೆಯಾಗಿದೆ. ದಾವಣಗೆರೆ ಬೆಣ್ಣೆ ದೋಸೆಯಲ್ಲಿ ಉದಾರ ಪ್ರಮಾಣದ ಬೆಣ್ಣೆ ಬಳಸುವುದು ವಿಶಿಷ್ಟ ರುಚಿ, ಪರಿಮಳ ನೀಡುತ್ತದೆ. ಈ ಕಾರಣದಿಂದ ಸಾದಾ ದೋಸೆಗಿಂತ ದಾವಣಗೆರೆ ಬೆಣ್ಣೆ ದೋಸೆಗೆ ಬೇಡಿಕೆ ಹೆಚ್ಚು.
ಬೆಳಗಾವಿ ಕುಂದ
ಹಾಲು ಅಥವಾ ಖೋವಾ (ಕುದಿಸಿದ ಹಾಲಿನಿಂದ ಪಡೆದ ಹಾಲಿನ ಘನ ರೂಪ) ಮತ್ತು ಸಕ್ಕರೆ ಬೆಳಗಾವಿ ಕುಂದದ ಮುಖ್ಯ ಪದಾರ್ಥಗಳಾಗಿವೆ. ಹಾಲನ್ನು ಅದರ ಹೆಚ್ಚಿನ ನೀರಿನ ಅಂಶವನ್ನು ಕಳೆದುಕೊಳ್ಳುವವರೆಗೆ ಕುದಿಸಲಾಗುತ್ತದೆ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ ಮಿಶ್ರ ಮಾಡಲಾಗುತ್ತದೆ.
ವಾಂಗಿ ಬಾತ್
ವಾಂಗಿ ಬಾತ್ (ಬದನೆಕಾಯಿ ಅನ್ನ) ಕರ್ನಾಟಕದ ಒಂದು ವಿಶಿಷ್ಟ ಖಾದ್ಯವಾಗಿದ್ದು, ಹುರಿದ ಬದನೆಕಾಯಿಯ ಸಾರವನ್ನು ಅನ್ನದೊಂದಿಗೆ ಕಲಸಿ ತಯಾರಿಸಲಾದ ತಿನಿಸಾಗಿರುತ್ತದೆ.
ತಂಬುಳಿ
ತಂಬುಳಿ ಕರ್ನಾಟಕದ ಹಿತವಾದ, ಆರೋಗ್ಯಕರ ಮೊಸರು ಆಧಾರಿತ ಭಕ್ಷ್ಯವಾಗಿದೆ. ಊಟದ ಸಮಯದಲ್ಲಿ ಹೆಚ್ಚಾಗಿ ಸಾಂಬಾರ್ ಅಥವಾ ಸಾರಿನ ಮೊದಲು ತಂಬುಳಿಯನ್ನು ಬಡಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ .
ಪಾಯಸ
ಪಾಯಸ ಎಂಬುದು ದ್ರವರೂಪದ/ಅರೆ ಘನರೂಪದ ಸಿಹಿಭಕ್ಷ್ಯವಾಗಿದೆ. ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಪಾಯಸ ಭೋಜನದ ಅವಿಭಾಜ್ಯ ಅಂಗ. ಹೊಟ್ಟೆ ತುಂಬಾ ಊಟ ಮಾಡಿದ್ದರೂ ಒಂದು ಕಪ್ ರುಚಿಯಾದ ಪಾಯಸವನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ.