GO UP

ಸೋಮೇಶ್ವರ ಕಡಲತೀರ

separator
Scroll Down

ಕರಾವಳಿ ಕರ್ನಾಟಕದ ಮಂಗಳೂರು ನಗರದ ಹೊರವಲಯದಲ್ಲಿರುವ ಸೋಮೇಶ್ವರ ಕಡಲತೀರ ಹಲವು ಬಂಡೆಗಳಿರುವ ಕಡಲತೀರವಾಗಿದೆ. ನೇತ್ರಾವತಿ ನದಿ ಸೋಮೇಶ್ವರ ಕಡಲತೀರದ  ಬಳಿ ಅರಬ್ಬೀ ಸಮುದ್ರ ಸೇರುತ್ತದೆ . ಸೋಮೇಶ್ವರ ಕಡಲತೀರ ಹತ್ತಿರದ ಸೋಮೇಶ್ವರ ದೇವಸ್ಥಾನದಿಂದ ಈ ಹೆಸರನ್ನು ಪಡೆದುಕೊಂಡಿದೆ.

ಸೋಮೇಶ್ವರ  ಕಡಲತೀರ‌ದ ಆಕರ್ಷಣೆಗಳು

  • ಉಳ್ಳಾಲ ಡೆಲ್ಟಾ: ಉಳ್ಳಾಲ ಡೆಲ್ಟಾ (ಮುಖಜ ಭೂಮಿ ಅಥವಾ ನಡುಗಡ್ಡೆ) ಒಂದು ಸುಂದರವಾದ ತಾಣವಾಗಿದ್ದು, ಅಲ್ಲಿ ನೇತ್ರಾವತಿ ನದಿ ಅರಬ್ಬೀ ಸಮುದ್ರ ಪ್ರವೇಶಿಸುವುದನ್ನು ವೀಕ್ಷಿಸಬಹುದು.
  • ಸೂರ್ಯಾಸ್ತ: ಸೋಮೇಶ್ವರ ಕಡಲತೀರ‌ದ  ಸೂರ್ಯಾಸ್ತವನ್ನು ನೋಡಿ ಆನಂದಿಸುವುದು ಸ್ಥಳೀಯರಿಗೆ  ಮೆಚ್ಚಿನ ಚಟುವಟಿಕೆಯಾಗಿದೆ.

ಸೋಮೇಶ್ವರ ದೇವಸ್ಥಾನ: ಕಡಲತೀರಕ್ಕೆ ಭೇಟಿ ನೀಡುವವರು ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುಬಹುದಾಗಿದೆ.

ಬಂಡೆಗಳು: ಸೋಮೇಶ್ವರ ಕಡಲತೀರವು ಹಲವಾರು ಬಂಡೆಗಳನ್ನು ಸಮುದ್ರ ದಡದಲ್ಲಿ ಅಥವಾ ದಡದಿಂದ ಅಲ್ಪ ದೂರದಲ್ಲಿ ಹೊಂದಿದೆ- ಸಾಗರ ಅಥವಾ ಸೂರ್ಯಾಸ್ತವನ್ನು ಕುಳಿತು ವೀಕ್ಷಿಸಲು ಇವು ಸೂಕ್ತವಾಗಿವೆ.

ಚೂಪಾದ ಕಲ್ಲುಗಳು ಮತ್ತು ಬಲವಾದ ಭರತ (ಸುಳಿ) ಇರುವ ಸಾಧ್ಯತೆಯಿಂದಾಗಿ ಸೋಮೇಶ್ವರ ಕಡಲತೀರದಲ್ಲಿ ಈಜುವುದು ಸೂಕ್ತವಲ್ಲ.

ಹತ್ತಿರದ ಇತರ ಆಕರ್ಷಣೆಗಳು:  ಸೇಂಟ್ ಅಲೋಶಿಯಸ್ ಚಾಪೆಲ್, ಸುಲ್ತಾನ್ ಬತ್ತೇರಿ, ಪಿಲಿಕುಳ ನಿಸರ್ಗ ಧಾಮ, ಪಣಂಬೂರು ಕಡಲತೀರ, ತಣ್ಣೀರು ಭಾವಿ ಕಡಲತೀರ ಮತ್ತು ಕದ್ರಿ ಮಂಜುನಾಥ ದೇವಸ್ಥಾನಗಳು ಮಂಗಳೂರಿನಲ್ಲಿ ಭೇಟಿ ನೀಡಬಹುದಾದ ಇತರ ಜನಪ್ರಿಯ ಆಕರ್ಷಣೆಗಳಾಗಿವೆ.

ತಲುಪುವುದು ಹೇಗೆ: ಸೋಮೇಶ್ವರ ಕಡಲತೀರ ಮಂಗಳೂರು ನಗರದಿಂದ ದಕ್ಷಿಣಕ್ಕೆ 17 ಕಿ.ಮೀ ದೂರದಲ್ಲಿದೆ. ಮಂಗಳೂರು ನಗರ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಸೋಮೇಶ್ವರ ಕಡಲತೀರವನ್ನು ಮಂಗಳೂರು ನಗರದಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ತಲುಪಬಹುದು.

ವಸತಿ : ಮಂಗಳೂರು ಬೀಚ್ ರೆಸಾರ್ಟ್ ಸೋಮೇಶ್ವರ ಕಡಲತೀರಕ್ಕೆ ಬಹಳ ಹತ್ತಿರದಲ್ಲಿದೆ. ಮಂಗಳೂರು ನಗರವು ಎಲ್ಲಾ ಬಜೆಟ್ ವಿಭಾಗಗಳಲ್ಲಿ ಹಲವಾರು ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money