Karnataka Tourism
GO UP
Avathi Betta Lake

ಆವತಿ ಬೆಟ್ಟ ಕೆರೆ – ಬೆಂಗಳೂರಿನ ಬಳಿ ಒಂದು ದಿನದ ಪ್ರವಾಸ

separator
  /  ಬ್ಲಾಗ್   /  ಆವತಿ ಬೆಟ್ಟ ಕೆರೆ – ಬೆಂಗಳೂರಿನ ಬಳಿ ಒಂದು ದಿನದ ಪ್ರವಾಸ
Avathi Betta Lake

ಆವತಿ ಬೆಟ್ಟ ಕೆರೆ – ಬೆಂಗಳೂರಿನ ಬಳಿಯ ಒನ್ ಡೇ ಟ್ರಿಪ್

ಬೆಂಗಳೂರಿನ ಜನರು ಯಾವಾಗಲೂ  ಪ್ರತಿ ವಾರಾಂತ್ಯ ನಗರದ ಜಂಜಾಟದಿಂದ ದೂರವಿರಲು ಒಂದು ಸ್ಥಳದ ಹುಡುಕಾಟ ನಡೆಸುತ್ತಾರೆ ಎಂದು ನಮಗೆ ಗೊತ್ತು. ಅದು ಬೆಂಗಳೂರಿನಿಂದ  ಅತಿ ದೂರದಲ್ಲಿರಬಾರದು ತಾವು ಹೋಗುವ ಸ್ಥಳವು ಪ್ರತಿಯೊಬ್ಬರಿಗೂ ಇಷ್ಟವಾಗಬೇಕು ಎಂದು ಬಯಸುತ್ತಾರೆ. ಇಂತಹ ಪ್ರಯಾಣಿಕರಿಗೆ ಹೇಳಿ ಮಾಡಿಸಿದ ಸ್ಥಳವೆಂದರೆ ಆವತಿ ಬೆಟ್ಟ. ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ಆವತಿ ಬೆಟ್ಟವು ಚಾರಣಿಗರು, ಬೈಕರ್‌ಗಳು, ಪ್ರಕೃತಿ ಆಸಕ್ತರು ಮತ್ತು ಛಾಯಾಗ್ರಾಹಕರಿಗೆ ಸೂಕ್ತವಾದ ಸ್ಥಳವಾಗಿದೆ. ನಂದಿ ಬೆಟ್ಟದ ತಪ್ಪಲಿನಲ್ಲಿರುವ ಆವತಿ ಬೆಟ್ಟವು ಒಂದು ಸ್ವರ್ಗವಾಗಿದ್ದು, ಸಣ್ಣ ಬೆಟ್ಟಗಳು, ದೇವಾಲಯ ಮತ್ತು ಸುಂದರವಾದ ಸರೋವರವನ್ನು ಹೊಂದಿದೆ.

ಇಲ್ಲಿ ನೋಡಬೇಕಾದ ಸ್ಥಳಗಳು

ಶ್ರೀ ಲಕ್ಷ್ಮೀ ತಿಮ್ಮರಾಯ ಸ್ವಾಮಿ ದೇವಸ್ಥಾನ

ಈ ಕೆರೆ ಅಥವಾ ಬೆಟ್ಟದ ಬಳಿ ಯಾವುದೇ ಮೀಸಲಾದ ಪಾರ್ಕಿಂಗ್ ಇಲ್ಲ, ಆದರೆ ನೀವು ನಿಮ್ಮ ವಾಹನವನ್ನು ಶ್ರೀ ಲಕ್ಷ್ಮೀ ತಿಮ್ಮರಾಯ ಸ್ವಾಮಿ ದೇವಸ್ಥಾನದ ಬಳಿ ನಿಲ್ಲಿಸಬಹುದು. 500 ವರ್ಷಗಳಷ್ಟು ಹಳೆಯದಾದ ಈ ಪ್ರಾಚೀನ ದೇವಾಲಯವನ್ನು ಮಹಾನ್ ಸಂತ ಗೌತಮ ಮಹರ್ಷಿಗೆ ಸಮರ್ಪಿಸಲಾಗಿದ್ದು ದೇವಾಲಯದ ಕೆಳಗೆ ಇರುವ ದೊಡ್ಡ ಬಂಡೆಗಳ ನಡುವಿನ ಗುಹೆಯಲ್ಲಿ ಧ್ಯಾನ ಮಾಡಿದ್ದರು ಎಂಬ ಪ್ರತೀತಿ ಇದೆ. ದೇವಸ್ಥಾನಕ್ಕೆ ಹೋಗುವ ಇನ್ನೊಂದು ಮಾರ್ಗವು 200 ಮೆಟ್ಟಿಲುಗಳನ್ನು ಹೊಂದಿದೆ. ಈ ಮೂಲಕ ಹೋದರೆ  ನಂದಿ ಬೆಟ್ಟಗಳು, ಹೊರೆಗಿನ ಬೆಟ್ಟ, ಸವನದುರ್ಗ ಮತ್ತು ಚನ್ನಗಿರಿ ಬೆಟ್ಟಗಳ ಭವ್ಯವಾದ ನೋಟವನ್ನು ಆನಂದಿಸಬಹುದು.

