GO UP

ಸರ್ಕಾರಿ ವಸ್ತುಸಂಗ್ರಹಾಲಯ, ಬೆಂಗಳೂರು

separator
Scroll Down

ಬೆಂಗಳೂರಿನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯ ದಕ್ಷಿಣ ಭಾರತದ ಎರಡನೇ ಅತ್ಯಂತ ಹಳೆಯ ವಸ್ತುಸಂಗ್ರಹಾಲಯವಾಗಿದೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಹಲವಾರು ಪುರಾತತ್ವ ಮತ್ತು ಭೌಗೋಳಿಕ ಕಲಾಕೃತಿಗಳಿಗೆ ನೆಲೆಯಾಗಿದೆ. ಇಲ್ಲಿ ಮೊದಲಿನ ಕನ್ನಡ ಶಾಸನವಾದ ಹಲ್ಮಿಡಿ ಶಾಸನವನ್ನು ಇಲ್ಲಿ ಸುರಕ್ಷಿತವಾಗಿಡಲಾಗಿದೆ.

1865 ರಲ್ಲಿ ಸ್ಥಾಪನೆಯಾದ ಸರ್ಕಾರಿ ವಸ್ತುಸಂಗ್ರಹಾಲಯವು 2 ಮಹಡಿಗಳು ಮತ್ತು 18 ಪ್ರದರ್ಶನ ಕೊಠಡಿಗಳನ್ನು (ಗ್ಯಾಲರಿ) ಹೊಂದಿದೆ.  ಇದು ಪ್ರವಾಸಿಗರಿಗೆ ಪ್ರಾಚೀನ ಇತಿಹಾಸ, ತಂತ್ರಜ್ಞಾನ ಮತ್ತು ಸಂಪ್ರದಾಯಗಳ ಪರಿಚಯ ಮಾಡಿಕೊಡುತ್ತದೆ. 

ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದ ಪ್ರಮುಖ ಆಕರ್ಷಣೆಗಳು

  • ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿರುವ 600 ವರ್ಣಚಿತ್ರಗಳು
  • ಹೊಯ್ಸಳ, ನೊಳಂಬ ಮತ್ತು ಗಾಂಧಾರ ಅವಧಿಗಳ ಶಿಲ್ಪಗಳು
  • ಚಂದ್ರವಳ್ಳಿ, ಮೊಹೆಂಜೋದಾರೊ, ಹಂಪಿ ಮತ್ತು ಹಳೆಬೀಡುಗಳಲ್ಲಿ ಉತ್ಖನನದ ಸಮಯದಲ್ಲಿ ಪಡೆದ ಕಲಾಕೃತಿಗಳು.
  • ಮಥುರಾ(ಶ್ರೀಕೃಷ್ಣನ ಜನ್ಮಸ್ಥಳ)ದಿಂದ ಮಣ್ಣಿನ (ಟೆರಾಕೋಟಾ) ಕಲಾಕೃತಿಗಳು 
  • ಕೊಡಗಿನ ಯೋಧರು ಬಳಸುವ ಶಸ್ತ್ರಾಸ್ತ್ರಗಳು
  • ಕ್ರಿ.ಶ 890ರ  ಬೇಗರ್ ಶಾಸನ, ಕ್ರಿ.ಶ 450ರ ಹಲ್ಮಿಡಿ ಶಾಸನ ಮತ್ತು ಕ್ರಿ.ಶ 949ರ  ಅಟಕೂರ್ ಶಾಸನ ಸೇರಿದಂತೆ ಪ್ರಾಚೀನ ಶಾಸನಗಳು
  • ಪುರಾತನ ಕಾಲದ ಸಂಗೀತ ವಾದ್ಯಗಳು
  • ಟಿಪ್ಪು ಸುಲ್ತಾನ್ ಕೋಟೆ, ಶ್ರೀರಂಗಪಟ್ಟಣ ಇತ್ಯಾದಿಗಳ ಸಣ್ಣ ಗಾತ್ರದ ಮಾದರಿ. 

ಸಮಯ: ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಭೇಟಿ ಮಾಡುವುದು ಹೇಗೆ? ಸರ್ಕಾರಿ ವಸ್ತುಸಂಗ್ರಹಾಲಯ, ಬೆಂಗಳೂರು ಕಬ್ಬನ್ ಪಾರ್ಕ್ ಕ್ಯಾಂಪಸ್‌ನಲ್ಲಿದೆ. ಸರ್ಕಾರಿ ವಸ್ತುಸಂಗ್ರಹಾಲಯವು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 5 ಕಿ.ಮೀ, ಬೆಂಗಳೂರು ವಿಮಾನ ನಿಲ್ದಾಣದಿಂದ 36 ಕಿ.ಮೀ ದೂರದಲ್ಲಿದೆ.  ಬೆಂಗಳೂರು ನಗರದ ಯಾವುದೇ ಭಾಗದಿಂದ ಬೆಂಗಳೂರು ಮೆಟ್ರೊ (ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವು ಹತ್ತಿರದಲ್ಲಿದೆ),ಬಸ್ ಅಥವಾ ಟ್ಯಾಕ್ಸಿ ಬಳಸಿ ಸರ್ಕಾರಿ ವಸ್ತುಸಂಗ್ರಹಾಲಯವನ್ನು ತಲುಪಬಹುದು.

ವಸತಿ: ಬೆಂಗಳೂರು ನಗರವು ಪ್ರತಿ ಬಜೆಟ್‌ಗೆ ತಕ್ಕಂತೆ ಸಾಕಷ್ಟು ಹೋಟೆಲ್‌ಗಳನ್ನು ಹೊಂದಿದೆ. ಜೆಡಬ್ಲ್ಯೂ ಮ್ಯಾರಿಯಟ್ ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯದ ಎದುರಿನ ಐಷಾರಾಮಿ ಹೋಟೆಲ್ ಆಗಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money