GO UP

ಯಾಣ

separator
Scroll Down

ಸೊಕ್ಕಿದ್ರೆ ಯಾಣ, ರೊಕ್ಕ ಇದ್ರೆ ಗೋಕರ್ಣ ಎಂಬ ಮಾತಿದೆ. ಯಾಣ ಬಂಡೆಗಳು ಸಾಹಸ ಆಸಕ್ತರನ್ನು ಕೈ ಬಿಸಿ ಕರೆಯುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದಿಂದ ೩೦ ಕಿ ಮೀ ದೂರದಲ್ಲಿದೆ 

ಯಾಣದಲ್ಲಿ ಏನಿದೆ?

  • ಬಂಡೆ ಹತ್ತುವ ಸಾಹಸ: ಭೈರವೇಶ್ವರ ಬೆಟ್ಟ ಮತ್ತು ಮೋಹಿನಿ ಬೆಟ್ಟ (90 ಮೀಟರ್) ಎರಡು ಬೃಹತ್ ಶಿಲಾ ರಚನೆಗಳಿಂದಾಗಿ ಯಾಣ ದೂರದೂರದಿಂದ ಸಾಹಸಾಸಕ್ತರನ್ನು ಆಕರ್ಷಿಸುತ್ತದೆ.  ಬಂಡೆಯ ತುದಿಯ ತನಕ ಹತ್ತಿಳಿಯಲು ಸಣ್ಣ ದಾರಿ, ಕಡಿದಾದ ಮೆಟ್ಟಿಲುಗಳಿದ್ದು ಸಾಕಷ್ಟು ದೈಹಿಕ ಶ್ರಮ ಬೇಡುತ್ತದೆ.  
  • ದೇವಾಲಯಗಳು: ಭೈರೇಶ್ವರ ಬೆಟ್ಟದ ಕೆಳಭಾಗದಲ್ಲಿ, ಸ್ವಯಂಭು (ತಾನಾಗೇ ಕಾಣಿಸಿಕೊಂಡ) ಎಂದು ನಂಬಲಾದ ಶಿವ ದೇವಾಲಯವಿದೆ. ಶಿವಲಿಂಗದ ಮೇಲೆ ಬಂಡೆಗಳ ಮೇಲ್ಭಾಗದಿಂದ ನೀರು ತೊಟ್ಟಿಕ್ಕುತ್ತದೆ.
  • ಪಕ್ಷಿ ವೀಕ್ಷಣೆ: ಯಾಣ ಬಂಡೆಗಳು ಮತ್ತು ಹತ್ತಿರದ ಪ್ರದೇಶಗಳಲ್ಲಿ ಹಲವು ಪ್ರಬೇಧದ ಪಕ್ಷಿಗಳಿದ್ದು ಪಕ್ಷಿ ವೀಕ್ಷಣೆ ಮಾಡಬಯಸುವವರಿಗೆ ಉತ್ತಮ  ತಾಣವಾಗಿದೆ. ಗಿಳಿಗಳು, ಬಾವಲಿಗಳು, ಕೀಟ ಭಕ್ಷಕ ಬೀ ಈಟರ್) ಅತಿ ಹೆಚ್ಚಾಗಿ ಕಾಣಿಸುವ ಕೆಲವು ಪಕ್ಷಿಗಳು. 
  • ಜಲಪಾತಗಳು: ವಿಭೂತಿ ಜಲಪಾತಕ್ಕೆ ಚಾರಣ ಮೂಲಕ ತಲುಪಬಹುದಾಗಿದೆ.  (ಯಾಣದಿಂದ ಚಾರಣ ಮಾರ್ಗ 9.7 ಕಿ.ಮೀ.,  ಆದರೆ ರಸ್ತೆಯ ಮೂಲಕ 70 ಕಿ.ಮೀ.)

“ಸೊಕ್ಕಿದ್ರೆ ಯಾಣ, ರೊಕ್ಕ ಇದ್ರೆ ಗೋಕರ್ಣ” ಎಂಬ ಕನ್ನಡ ಮಾತಿದೆ – ನಿಮಗೆ ಖರ್ಚು ಮಾಡಲು ಸಾಕಷ್ಟು ಹಣವಿದ್ದರೆ, ರೋಣಕ್ಕೆ ಹೋಗಿ, ನೀವು ಉತ್ಸಾಹದಿಂದ ಪುಟಿದೇಳುತ್ತಿದ್ದರೆ ಯಾಣ ಬೆಟ್ಟ ಹತ್ತಿ ಎಂದರ್ಥ. ಯಾಣವನ್ನು ತಲುಪಲು ಹಿಂದೆ ಸಾಕಷ್ಟು ಶ್ರಮ ಬೇಕಿತ್ತು. ಈಗ ಸುಸಜ್ಜಿತ ರಸ್ತೆಗಳು ಬಂಡೆಗಳ ತಳಭಾಗದವರೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ.

