Karnataka Tourism
GO UP

Archive

ಕರ್ನಾಟಕವು ಹಲವು ಪಾಕ ವೈವಿಧ್ಯಗಳನ್ನು ಹೊಂದಿದೆ. ಇಲ್ಲಿ ನೀವು ಹಲವಾರು ರೀತಿಯ ರುಚಿಕರವಾದ ಆಹಾರ ತಿಂಡಿಗಳನ್ನು ಸವಿಯಬಹುದು. ಅದರಲ್ಲಿ ಚೌಚೌ ಬಾತ್ ಸಹ ಒಂದು.ಚೌ-ಚೌ ಬಾತ್ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಉಪಹಾರಗಳಲ್ಲಿ ಒಂದಾಗಿದೆ. ಇದು ಖಾರಾಬಾತ್ ಮತ್ತು ಕೇಸರಿಬಾತ್ ಗಳ ಮಿಶ್ರಣ ಅಥವಾ ಉಪಮಾ,ಉಪ್ಪಿಟ್ಟು ಮತ್ತು ಶಿರಾದ ಸಂಯೋಜನೆ ಆಗಿದೆ.

ಕರ್ನಾಟಕದ ಆಹಾರದ ಶ್ರೇಣಿಯು ನಿಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ. ಕರ್ನಾಟಕದಲ್ಲಿ ಅಕ್ಕಿಯಿಂದ ಮಾಡಿದ ವಿವಿಧ ಬಗೆಯ ತಿಂಡಿಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಕರ್ನಾಟಕದಲ್ಲಿ ನೀವು ಪಾಕ ಪದ್ಧತಿಯಲ್ಲಿ ಹಲವು ವೈವಿಧ್ಯತೆಗಳನ್ನು ಕಾಣಬಹುದು. ದಕ್ಷಿಣ ಕನ್ನಡ ಅಡುಗೆ ಶೈಲಿ ಒಂದು ವಿಶೇಷವಾದರೆ, ಉತ್ತರ ಕರ್ನಾಟಕದ ಅಡುಗೆ ಶೈಲಿಯೂ ಒಂದು ವಿಶೇಷವಾಗಿದೆ. ಮಲೆನಾಡು ಅಡುಗೆ ಶೈಲಿಯು ಒಂದು ವಿಶೇಷತೆಯನ್ನು ಹೊಂದಿದೆ.

ಅಕ್ಕಿ ರೊಟ್ಟಿ ಎಂಬುದು ಅಕ್ಕಿ ಆಧಾರಿತ ಚಪ್ಪಟ್ಟೆಯಾದ ಬ್ರೆಡ್, ಇದು ಕರ್ನಾಟಕದ ಸಾಂಪ್ರದಾಯಿಕ ಉಪಹಾರವಾಗಿದೆ. ಅಕ್ಕಿ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಖನಿಜಗಳಾದ ಸೋಡಿಯಂ ಮತ್ತು ಪೊಟ್ಯಾಶಿಯಂ ಹೆಚ್ಚು ಪ್ರಮಾಣದಲ್ಲಿರುತ್ತವೆ.

ನಾಗಾರಾಧನೆ ಎಂದೂ ಕರೆಯಲ್ಪಡುವ ನಾಗಮಂಡಲವು ನಾಗ ದೇವರ ಗೌರವಾರ್ಥ ನಡೆಸಲಾಗುವ ಬಹು ದಿನಗಳ ಹಬ್ಬ ಮತ್ತು ಪೂಜಾ ಕಾರ್ಯಕ್ರಮವಾಗಿದೆ. ನಾಗಮಂಡಲ ವನ್ನು ಸಾಮಾನ್ಯವಾಗಿ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ.

ರಾಗಿ ಮುದ್ದೆ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಧಾನ ಊಟವಾಗಿದೆ. ರಾಗಿ ಮುದ್ದೆ ಪೌಷ್ಟಿಕ ಆಹಾರವಾಗಿದ್ದು ಅದನ್ನು ಸೇವಿಸುವ ವಿಧಾನ ವಿಶಿಷ್ಟವಾಗಿದೆ (ಜಗಿಯುವ ಬದಲಿಗೆ ನುಂಗಲಾಗುತ್ತದೆ).

ಡೊಳ್ಳು ಕುಣಿತ ಕರ್ನಾಟಕದ ಸಾಂಪ್ರದಾಯಿಕ ನೃತ್ಯ ಪ್ರಕಾರವಾಗಿದೆ. ರಾಜ್ಯದಾದ್ಯಂತ ನಡೆಯುವ ಪ್ರಮುಖ ಹಬ್ಬಗಳು ಮತ್ತು ಆಚರಣೆಗಳಲ್ಲಿ ಡೊಳ್ಳು ಪ್ರದರ್ಶನ ಅವಿಭಾಜ್ಯ ಅಂಗವಾಗಿರುತ್ತದೆ.

ಕಂಸಾಳೆ ನೃತ್ಯ ಮೈಸೂರು ಕರ್ನಾಟಕ (ಮೈಸೂರು, ನಂಜನಗುಡು, ಕೊಳ್ಳೆಗಾಲ ಹಾಗೂ ಸುತ್ತ ಮುತ್ತಲಿನ ಭಾಗದಲ್ಲಿ) ಪ್ರಚಲಿತವಿರುವ ನೃತ್ಯ ಪ್ರಕಾರವಾಗಿದೆ.

ಮೇಲುಕೋಟೆ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯಗಳು: ಮೇಲುಕೋಟೆ ದೇವಸ್ಥಾನವು ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸಂಜೆ 4 ರಿಂದ 6 ಗಂಟೆಯವರೆಗೆ ಮತ್ತು 7 ರಿಂದ 8 ಗಂಟೆಯವರೆಗೆ ತೆರೆದಿರುತ್ತದೆ.

9 ದಿನಗಳ ಕರಗವನ್ನು ಅನ್ವೇಷಿಸಿ, ತಿಗಳರು ಎಂಬ ತಮಿಳು ಮಾತನಾಡುವ ತೋಟಗಾರರ ಸಮುದಾಯವು ಪ್ರಾರಂಭಿಸಿದ ಮತ್ತು ಉಳಿಸಿಕೊಂಡ ಸಂಪ್ರದಾಯ. ಕರಗ ಉತ್ಸವವನ್ನು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಡುವಿನ ಕರಗದ ದಿನದಂದು ಮುಸ್ಸಂಜೆಯ ನಂತರ, ಸ್ತ್ರೀ ಉಡುಪನ್ನು ಧರಿಸಿದ ಪೂಜಾರಿಯೊಬ್ಬರು ಹಲವಾರು ಧೋತಿಯುಟ್ಟ, ಬರಿಯ ಎದೆಯ ತಿಗಳರುಗಳಿಂದ ಬೆರಗುಗೊಳಿಸುವ