ಆವತಿ ಕೆರೆ

ಆವತಿ ಕೆರೆ

ನೀವು ಹೋಗುವ ಮಾರ್ಗದ ಹಿನ್ನಲೆಯಲ್ಲಿ ಬೆಟ್ಟಗಳು, ಶಾಂತ ಸರೋವರ, ಸರೋವರದ ದಡದಲ್ಲಿ ನಡೆಯಲು ಮಣ್ಣಿನ ಹಾದಿಗಳು, ಸ್ಥಳೀಯ ದೇವತೆಯ ಸಣ್ಣ ದೇವಾಲಯ ಮತ್ತು ಸುತ್ತಮುತ್ತಲೂ ಸುಂದರ ಹಸಿರು ಚಿತ್ತಾರ  ಹೊಂದಿರುವ ಭೂದೃಶ್ಯವನ್ನು ಕಲ್ಪಿಸಿಕೊಳ್ಳಿ. ಇದು ನಿಜವಾಗಿಯೂ ಅಮೋಘ ದೃಶ್ಯವಾಗಿದೆ. ನಿಮ್ಮೊಳಗೆ ಅವಿತು ಕೂತಿರುವ ಮಗುವನ್ನು ಹೊರತನ್ನಿ. ಕೆರೆಯಲ್ಲಿ ಆನಂದಭರಿತರಾಗಿ ಮಿಂದೇಳಿ.

ಆವತಿ ಕೆರೆಯ ದೋಣಿ ವಿಹಾರವು ನಿಮಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ನೀವು ಇಲ್ಲಿ ಸಾಕಷ್ಟು ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು ಮತ್ತು  ಈ ನೈಸರ್ಗಿಕ ಸೊಂಪಾದ ಹಸಿರು ಹಳ್ಳಿಗಾಡಿನ ಸೌಂದರ್ಯದಲ್ಲಿ ಮಿಂದೇಳಬಹುದು.

ಆವತಿ ಸರೋವರದಲ್ಲಿ ದೋಣಿ ವಿಹಾರ

ಆವತಿ ಬೆಟ್ಟದ ಚಾರಣ

ಆವತಿ ಬೆಟ್ಟ ಪಾದಯಾತ್ರೆ

ಆವತಿ ಬೆಟ್ಟದ ಚಾರಣ ನಿಮಗೆ ಖಂಡಿತವಾಗಿ ಅದ್ಭುತವಾದ ಅನುಭವವನ್ನು ನೀಡುತ್ತದೆ.  ಆವತಿ ಬೆಟ್ಟವು ಸಂಪೂರ್ಣ ಕುಟುಂಬ, ಹವ್ಯಾಸಿ ಪಾದಯಾತ್ರಿಕರು ಮತ್ತು ಮಹಿಳಾ ಪ್ರಯಾಣಿಕರಿಗೆ ಸುಲಭವಾದ ಪಾದಯಾತ್ರೆಯಾಗಿದೆ. ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಇದು ಆಕರ್ಷಕ ಸ್ಥಳವಾಗಿದೆ.

