GO UP

ಮುಳ್ಳಯ್ಯನಗಿರಿ ಶಿಖರ

separator
Scroll Down

ಮುಳ್ಳಯ್ಯನಗಿರಿ ಶಿಖರ

ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು ಕರ್ನಾಟಕದ ಅತ್ಯುನ್ನತ ಶಿಖರವಾಗಿದೆ. ಮುಳ್ಳಯ್ಯನಗಿರಿ ಬೆಂಗಳೂರಿನಿಂದ 265 ಕಿ.ಮೀ ದೂರ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು ಮತ್ತು ದಕ್ಷಿಣ ಕರ್ನಾಟಕದ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಮುಳ್ಳಯ್ಯನಗಿರಿಯ ಆಕರ್ಷಣೆಗಳು 

  • ಸುಲಭ ಪ್ರವೇಶ: ಹೆಚ್ಚುಚಾರಣದ ಅಗತ್ಯವಿಲ್ಲದೆ ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವನ್ನು ತಲುಪಲು ವಾಹನ ನಿಲುಗಡೆ ಸ್ಥಳದಿಂದ 500 ಮೆಟ್ಟಿಲುಗಳನ್ನು ಒಳಗೊಂಡ ಸಣ್ಣ ಚಾರಣವಷ್ಟೇ ಸಾಕಾಗಿದೆ. 
  • ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ನಯನ ಮನೋಹರ ನೋಟವನ್ನು ನೀಡುತ್ತದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇತರ ಆಕರ್ಷಣೆಗಳಾಗಿವೆ. 
  • ಸರ್ವಋತು ಪ್ರವಾಸಿ ಕೇಂದ್ರ: ಮುಳ್ಳಯ್ಯನಗಿರಿ ಶಿಖರವನ್ನು ವರ್ಷಪೂರ್ತಿ ಭೇಟಿ ಮಾಡಬಹುದು.
  • ದೇವಾಲಯ: ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ.

ಹತ್ತಿರ ಇನ್ನೇನಿದೆ? ಮುಳ್ಳಯ್ಯನಗಿರಿಗೆ ಹೋಗುವ ದಾರಿಯಲ್ಲಿ  ಸೀತಾಳಯ್ಯನಗಿರಿ  ಬೆಟ್ಟ, ದೇವಸ್ಥಾನವಿದೆ. ಬಾಬಾಬುಡನಗಿರಿ  ಮತ್ತು ಮಾಣಿಕ್ಯಾಧರ ಜಲಪಾತಗಳು (ಮುಳ್ಳಯ್ಯನಗಿರಿ ಯಿಂದ 26 ಕಿ.ಮೀ) ಹತ್ತಿರದ ನೋಡಲೇಬೇಕಾದ ತಾಣಗಳಾಗಿವೆ.

ತಲುಪುವುದು ಹೇಗೆ? ಕಡೂರ್ ಜಂಕ್ಷನ್ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಮುಳ್ಳಯ್ಯನಗಿರಿಯಿಂದ 60 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (180 ಕಿ.ಮೀ). ಚಿಕ್ಕಮಗಳೂರು (ಮುಳ್ಳಯ್ಯನಗಿರಿ ಯಿಂದ 22 ಕಿ.ಮೀ) ವರೆಗೆ ಬಸ್ಸುಗಳು ಲಭ್ಯವಿದೆ. ಚಿಕ್ಕಮಗಳೂರು ಅಥವಾ ಕಡೂರಿನಿಂದ  ಟ್ಯಾಕ್ಸಿ ಪಡೆದು ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು. ಕೊನೆಯ ಕೆಲವು ಕಿ.ಮೀ.ಗಳು ಕಿರಿದಾದ ರಸ್ತೆಯಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. 

ವಸತಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ಹೋಂ ಸ್ಟೇಗಳು ಲಭ್ಯವಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಬಜೆಟ್ ಹೋಟೆಲ್‌ಗಳು ಲಭ್ಯವಿದೆ.

ತ್ವರಿತ ಲಿಂಕ್‌ಗಳು

Manikhyadhara Falls
Jog waterfalls

    Tour Location

    Leave a Reply

    Accommodation
    Meals
    Overall
    Transport
    Value for Money