Karnataka logo

Karnataka Tourism
GO UP
vairumudi festival

ವೈರಮುಡಿ ಹಬ್ಬ

separator
  /  ವೈರಮುಡಿ ಹಬ್ಬ

ವೈರಮುಡಿ ಹಬ್ಬ: ವೈರಮುಡಿ ಬ್ರಹ್ಮೋತ್ಸವವು ಮೇಲುಕೋಟೆ ದೇವಸ್ಥಾನಗಳ ವಾರ್ಷಿಕ ಹಬ್ಬವಾಗಿದೆ

ಮೇಲುಕೋಟೆ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯಗಳು: ಮೇಲುಕೋಟೆ ದೇವಸ್ಥಾನವು ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸಂಜೆ 4 ರಿಂದ 6 ಗಂಟೆಯವರೆಗೆ ಮತ್ತು 7 ರಿಂದ 8 ಗಂಟೆಯವರೆಗೆ ತೆರೆದಿರುತ್ತದೆ.

ಮೇಲುಕೋಟೆ ಸಮೀಪ ಭೇಟಿ ನೀಡುವ ಸ್ಥಳಗಳು: ಕೆಆರ್‌ಎಸ್ ಡ್ಯಾಮ್ (36 ಕಿಮಿ), ಶ್ರವಣಬೆಳಗೊಳ (35 ಕಿಮಿ), ಶ್ರೀರಂಗಪಟ್ಟಣ (38 ಕಿಮಿ), ರಂಗನತಿಟ್ಟು ಪಕ್ಷಿಧಾಮ (41 ಕಿಮಿ) ಮೇಲುಕೋಟೆಯೊಂದಿಗೆ ಭೇಟಿ ನೀಡಬಹುದಾದ ಸಮೀಪದ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಮೇಲುಕೋಟೆಯನ್ನು ತಲುಪುವುದು ಹೇಗೆ: ಮೇಲುಕೋಟೆಯು ಬೆಂಗಳೂರಿನಿಂದ 150 ಕಿಮಿ ದೂರದಲ್ಲಿದೆ. ಮೈಸೂರು ವಿಮಾನ ನಿಲ್ದಾಣ 61 ಕಿಮಿ ಅಂತರದಲ್ಲಿದೆ. ಮಂಡ್ಯ (40 ಕಿಮಿ) ಹತ್ತಿರದ ರೈಲ್ವೇ ನಿಲ್ದಾಣವಾಗಿದೆ. ಮೇಲುಕೋಟೆಯನ್ನು ತಲುಪಲು ಮಂಡ್ಯ ಮತ್ತು ಮೈಸೂರಿನಿಂದ ಖಾಸಗಿ ಬಸ್‌ಗಳು ಲಭ್ಯವಿವೆ.

ಮೇಲುಕೋಟೆಯಲ್ಲಿ ಮತ್ತು ಸುತ್ತಲು ತಂಗಲು ಸ್ಥಳಗಳು: ಹತ್ತಿರದ ನಗರಗಳಾದ ಮಂಡ್ಯ ಮತ್ತು ಶ್ರೀರಂಗಪಟ್ಟಣ (ಮೇಲುಕೋಟೆಯಿಂದ ಎರಡೂ ಸ್ಥಳಗಳು 40 ಕಿಮಿ ದೂರದಲ್ಲಿವೆ) ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಹೋಟೆಲ್‌ಗಳನ್ನು ಹೊಂದಿವೆ. ಮೈಸೂರು ನಗರದಲ್ಲಿ (55 ಕಿಮಿ) ಹೆಚ್ಚಿನ ಆಯ್ಕೆಗಳು ಲಭ್ಯವಿವೆ