Karnataka logo

Karnataka Tourism
GO UP
Akki Rotti

ಅಕ್ಕಿ ರೊಟ್ಟಿ

separator
  /  ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ ಎಂಬುದು ಅಕ್ಕಿ ಆಧಾರಿತ ಚಪ್ಪಟ್ಟೆಯಾದ ಬ್ರೆಡ್, ಇದು ಕರ್ನಾಟಕದ ಸಾಂಪ್ರದಾಯಿಕ ಉಪಹಾರವಾಗಿದೆ. ಅಕ್ಕಿ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಖನಿಜಗಳಾದ ಸೋಡಿಯಂ ಮತ್ತು ಪೊಟ್ಯಾಶಿಯಂ ಹೆಚ್ಚು ಪ್ರಮಾಣದಲ್ಲಿರುತ್ತವೆ. 

ಅಕ್ಕಿ ರೊಟ್ಟಿ ಮಾಡುವ ವಿಧಾನ:

ನಯವಾದ ಅಕ್ಕಿ ಹಿಟ್ಟಿಗೆ  ಹೆಚ್ಚಿದ ಈರುಳ್ಳಿ, ಕ್ಯಾರಟ್, ಕರಿಬೇವು, ತುರಿದ ತೇಗಿನಕಾಯಿ,ಕೊತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪನ್ನು ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ಎಣ್ಣೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ನಾದಬೇಕು ಹೀಗೆ ಅಕ್ಕಿ ರೊಟ್ಟಿ ಹಿಟ್ಟನ್ನು ತಯಾರಿಸಲಾಗುತ್ತದೆ. ಸಬ್ಬಸಿಗೆಯನ್ನು ಅಕ್ಕಿ ರೊಟ್ಟಿಗೆ ಉತ್ತಮ ಸುವಾಸನೆಯನ್ನು ಉಂಟುಮಾಡುತ್ತದೆ.

ನಂತರ ಹಿಟ್ಟನ್ನು ಬಾಳೆ ಎಲೆಯ(plantain) ಮೇಲೆ  ವೃತ್ತಾಕಾರದ ಆಕಾರಕ್ಕೆ ಹರಡಿ ಬಿಸಿ ಹಂಚಿನ ಮೇಲೆ ಹಾಕಲಾಗುತ್ತದೆ. ಮಧ್ಯಮ ಉರಿಯಲ್ಲಿ ಎರಡೂ ಬದಿಗಳನ್ನು ಕೆಲವು ನಿಮಿಷಗಳ ತನಕ ಬೇಯಿಸಿ ನಂತರ,  ಬಿಸಿಬಿಸಿ ಅಕ್ಕಿ ರೊಟ್ಟಿ ಬಡಿಸಲು ಸಿದ್ಧವಾಗಿದೆ!

ಇದರೊಂದಿಗೆ ಬಡಿಸಲಾಗುತ್ತದೆ: ಸ್ವಲ್ಪ ಬೆಣ್ಣೆಯನ್ನು  ಬಿಸಿ ಅಕ್ಕಿ ರೊಟ್ಟಿಯ ಮೇಲೆ  ಹಾಕಲಾಗುತ್ತದೆ. ಅಕ್ಕಿ ರೊಟ್ಟಿಯನ್ನು ಬಿಸಿಯಾಗಿದ್ದಾಗಲೇ ಸವಿಯುವುದು ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಖಾರ ಚಟ್ನಿ ಅಥವಾ ಉಪ್ಪಿನಕಾಯಿ ಜೊತೆಗೆ ನೀಡಲಾಗುತ್ತದೆ. 

ಅಕ್ಕಿ ರೊಟ್ಟಿ ಎಲ್ಲಿ ದೊರೆಯುತ್ತದೆ:

ಬೆಂಗಳೂರಿನಲ್ಲಿ ಸುಮಾರು ಹೋಟೆಲುಗಳಲ್ಲಿ, ಅದರಲ್ಲಿಯೂ, ಮಲ್ಲೇಶ್ವರಂನ- ಹಳ್ಳಿ ಮನೆ, ರಾಜಾಜಿನಗರದ- ನಳಪಾಕ, ಬಸವನಗುಡಿಯ -ಸೌತ್ ತಿಂಡಿಸ್ ಇತ್ಯಾದಿಗಳಲ್ಲಿ ಲಭ್ಯವಿರುತ್ತದೆ. ಅಕ್ಕಿ ರೊಟ್ಟಿಗೆ ದೊರೆಯುವ ನಿಮ್ಮ ಹತ್ತಿರವಿರುವ ರೆಸ್ಟೋರೆಂಟ್ ಅನ್ನು ಕಂಡುಹಿಡಿಯಲು ನೀವು ಆನ್‌ಲೈನ್ ಆಹಾರ ವಿತರಣಾ ಆಪ್ ಗಳನ್ನು ಬಳಸಬಹುದು. ಹೋಂಸ್ಟೇನಲ್ಲಿ ಉಳಿದಿದ್ದರೆ, ನಿಮ್ಮ  ಆತಿಥ್ಯ ವಹಿಸಿರುವವರು ವಿನಂತಿಯ ಮೇರೆಗೆ ನಿಮಗೆ  ಬಹಳ ಸಂತೋಷದಿಂದ ಅಕ್ಕಿ ರೊಟ್ಟಿಯನ್ನು  ಮಾಡಿಕೊಡುತ್ತಾರೆ . ಕರ್ನಾಟಕದಲ್ಲಿದ್ದಾಗ ಈ ರುಚಿಯಾದ ಉಪಹಾರವನ್ನು ತಿನ್ನಲು ಮರೆಯಬೇಡಿ .