GO UP

ಮಾಗೋಡು ಜಲಪಾತ

separator
Scroll Down

ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಜಲಪಾತವಾಗಿದೆ, ಯೆಲ್ಲಾಪುರ ತಾಲೂಕಿನಲ್ಲಿ ಬೇಡ್ತಿ ನದಿ ಸುಮಾರು 200 ಮೀಟರ್ ಎತ್ತರದಿಂದ ದೈತ್ಯ ಬಂಡೆಯ ಮೇಲೆ ಎರಡು ಭಾಗಗಳಾಗಿ ಧುಮುಕಿ ಮಾಗೋಡು ಜಲಪಾತ ಸೃಷ್ಟಿಯಾಗುತ್ತದೆ. ವಾಹನ ನಿಲುಗಡೆಯಿಂದ ಜಲಪಾತದ ವೀಕ್ಷಣಾ ಮಂಚದ  ತನಕ ತಲುಪಲು ಉತ್ತಮ ಕಾಲು ಹಾದಿಯಿದೆ. 

ಮಾಗೋಡು  ಜಲಪಾತದ ಸನಿಹ ಇರುವ ಇತರೆ ಆಕರ್ಷಣೆಗಳು:

  • ಕವಡೆ ಕೆರೆ (ಸರೋವರ) ಮಾಗೋಡು ಜಲಪಾತಕ್ಕೆ ಹೋಗುವ ದಾರಿಯಲ್ಲಿದೆ. ಕವಡೆ ಕೆರೆ ಯೆಲ್ಲಾಪುರದಿಂದ 6 ಕಿ.ಮೀ ದೂರದಲ್ಲಿದೆ. 
  • ಜೆನುಕಲ್ಲು ಗುಡ್ಡ ಚಾರಣ: ಮಾಗೋಡು ಜಲಪಾತದಿಂದ 4 ಕಿ.ಮೀ.
  • ವನದುರ್ಗ ದೇವಸ್ಥಾನ: ಮಾಗೋಡು ಜಲಪಾತದಿಂದ 1.3 ಕಿ.ಮೀ.
  • ಕಲ್ಲಾರೆ ಜಲಪಾತಗಳು: ಮಾಗೋಡು ಜಲಪಾತದಿಂದ  1 ಕಿ.ಮೀ

ಸಮಯ: ಮಾಗೋಡು ಜಲಪಾತವನ್ನು ವಾರದ ಎಲ್ಲಾ ದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಭೇಟಿ ಮಾಡಬಹುದಾಗಿದೆ. ಜುಲೈ ಮತ್ತು ಡಿಸೆಂಬರ್ ನಡುವೆ ಮಾಗೋಡು ಜಲಪಾತ ಅತಿ ಹೆಚ್ಚು ನೀರಿರುವುದರಿಂದ ಸುಂದರವಾಗಿ ಕಾಣುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ನೀರಿನ ಮಟ್ಟ ಕಡಿಮೆ ಇರುತ್ತದೆ.

ಹತ್ತಿರದಲ್ಲಿ ಇನ್ನೇನಿದೆ? ಮಾಗೋಡು ಜಲಪಾತದ ಜೊತೆಗೆ ಸಾಥೋಡಿ ಜಲಪಾತ (38 ಕಿ.ಮೀ), ಬನವಾಸಿ (83 ಕಿ.ಮೀ), ಉಂಚಳ್ಳಿ ಜಲಪಾತ (92 ಕಿ.ಮೀ) ಮತ್ತು ದಾಂಡೇಲಿ (70 ಕಿ.ಮೀ) ಭೇಟಿ ನೀಡಬಹುದಾಗಿದೆ.

ತಲುಪುವುದು ಹೇಗೆ: ಮಾಗೋಡು ಜಲಪಾತವು ಬೆಂಗಳೂರಿನಿಂದ 442 ಕಿ.ಮೀ, ಜಿಲ್ಲಾ ಕೇಂದ್ರ ಕಾರವಾರದಿಂದ 107 ಕಿ.ಮೀ ಮತ್ತು ಹುಬ್ಬಳ್ಳಿಯಿಂದ 86 ಕಿ.ಮೀ (ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ) ದೂರದಲ್ಲಿದೆ. ಯೆಲ್ಲಾಪುರಕ್ಕೆ ಕಾರವಾರ, ಹುಬ್ಬಳ್ಳಿ ಅಥವಾ ಬೆಂಗಳೂರಿನಿಂದ ಬಸ್ಸುಗಳು ಲಭ್ಯವಿದೆ. ಯೆಲ್ಲಾಪುರದಿಂದ 17 ಕಿ.ಮೀ ದೂರದಲ್ಲಿರುವ ಮಾಗೋಡು ಜಲಪಾತವನ್ನು ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಯೆಲ್ಲಾಪುರ ನಗರದಲ್ಲಿ ಹೋಟೆಲ್‌ಗಳು ಲಭ್ಯವಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money