ಪುರಾಣ:

ಯಾಣದಲ್ಲಿನ ಭವ್ಯ ಬಂಡೆಗಳ ಕುರಿತಂತೆ  ಹಿಂದೂ ಪುರಾಣಗಳಲ್ಲಿ ಆಸಕ್ತಿದಾಯಕ ಕತೆಯಿದೆ. ಬಾಸ್ಮಾಸುರ ಎಂಬ ರಾಕ್ಷಸನು ತನ್ನ ಅಂಗೈಯನ್ನು ಯಾವುದರ ಮೇಲೆ ಇಡುತ್ತಾನೋ ಅವೆಲ್ಲವೂ ಸುಟ್ಟು ಭಸ್ಮವಾಗಬೇಕು ಎಂಬ ವರ ಪಡೆಯುತ್ತಾನೆ. ತದನಂತರ ತನಗೆ ವರ ನೀಡಿದ ಶಿವ ಭಗವಂತನ ಮೇಲೆಯೇ ಈ ವರವನ್ನು ಪ್ರಯೋಗಿಸಲು ಯತ್ನಿಸುತ್ತಾನೆ. ಈಶ್ವರನು ತನ್ನ ಜೀವಕ್ಕೆ ಹೆದರಿ  ವಿಷ್ಣುವಿನ ಸಹಾಯವನ್ನು ಕೋರುತ್ತಾನೆ, ವಿಷ್ಣು ಮೋಹಿನಿ ಎಂಬ ಸುಂದರ ಮಹಿಳೆಯ ರೂಪಧಾರಣೆ ಮಾಡಿ ಬಾಸ್ಮಾಸುರನ ಮುಂದೆ ಕಾಣಿಸಿಕೊಳ್ಳುತ್ತಾನೆ. ಮೋಹಿನಿ ಮೋಹ ಪಾಶಕ್ಕೆ ಬಿದ್ದ ಭಸ್ಮಾಸುರ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಮೋಹಿನಿ ನೀಡಿದ ತನ್ನೊಂದಿಗೆ ನೃತ್ಯ ಮಾಡುವ ಸವಾಲನ್ನು ಸ್ವೀಕರಿಸುತ್ತಾನೆ  ಮೋಹಿನಿ ಮಾಡಿದ ಪ್ರತಿ ನೃತ್ಯವನ್ನು ಚಾಚೂ ತಪ್ಪದೆ ಭಸ್ಮಾಸುರ ಅನುಕರಿಸುತ್ತಾನೆ. ನೃತ್ಯ ಮುಂದುವರೆದಂತೆ ಮೋಹಿನಿ ತನ್ನ ತಲೆಯ ಮೇಲೆ ಕೈ ಇಟ್ಟುಕೊಳ್ಳುತ್ತಾಳೆ. ಬಾಸ್ಮಾಸುರನು ತಾನು ಕೂಡ ತನ್ನ ತಲೆಯ ಮೇಲೆ ತನ್ನದೇ ಕೈ ಇಟ್ಟುಕೊಳ್ಳುತ್ತಾನೆ ಮತ್ತು ಬೂದಿಯಾಗುತ್ತಾನೆ.

ಯಾಣವನ್ನು ತಲುಪುವುದು ಹೇಗೆ:

ಯಾಣ ಬಂಡೆಗಳು ಕುಮಟಾದ ಹತ್ತಿರದ ಪಟ್ಟಣ ಮತ್ತು ರೈಲ್ವೆ ನಿಲ್ದಾಣದಿಂದ 30 ಕಿ.ಮೀ ದೂರದಲ್ಲಿದೆ. ಕುಮಟಾ ತಲುಪಲು ಬೆಂಗಳೂರು (ಯಾಣದಿಂದ 470 ಕಿ.ಮೀ) ಮತ್ತು ಮಂಗಳೂರು (ಯಾಣದಿಂದ 230 ಕಿ.ಮೀ) ರೈಲುಗಳು ಲಭ್ಯವಿದೆ. ಹುಬ್ಬಳ್ಳಿ ಮತ್ತು ಗೋವಾಗಳು ಯಾಣಕ್ಕೆ (175 ಕಿ.ಮೀ ದೂರದಲ್ಲಿ) ಹತ್ತಿರದ ವಿಮಾನ ನಿಲ್ದಾಣಗಳಾಗಿವೆ .ನಿಮ್ಮ ಯಾಣ ಪ್ರವಾಸಕ್ಕಾಗಿ ಕುಮಟಾ ಪಟ್ಟಣದಿಂದ ಟ್ಯಾಕ್ಸಿಗಳನ್ನು ಪಡೆಯಬಹುದು.

ಯಾಣಕ್ಕೆ ಭೇಟಿಕೊಡಲು ಕನಿಷ್ಠ ಅರ್ಧ ದಿನ ಮೀಸಲಿಡುವುದು ಉತ್ತಮವಾಗಿದೆ.  ಕರಾವಳಿಯ ಮುರುಡೇಶ್ವರ (76 ಕಿ.ಮೀ), ಗೋಕರ್ಣ (48 ಕಿ.ಮೀ) ಮತ್ತು ಕಾರವಾರ  (90 ಕಿ.ಮೀ) ಹತ್ತಿರದ ಇತರ ಆಕರ್ಷಣೆಗಳು. 

ವಸತಿ:

ಕುಮಟಾದಲ್ಲಿ ಬಹುಸಂಖ್ಯೆಯ ಹೋಟೆಲ್ ಆಯ್ಕೆಗಳು ಲಭ್ಯವಿದೆ.

     

    Tour Location

     

    Leave a Reply

    Accommodation
    Meals
    Overall
    Transport
    Value for Money