ಮದ್ರಸಾ-ಎ-ಮಹಮ್ಮದ್ ಗವಾನ್ ಅಥವಾ ಮೊಹಮದ್ ಗವಾನ್ ಅವರ ಮದರಸಾ ಬೀದರ್ನ ಪ್ರಾಚೀನ ಇಸ್ಲಾಮಿಕ್ ಸಂಸ್ಥೆಯಾಗಿದೆ. ಮೊಹಮದ್ ಗವಾನ್ ಮದರಸಾವನ್ನು 15 ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಯಿತು.
ಇತಿಹಾಸ: ಮೊಹಮದ್ ಗವಾನ್ ಒಬ್ಬ ಪರ್ಷಿಯನ್ ವ್ಯಾಪಾರಿಯಾಗಿದ್ದನು. ಇರಾನ್‌ನಿಂದ ದೆಹಲಿಗೆ ಬಂದು ನಂತರ ದಕ್ಷಿಣ ಭಾರತದ ಬೀದರ್‌ಗೆ ತಲುಪಿದನು. ಮಹಮ್ಮದ್ ಗವಾನ್ ಅವರನ್ನು ಬಹಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಯಿತು.
ಮೊಹಮದ್ ಗವಾನ್ ಅವರು ಶಿಕ್ಷಣ ಸಂಸ್ಥೆಯೊಂದರ ತೀವ್ರ ಅಗತ್ಯವನ್ನು ಗಮನಿಸಿದರು ಮತ್ತು ತಮ್ಮ ಸ್ವಂತ ಹಣದಿಂದ ಮದರಸಾವನ್ನು ನಿರ್ಮಿಸಿದರು. ಮದರಸಾದಲ್ಲಿ ವಿಶಾಲವಾದ ಕ್ಯಾಂಪಸ್, ಅಪ್ರತಿಮ ಕಟ್ಟಡ ಮತ್ತು ವಿವಿಧ ಸೌಲಭ್ಯಗಳು ಅದರ ಕಾಲದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ನಾಚಿಸುವಂತಿತ್ತು. ಮೊಹಮದ್ ಗವಾನ್ ಮದರಸಾವನ್ನು 1472 ರಲ್ಲಿ ನಿರ್ಮಿಸಲಾಯಿತು.
ಮೊಹಮದ್ ಗವಾನ್ ಮದರಸಾ ಮುಖ್ಯಾಂಶಗಳು:
- 54.9 ಚದರ ಮೀಟರ್ x 62.53 ವಿಸ್ತೀರ್ಣದ ಪಾಯ
- ದೊಡ್ಡ ಪ್ರವೇಶ ದ್ವಾರ
- ಎರಡು ಎತ್ತರದ ಗೋಪುರಗಳು (ಸುಮಾರು 50.5 ಮೀಟರ್ ಎತ್ತರ)
- ವರ್ಣರಂಜಿತ ಮುಂಭಾಗ, ಹಸಿರು, ಹಳದಿ ಮತ್ತು ಬಿಳಿ ಬಣ್ಣಗಳಲ್ಲಿ ಹೂವಿನ ಅಲಂಕಾರ.
- 36 ತರಗತಿ ಕೊಠಡಿಗಳು
- 3000 ಸಂಪುಟಗಳ ಹಸ್ತಪ್ರತಿಗಳಿರುವ ದೊಡ್ಡ ಗ್ರಂಥಾಲಯ
- ಪ್ರಯೋಗಾಲಯ
- ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಬೋರ್ಡಿಂಗ್ ಸೌಲಭ್ಯಗಳು
- ಕುರಾನ್‌ನ ಉಲ್ಲೇಖಗಳಿರುವ ಕಲೆ ಮತ್ತು ವಿನ್ಯಾಸಗಳು
ತಲುಪುವುದು ಹೇಗೆ: ಮೊಹಮದ್ ಗವಾನ್ ಮದರಸಾ ಬೀದರ್ ನಗರ ವ್ಯಾಪ್ತಿಯಲ್ಲಿದೆ, ನಡೆದು ಅಥವಾ ಆಟೋ / ಟ್ಯಾಕ್ಸಿ ಮೂಲಕ ಪ್ರವೇಶಿಸಬಹುದು. ಬೀದರ್ ಬೆಂಗಳೂರಿನಿಂದ 690 ಕಿ.ಮೀ ದೂರದಲ್ಲಿದೆ. ಬೀದರ್ ವಾಯು ಮತ್ತು ರೈಲು ಸಂಪರ್ಕವನ್ನು ಹೊಂದಿದೆ.
ವಸತಿ: ಬೀದರ್ ನಗರದಲ್ಲಿ ಬಜೆಟ್, ಮಧ್ಯ ಶ್ರೇಣಿಯ ಮತ್ತು ಐಷಾರಾಮಿ ಹೋಟೆಲ್‌ಗಳಿವೆ.