ಇಲ್ಲಿನ ನಿಮ್ಮ ಪಾದಯಾತ್ರೆಯು ಹಸಿರು ಗದ್ದೆಗಳನ್ನು,  ಬಂಡೆಗಳನ್ನು ದಾಟುತ್ತದೆ, ಬೆಂಗಳೂರು ಯಾವಾಗಲೂ ಅನುಕೂಲಕರ ಹವಾಮಾನ ಹೊಂದಿದ್ದು ನೀವು ಯಾವುದೇ ಸಮಯದಲ್ಲಿ  ಯಾವುದೇ ಸ್ಥಳಕ್ಕೆ ಭೇಟಿ ನೀಡುವುದು ವರ್ಷವಿಡೀ ಉತ್ತಮವಾಗಿರುತ್ತದೆ. ನೀವು ಸ್ವಲ್ಪ ಏರಿದ ನಂತರ, ಹಿಂತಿರುಗಿ ನೋಡಿ. ಆಗ ಕಂಡು ಬರುವ ನೋಟಗಳಿಂದ ಮಂತ್ರಮುಗ್ಧರಾಗಿರಿ. ಇಲ್ಲಿ ನೀವು ನಿಮ್ಮ ಊಹೆಗೆ ನಿಲುಕಲಾಗದ ನಯನ ಮನೋಹರ  ದೃಶ್ಯವನ್ನು ನೀವು ನೋಡುತ್ತೀರಿ.  ಸರೋವರದ ಪಕ್ಕದಲ್ಲಿ ಅಥವಾ ಬೆಟ್ಟಗಳಲ್ಲಿ ಸ್ವಲ್ಪ ಗುಣಮಟ್ಟದ ಸಮಯವನ್ನು ಶಾಂತವಾಗಿ ಕಳೆಯಿರಿ.

ತಲುಪುವುದು ಹೇಗೆ?

ಆವತಿ ಕೆರೆ,ಬೆಟ್ಟವು  ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿದೆ. ಇಲ್ಲಿಗೆ ನೀವು ನಿಮ್ಮ ವಾಹನದ ಮೂಲಕ ಸುಲಭವಾಗಿ ತಲುಪಬಹುದು. ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳಿಗೆ ಬಸ್‌ನಲ್ಲಿ ಹೋಗಿ ಅಲ್ಲಿಂದ ರಿಕ್ಷಾದಲ್ಲಿ ಆವತಿ ಬೆಟ್ಟವನ್ನು ತಲುಪಬಹುದು.

ಪ್ರಮುಖ ಮಾಹಿತಿ

  1. ಇದು ಸುಲಭ ಮತ್ತು ಮಕ್ಕಳ ಸ್ನೇಹಿಯಾಗಿದೆ
  2. ಸ್ಥಳಕ್ಕೆ ಭೇಟಿ ನೀಡಲು ಯಾವುದೇ ಅನುಮತಿ ಅಗತ್ಯವಿಲ್ಲ ಆದರೆ ಜವಾಬ್ದಾರಿಯುತವಾಗಿರಿ.
  3. ನಿಮ್ಮೊಂದಿಗೆ ನಿಮ್ಮ  ಆಹಾರ ಮತ್ತು ನೀರನ್ನು ಒಯ್ಯಿರಿ.
  4. ನಿಮ್ಮ ಸನ್ ಪ್ರೊಟೆಕ್ಷನ್ ಕ್ರೀಮ್ ತೆಗೆದುಕೊಳ್ಳಿ.
  5. ಅಲ್ಲಿ ತ್ಯಾಜ್ಯ ಹಾಕಬೇಡಿ. ನಿಮ್ಮ ಕಸವನ್ನು ನಿಮ್ಮೊಂದಿಗೆ ಮರಳಿ ತನ್ನಿ.
  6. ಸ್ಥಳೀಯರಿಗೆ ಮತ್ತು ದೇವಸ್ಥಾನದ ವಾತಾವರಣಕ್ಕೆ ತೊಂದರೆ ಕೊಡಬೇಡಿ.
  7. ನೀವು ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದರೆ, ಸೂಕ್ತ ಕಾಣಿಕೆಯನ್ನು ನೀಡಿ.
  8.  ಸಾಕಷ್ಟು ವಾಕಿಂಗ್ ಮಾಡಬೇಕಾಗಬಹುದು ಆರಾಮದಾಯಕವಾದ ಬಟ್ಟೆ ಮತ್ತು ಬೂಟುಗಳನ್ನು ಧರಿಸಿ.
  9. ಯಾವುದೇ ಬಟ್ಟೆ ಬದಲಾಯಿಸುವ ಕೊಠಡಿಗಳಿಲ್ಲ ಆದ್ದರಿಂದ ನೀವು ಸ್ಟ್ರೀಮ್ ನಲ್ಲಿ  ಒದ್ದೆಯಾಗಿದ್ದರೆ, ನೀವು ಬೇಗನೆ ಒಣಗಿದ ಬಟ್ಟೆಗಳನ್ನು ಧರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
  10. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಒಯ್ಯಲು ಮರೆಯಬೇಡಿ.