Karnataka logo

Karnataka Tourism
GO UP
Jolada Rotti

ಜೋಳದ ರೊಟ್ಟಿ

separator
  /  ಜೋಳದ ರೊಟ್ಟಿ

ಜೋಳದ ರೊಟ್ಟಿ ಉತ್ತರ ಕರ್ನಾಟಕದಲ್ಲಿ ಪ್ರಧಾನ ಆಹಾರವಾಗಿದೆ. ಜೋಳದ ರೊಟ್ಟಿ ಎಣ್ಣೆ ಮುಕ್ತ, ಪೌಷ್ಠಿಕ ಆಹಾರವಾಗಿದ್ದು ಕರ್ನಾಟಕಕ್ಕೆ ಭೇಟಿನೀಡುವ ಬಹುತೇಕ ಪ್ರವಾಸಿಗರು ತಪ್ಪದೇ  ರುಚಿ ನೋಡಬಯಸುತ್ತಾರೆ. 

ಜೋಳದ  ರೊಟ್ಟಿಯನ್ನು ಹೇಗೆ ತಯಾರಿಸಲಾಗುತ್ತದೆ?

ಜೋಳದ  ಹಿಟ್ಟನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಲಾಗುತ್ತದೆ. ಹಿಟ್ಟಿನ ಸಣ್ಣ ಭಾಗವನ್ನು ವೃತ್ತಾಕಾರದ ಆಕಾರದಲ್ಲಿ ಲಟ್ಟಣಿಗೆ ಬಳಸಿ ಅಥವಾ ಕೈಗಳನ್ನು ಬಳಸಿ ತೆಳ್ಳಗೆ ಹರಡಲಾಗುತ್ತದೆ. ಈ ಹಿಟ್ಟಿನಿಂದ ಮಾಡಿದ ಜೋಳದ  ರೊಟ್ಟಿ ಕೆಲವು  ನಿಮಿಷಗಳ ಕಾಲ ಕಾವಲಿ ಮೇಲೆ ಬಿಸಿಮಾಡಲಾಗುತ್ತದೆ. ಹಲವಾರು ಸಾಂಪ್ರದಾಯಿಕ ಮನೆಗಳಲ್ಲಿ ಜೋಳದ  ರೊಟ್ಟಿಯನ್ನು ನೇರವಾಗಿ ಜ್ವಾಲೆಯ ಮೇಲೆ ಹಿಡಿದು ಅಥವಾ ಬಿಸಿ ಕಲ್ಲಿದ್ದಲಿನ (ಕೆಂಡ)ಮೇಲೆ ಇಟ್ಟು  ಬಿಸಿಮಾಡಲಾಗುತ್ತದೆ. 

ಜೋಳದ ರೊಟ್ಟಿಯನ್ನು ಹೆಚ್ಚಾಗಿ ಈರುಳ್ಳಿ ಮತ್ತು ಸೌತೆಕಾಯಿ, ಚಟ್ನಿ ಪುಡಿ, ಬೆಳ್ಳುಳ್ಳಿ ಚಟ್ನಿ ಮತ್ತಿತರ ಮಸಾಲೆಯುಕ್ತ ಮೇಲೋಗರಗಳು ಅಥವಾ ಸಾಂಬಾರಿನೊಂದಿಗೆ  ಬಡಿಸಲಾಗುತ್ತದೆ. ಸುಟ್ಟ ಬದನೆಕಾಯಿ ಬಳಸಿ ತಯಾರಿಸಿದ ಮೇಲೋಗರ ಮತ್ತು ಮೆಂತ್ಯೆ ಬಳಸಿ  ತಯಾರಿಸಿದ ತೊವ್ವೆ ಜೋಳದ  ರೊಟ್ಟಿಯೊಂದಿಗೆ ನಂಜಿಕೊಳ್ಳಲು ಬಡಿಸುವ  ಜನಪ್ರಿಯ ಭಕ್ಷ್ಯಗಳಾಗಿವೆ.

ಜೋಳದ ರೊಟ್ಟಿಯನ್ನು ಎಲ್ಲಿ ಸವಿಯಬಹುದು?

ಜೋಳದ ರೊಟ್ಟಿ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಎಲ್ಲಾ ಉಪಾಹಾರ ಗೃಹ, ಖಾನಾವಳಿ‌ಗಳಲ್ಲಿ ಊಟದ ಸಮಯದಲ್ಲಿ ಸಿಗುತ್ತದೆ.  ಬೆಂಗಳೂರಿನ ಹಲವಾರು ಉಪಾಹಾರ ಗೃಹಗಳು ಜೋಳದ ರೊಟ್ಟಿ ಸೇರಿದಂತೆ ಇತರ ಉತ್ತರ ಕರ್ನಾಟಕ ಆಹಾರವನ್ನು ಪೂರೈಸುವಲ್ಲಿ ಪರಿಣತಿ ಪಡೆದಿವೆ. ಪ್ಲೇಟ್ ಊಟ (ಥಾಲಿ) ಬಡಿಸುವ ಅನೇಕ  ಉಪಾಹಾರ ಗೃಹಗಳು ಜೋಳದ  ರೊಟ್ಟಿ, ಚಪಾತಿ ಅಥವಾ ಅನ್ನವನ್ನು ಆಯ್ದುಕೊಳ್ಳುವ ಅವಕಾಶ ನೀಡುತ್ತವೆ. ಜೋಳದ  ರೊಟ್ಟಿ ಲಭ್ಯವಿರುವ  ನಿಮ್ಮ ಹತ್ತಿರದ ರೆಸ್ಟೋರೆಂಟ್‌ಗಳನ್ನು ಕಂಡುಹಿಡಿಯಲು ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.