Karnataka logo

Karnataka Tourism
GO UP
Belagavi Kunda

ಬೆಳಗಾವಿ ಕುಂದ

separator
  /  ಬೆಳಗಾವಿ ಕುಂದ

ಬೆಳಗಾವಿ ಕುಂದವು ಕರ್ನಾಟಕದ ಬೆಳಗಾವಿ ನಗರದಲ್ಲಿ ತಯಾರಿಸಲಾಗುವ ಪ್ರಸಿದ್ಧ ಸಿಹಿ ತಿನಿಸಾಗಿದೆ.

ಬೆಳಗಾವಿ ಕುಂದವನ್ನು ಹೇಗೆ ತಯಾರಿಸಲಾಗುತ್ತದೆ?

ಹಾಲು ಅಥವಾ ಖೋವಾ (ಕುದಿಸಿದ ಹಾಲಿನಿಂದ ಪಡೆದ ಹಾಲಿನ ಘನ ರೂಪ) ಮತ್ತು ಸಕ್ಕರೆ ಬೆಳಗಾವಿ  ಕುಂದದ ಮುಖ್ಯ ಪದಾರ್ಥಗಳಾಗಿವೆ. ಹಾಲನ್ನು ಅದರ ಹೆಚ್ಚಿನ ನೀರಿನ ಅಂಶವನ್ನು ಕಳೆದುಕೊಳ್ಳುವವರೆಗೆ ಕುದಿಸಲಾಗುತ್ತದೆ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ ಮಿಶ್ರ ಮಾಡಲಾಗುತ್ತದೆ. ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಅಂತಿಮ ಹಂತದಲ್ಲಿ ಹೆಚ್ಚುವರಿ ರುಚಿ ಮತ್ತು ಪರಿಮಳಕ್ಕಾಗಿ ಸೇರಿಸಲಾಗುತ್ತದೆ. ಬೆಳಗಾವಿ  ಕುಂದ ಹೀಗೆ ತಯಾರಾಗುತ್ತದೆ. ಅಪೇಕ್ಷಿತ ಆಕಾರ ಮತ್ತು ಗಾತ್ರವನ್ನು ಕೈಯಿಂದ ನೀಡಲಾಗುತ್ತದೆ. 

ಗಮನಿಸಬೇಕಾದ ಅಂಶಗಳು:

ಬೆಳಗಾವಿ  ಕುಂದವನ್ನು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸಬೇಕು ಆದರೆ ದೀರ್ಘಾವಧಿಯ ಶೈತ್ಯೀಕರಣ ಬೆಳಗಾವಿ ಕುಂದದ ಗುಣಮಟ್ಟಕ್ಕೆ ಕುಂದು ತರಬಹುದು.

 ಅದ್ದೂರಿ ಊಟದ ನಂತರ ಕುಂದ ತಿನ್ನುವುದು ಒಂದು ಅನನ್ಯ ಅನುಭವ ನೀಡುತ್ತದೆ. .

ಬೆಳಗಾವಿಗೆ ಭೇಟಿ ನೀಡುವ ಪ್ರಯಾಣಿಕರು ಸ್ನೇಹಿತರು ಮತ್ತು ಕುಟುಂಬದವರ ನಡುವೆ ವಿತರಿಸಲು ಸಾಕಷ್ಟು ಬೆಳಗಾವಿ ಕುಂದವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. 

ಬೆಳಗಾವಿ ಕುಂದವನ್ನು ಎಲ್ಲಿ  ಸವಿಯಬಹುದು?

ಬೆಳಗಾವಿ ಕುಂದವನ್ನು ಖರೀದಿಸಲು ಉತ್ತಮ ಸ್ಥಳವೆಂದರೆ ಉತ್ತರ ಕರ್ನಾಟಕದ ಬೆಳಗಾವಿ ನಗರ. ಬೆಳಗಾವಿ ಬೆಂಗಳೂರಿನ ವಾಯುವ್ಯಕ್ಕೆ 500 ಕಿ.ಮೀ ದೂರದಲ್ಲಿದೆ. ಬೆಳಗಾವಿ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಬೆಳಗಾವಿ ನಗರವು ಕುಂದವನ್ನು ತಯಾರಿಸುವ ಮತ್ತು ಮಾರಾಟ ಮಾಡುವ 200ಕ್ಕೂ ಹೆಚ್ಚು ಸಿಹಿ ಅಂಗಡಿಗಳನ್ನು ಹೊಂದಿದೆ. ಬೆಳಗಾವಿ ಕುಂದ ಹತ್ತಿರದ ನಗರಗಳಾದ ಹುಬ್ಬಳ್ಳಿ , ಧಾರವಾಡ, ದಾವಣಗರೆ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಆಯ್ದ ಬೇಕರಿಗಳಲ್ಲಿ ಲಭ್ಯವಿದೆ.