Karnataka logo

Karnataka Tourism
GO UP
Maddur Vada

ಮದ್ದೂರು ವಡೆ

separator
  /  ಮದ್ದೂರು ವಡೆ

ಮದ್ದೂರು ವಡೆ ಕರ್ನಾಟಕದ ಜನಪ್ರಿಯ ತಿಂಡಿ, ಇದು ಬೆಂಗಳೂರಿನ ನೈರುತ್ಯಕ್ಕೆ 85 ಕಿ.ಮೀ ದೂರದಲ್ಲಿರುವ ಮದ್ದೂರು ಎಂಬ ಊರಿನಲ್ಲಿ ಮೊದಲು ಬಳಕೆಗೆ ಬಂದ ಕಾರಣ ಊರಿನ ಹೆಸರಿನಿಂದ ಹೆಸರುವಾಸಿಯಾಗಿದೆ. 

ಮದ್ದೂರು ವಡೆಯನ್ನು ಹೇಗೆ ತಯಾರಿಸಲಾಗುತ್ತದೆ?

ಮದ್ದೂರು ವಡೆಯ ಮುಖ್ಯ ಪದಾರ್ಥಗಳು ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಈ ಪದಾರ್ಥಗಳನ್ನು ನೀರಿನೊಂದಿಗೆ ಕಲಸಿ ರುಚಿಗಾಗಿ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳೊಂದಿಗೆ ಬೆರೆಸಿ ಬೆಚ್ಚಗಿನ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಲಾಗುತ್ತದೆ. ಉಪ್ಪು ಮತ್ತು ಇಂಗು ಸಹ ಸೇರಿಸಲಾಗುತ್ತದೆ.

ಹೀಗೆ ತಯಾರಿಸಲಾದ ಹಿಟ್ಟನ್ನು ಕುದಿಯುವ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಕರಿಯಲಾಗುತ್ತದೆ. ಬಾಣಲೆಯಿಂದ ತೆಗೆದು ಎಣ್ಣೆ ಸೋಸಿದ ನಂತರ ಗರಿಗರಿಯಾದ ಮದ್ದೂರು  ವಡೆ ಸವಿಯಲು ಸಿದ್ಧವಾಗುತ್ತದೆ. ಸಾಮಾನ್ಯ ಉದ್ದಿನ ವಡೆಗಿಂತ  ಮದ್ದೂರು  ವಡೆ ಭಿನ್ನವಾಗಿದ್ದು ಸಮತಟ್ಟಾದ, ವೃತ್ತಾಕಾರ ಹೊಂದಿದ್ದು ಮಧ್ಯದಲ್ಲಿ ಯಾವುದೇ ರಂಧ್ರವಿರುವುದಿಲ್ಲ.ಮದ್ದೂರು ವಡೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಕೆಚಪ್ / ಸಾಸ್ ಜೊತೆಗೆ  ಸವಿಯಬಹುದಾಗಿದೆ. 

ಮದ್ದೂರು  ವಡೆಯನ್ನು ಎಲ್ಲಿ ಸವಿಯಬಹುದು?

ಮದ್ದೂರು  ವಡೆಯನ್ನು ಖರೀದಿಸಲು  ಅತ್ತ್ಯುತ್ತಮ ಸ್ಥಳವೆಂದರೆ ಬೆಂಗಳೂರು ಮತ್ತು ಮೈಸೂರು ನಡುವೆ ಬರುವ ಮದ್ದೂರು ಪಟ್ಟಣ. ಬೆಂಗಳೂರು ಮತ್ತು ಮೈಸೂರು ನಡುವೆ ರೈಲು ಅಥವಾ ರಸ್ತೆಯ ಮೂಲಕ ಪ್ರಯಾಣಿಸುವಾಗ ಮದ್ದೂರಿನಲ್ಲಿ ನಿಂತು ಮದ್ದೂರು  ವಡೆಯನ್ನು ಸ್ಥಳೀಯ ಉಪಾಹಾರ ಗೃಹ ಅಥವಾ ವ್ಯಾಪಾರಿಗಳಿಂದ ಖರೀದಿಸಿ ಸವಿಯಲು ಮರೆಯದಿರಿ. ಮದ್ದೂರು ವಡೆವನ್ನು ಕರ್ನಾಟಕದಾದ್ಯಂತ ಮುಖ್ಯವಾಗಿ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಪ್ರದೇಶಗಳಲ್ಲಿ ಹಲವಾರು ಉಪಾಹಾರ ಗೃಹಗಳಲ್ಲಿ ಮಾರಾಟ ಮಾಡಲಾಗುತ್ತದೆ,

.