ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೂ ಒಂದು ರೋಡ್ ಟ್ರಿಪ್
ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೂ ರೋಡ್ ಟ್ರಿಪ್ಕ: ರ್ನಾಟಕದ ಮಲೆನಾಡು ಪ್ರದೇಶದಲ್ಲಿ ನೆಲೆಗೊಂಡಿರುವ ಚಿಕ್ಕಮಗಳೂರು, ನಿಮ್ಮ ಮನಸ್ಸು, ದೇಹ ಮತ್ತು ಆತ್ಮವು ಪ್ರಕೃತಿಯ ಮಡಿಲಿನಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಒಂದು ಸೂಕ್ತವಾದ ತಾಣವಾಗಿದೆ. ಬೆಂಗಳೂರಿನ ಬಿಡುವಿಲ್ಲದ ಜೀವನದಿಂದ ವಿರಾಮ ತೆಗೆದುಕೊಳ್ಳಲು ನೀವು ಬಯಸಿದರೆ ಕೇವಲ 250 ಕಿಮೀ ದೂರದಲ್ಲಿರುವ ಚಿಕ್ಕಮಗಳೂರಿನ ಮಧ್ಯಮ ತಂಪಾದ ವಾತಾವರಣ ನಿಮಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಕ್ತವಾದ ಸ್ಥಳವಾಗಿದೆ. ಇದು ಕೇವಲ ಪರಿಪೂರ್ಣ ಗಮ್ಯಸ್ಥಾನವಷ್ಟೇ ಅಲ್ಲ, ಇದು ಹೊಂದಿರುವ ಹಸಿರು ಹುಲ್ಲುಗಾವಲು, ಹಚ್ಚ ಹಸಿರಿನ ಉಷ್ಣವಲಯದ ಕಾಡು, ಕಾಫಿ ತೋಟಗಳು, ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗಿನ ನಿಮ್ಮ ರಸ್ತೆ ಪ್ರಯಾಣವನ್ನು ಅದ್ಭುತವಾಗಿಸುತ್ತವೆ. ಸಮ್ಮೋಹನಗೊಳಿಸುತ್ತವೆ. ಈ ರೋಡ್ ಟ್ರಿಪ್ ಗೆ ಅಕ್ಟೋಬರ್ ನಿಂದ ಫೆಬ್ರವರಿ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದ್ದರೂ ಸಹ ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ನೀವು ಅತ್ಯಂತ ಸುಂದರವಾದ ಈ ನೈಸರ್ಗಿಕ ಸೌಂದರ್ಯವನ್ನು ಆನಂದಿಸಬಹುದು.
ಹಾಸನ:
ಇಲ್ಲಿನ ಹಚ್ಚ ಹಸಿರುವ ವಾತಾವರಣ ನಿಮ್ಮ ಮನಸ್ಸಿಗೆ ಅದ್ಭುತ ಶಾಂತಿಯನ್ನು ನೀಡುತ್ತಿದೆ. ನೀವು ಕುಣಿಗಲ್ ನಲ್ಲಿ ಕೆಲವು ಗಂಟೆಗಳನ್ನು ಆರಾಮದಾಯಕವಾಗಿ ಕಳೆಯಬಹುದು. ಸಮಯವಿದ್ದರೆ, ನೀವು ನಗರದ ಸಮೀಪದಲ್ಲಿರುವ ಬೇಗೂರು ಕೆರೆಗೆ ಭೇಟಿ ನೀಡಬಹುದು.
ಬೇಲೂರು:
ನೀವು ಬೆಂಗಳೂರಿನಿಂದ ಚಿಕ್ಕ ಮಗಳೂರಿಗೆ ಪ್ರಯಾಣಿಸುವಾಗ ಇತಿಹಾಸ ಪ್ರಸಿದ್ಧ ಸ್ಥಳವಾದ ಬೇಲೂರು ತಲುಪುತ್ತೀರಿ. ಈ ಹೆಸರನ್ನು ನೀವು ಕೇಳಿಯೇ ಇರುತ್ತಿರಿ. ಈ ನಗರದಲ್ಲಿ ಇರುವ ಚೆನ್ನಕೇಶವ ದೇವಾಲಯವು ವಿಶ್ವಪ್ರಸಿದ್ಧವಾಗಿದೆ. ಇದು ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ದಕ್ಷಿಣದ ಬನಾರಸ್‌ನಂತೆ ಜನಪ್ರಿಯವಾಗಿರುವ ಈ ನಗರದಲ್ಲಿ ನೀವು ಶಿಲ್ಪಕಲೆಯ ಅದ್ಭುತ ಲೋಕವನ್ನು ಪ್ರವೇಶಿಸಬಹುದು.
