GO UP

ಮಿಲಾಗ್ರೆಸ್ ಚರ್ಚ್, ಮಂಗಳೂರು

separator
Scroll Down

ಮಿಲಾಗ್ರೆಸ್ ಚರ್ಚ್ ದಕ್ಷಿಣ ಕನ್ನಡದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಇದು ಮಂಗಳೂರು ನಗರದಲ್ಲಿದೆ ಮತ್ತು ಅವರ್ ಲೇಡಿ ಆಫ್ ಮಿರಾಕಲ್ ಳನ್ನು ಇಲ್ಲಿ ಆರಾಧಿಸಲಾಗುತ್ತದೆ. ಮಿಲಾಗ್ರೆಸ್ 1680 ರಲ್ಲಿ ಬಿಷಪ್ ಥಾಮಸ್ ಡಿ ಕ್ಯಾಸ್ಟ್ರೊ ಸ್ಥಾಪಿಸಿದ ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ. 

ಇತಿಹಾಸ: ದಕ್ಷಿಣ ಕನ್ನಡಕ್ಕೆ ಸ್ಥಳಾಂತರಗೊಳ್ಳಲು ಉತ್ಸುಕರಾಗಿದ್ದ ಗೋವಾದ  ಕ್ಯಾಥೊಲಿಕರಿಗೆ ಉಡುಗೊರೆಯಾಗಿ ಕೆಳದಿ ರಾಣಿ ರಾಣಿ ಚೆನ್ನಮ್ಮ ಅವರು ಉಡುಗೊರೆಯಾಗಿ ನೀಡಿದ ಭೂಮಿಯಲ್ಲಿ ಮಿಲಾಗ್ರೆಸ್ ಚರ್ಚ್ ಅನ್ನು ನಿರ್ಮಿಸಲಾಯಿತು. ಮಂಗಳೂರಿನ ಕ್ರಿಶ್ಚಿಯನ್ನರು ಬ್ರಿಟಿಷರೊಂದಿಗೆ ಕೈಜೋಡಿಸಿ ತನಗೆ ಮುಳುವಾಗಬಹುದು ಎಂಬ ತಪ್ಪು ಕಲ್ಪನೆಯಿದ್ದ ಟಿಪ್ಪು ಸುಲ್ತಾನ್ ಆಜ್ಞೆಯಾನುಸಾರ ಸಾವಿರಾರು ಕ್ರೈಸ್ತರನ್ನು ಸೆರೆಹಿಡಿಯಲಾಯಿತು ಮತ್ತು ಮಿಲಾಗ್ರೆಸ್ ಸೇರಿದಂತೆ ಹಲವಾರು ಚರ್ಚುಗಳನ್ನು ಭಾಗಶಃ ನಾಶಪಡಿಸಲಾಯಿತು. ಟಿಪ್ಪು ಸುಲ್ತಾನನ ಸೋಲಿನ ನಂತರ, ಸೆರೆಹಿಡಿಯಲ್ಪಟ್ಟಿದ್ದ ಕ್ರಿಶ್ಚಿಯನ್ನರು ಮಂಗಳೂರಿಗೆ ಮರಳಿದರು ಮತ್ತು ಮಿಲಾಗ್ರೆಸ್ ಚರ್ಚ್ ಅನ್ನು ಪುನ ನಿರ್ಮಿಸಿದರು. 

ಪ್ರಾಥನಾ  ಸಮಯಗಳು: ವಾರದ ದಿನಗಳಲ್ಲಿ (ಕೊಂಕಣಿ ಭಾಷೆಯಲ್ಲಿ) ಬೆಳಗ್ಗೆ 6, 7 ಗಂಟೆ  ಮತ್ತು ಸಂಜೆ  6 ಗಂಟೆಗೆ,  ಶನಿವಾರದಂದು ಸಂಜೆ 4  ಮತ್ತು 5 ಗಂಟೆಗೆ (ಇಂಗ್ಲಿಷ್ ಮತ್ತು ಕೊಂಕಣಿ) ಮತ್ತು ಭಾನುವಾರ ಬೆಳಗ್ಗೆ 6, 7, 8.15 ಗಂಟೆಗೆ (ಇಂಗ್ಲಿಷ್), 9.30  ಮತ್ತು ಸಂಜೆ  5 ಗಂಟೆಗೆ (ಇತರ ಭಾಷೆಗಳು)

ತಲುಪುವುದು ಹೇಗೆ: ಮಂಗಳೂರು ನಗರ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ  ಉತ್ತಮ ಸಂಪರ್ಕ ಹೊಂದಿದೆ. ಮಿಲಾಗ್ರೆಸ್ ಚರ್ಚ್ ನಗರ ಕೇಂದ್ರದಲ್ಲಿದೆ, ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ ಮತ್ತು ಆಟೋ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯುವ ಮೂಲಕ ತಲುಪಬಹುದು.

ವಸತಿ: ಮಂಗಳೂರು ನಗರವು ಎಲ್ಲಾ ಶ್ರೇಣಿಯಲ್ಲಿ ಹಲವಾರು ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

ಅಧಿಕೃತ ಸೈಟ್: Check Here

    Tour Location

    Leave a Reply

    Accommodation
    Meals
    Overall
    Transport
    Value for Money