ಕುಣಿಗಲ್:
ಇಲ್ಲಿನ ಹಚ್ಚ ಹಸಿರುವ ವಾತಾವರಣ ನಿಮ್ಮ ಮನಸ್ಸಿಗೆ ಅದ್ಭುತ ಶಾಂತಿಯನ್ನು ನೀಡುತ್ತಿದೆ. ನೀವು ಕುಣಿಗಲ್ ನಲ್ಲಿ ಕೆಲವು ಗಂಟೆಗಳನ್ನು ಆರಾಮದಾಯಕವಾಗಿ ಕಳೆಯಬಹುದು. ಸಮಯವಿದ್ದರೆ, ನೀವು ನಗರದ ಸಮೀಪದಲ್ಲಿರುವ ಬೇಗೂರು ಕೆರೆಗೆ ಭೇಟಿ ನೀಡಬಹುದು.
ಶೆಟ್ಟಿಹಳ್ಳಿ ಚರ್ಚ್:
ಶೆಟ್ಟಿಹಳ್ಳಿಯಲ್ಲಿರುವ ಚರ್ಚ್ ಪ್ರವಾಸಿಗರನ್ನು ತನ್ನ ಸೌಂದರ್ಯದಿಂದ ಆಕರ್ಷಿಸುತ್ತದೆ. ಈ ಚರ್ಚ್ ಹೇಮಾವತಿ ನದಿಯ ದಡದ ಮೇಲೆ ಇದೆ. 18 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಚರ್ಚ್ ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
ಯಡಿಯೂರು ಕೆರೆ:
ಯಡಿಯೂರು ಕೆರೆ ನೋಡಲು ಸುಂದರವಾಗಿದೆ. ಇದು ತನ್ನ ಸುತ್ತಮುತ್ತಲೂ ಶಾಂತವಾದ ಪ್ರಕೃತಿಯನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಒಂದು ಶಾರ್ಟ್ ಬ್ರೇಕ್ ತೆಗೆದುಕೊಂಡು ಮುಂದೆ ಹೋಗಬಹುದು. ನಿಮ್ಮಲ್ಲಿ ಹೆಚ್ಚಿನ ಸಮಯವಿದ್ದರೇ ನೀವು ಇಲ್ಲಿ ಬೋಟಿಂಗ್ ಮತ್ತು ವಾಟರ್ ಸ್ಕೂಟರ್ ರೈಡ್ ಎಂಜಾಯ್ ಮಾಡಬಹುದು.ಜೊತೆಗೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸಹ ಸವಿಯಬಹುದು.
ಭದ್ರ ವನ್ಯಜೀವಿ ಅಭಯಾರಣ್ಯ:
ನೀವು ವನ್ಯಜೀವಿಗಳ ಕುರಿತು ಉತ್ಸಾಹಿಗಳಾಗಿದ್ದರೆ, ಚಿಕ್ಕಮಗಳೂರು ಮಾರ್ಗದಲ್ಲಿರುವ ಭದ್ರಾ ವನ್ಯಜೀವಿ ಧಾಮಕ್ಕೆ ನೀವು ಯಾವಾಗಲೂ ಭೇಟಿ ನೀಡಬಹುದು. ನೀವು ಇಲ್ಲಿ ಸಫಾರಿಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಹಚ್ಚ ಹಸಿರಿನ ಪರಿಸರದಲ್ಲಿ ಹುಲಿಗಳ ಸಹವಾಸವನ್ನು ಆನಂದಿಸಬಹುದು.
ನಿಮಗೆ ಚಿಕ್ಕಮಗಳೂರಿನಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ನೀವು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದು ಸಹ ನಿಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇಲ್ಲಿರುವ ಮುಳ್ಳಯ್ಯನ ಗಿರಿ ಶಿಖರವನ್ನು ನೀವು ಚಾರಣ ಮಾಡಬಹುದು. ಈ ಶಿಖರವು ಅದ್ಭುತವಾದ ಸಸ್ಯ ಸಂಕುಲನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಪ್ರಕೃತಿಯ ಮಡಿಲಲ್ಲಿ ಇರುವುದು ನಿಮ್ಮ ಮನಸ್ಸಿಗೆ ಚೇತೊಹಾರಿ ಅನುಭವವನ್ನು ನೀಡುತ್ತದೆ. ನೀವು ಆಧ್ಯಾತ್ಮಿಕ ಯೋಗಕ್ಷೇಮಕ್ಕಾಗಿ ಶಾರದಾಂಬಾ ದೇವಸ್ಥಾನಕ್ಕೆ ಸಹ ಭೇಟಿ ನೀಡಬಹುದು. ಈ ದೇವಸ್ಥಾನವು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ. ಚಿಕ್ಕಮಗಳೂರು ನಿಮಗೆ ವಿಶ್ರಾಂತಿ ಪಡೆಯಲು, ರೀಚಾರ್ಜ್ ಮಾಡಲು ಮತ್ತು ಪುನರುಜ್ಜೀವನಗೊಳಿಸಲು ಬೇಕಾದ ಎಲ್ಲವನ್ನೂ ನೀಡುತ್ತದೆ. ಇಲ್ಲಿನ ಪ್ರಕೃತಿಯ ಮಾಂತ್ರಿಕತೆಯು ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸಲಿ.