GO UP

ಬಿಲಾಲ್ ಮಸೀದಿ, ಬೆಂಗಳೂರು

separator
Scroll Down

ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ  ರಸ್ತೆಯಲ್ಲಿರುವ ಪ್ರಮುಖ ಮಸೀದಿಗಳಲ್ಲಿ ಬಿಲಾಲ್ ಮಸೀದಿ ಕೂಡ ಒಂದು. ಬಿಲಾಲ್ ಮಸೀದಿಯನ್ನು ‘ಮಸೀದಿ ಇ ಈದ್ಗಾ ಬಿಲಾಲ್’ ಎಂದೂ ಕರೆಯುತ್ತಾರೆ. ಹಸಿರು ಗುಮ್ಮಟ ಮತ್ತು ನಾಲ್ಕು ಗೋಪುರಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಮಸೀದಿಯು ಅದರ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ನೋಡಲು ಕೂಡ ಸುಂದರವಾಗಿ ಕಾಣುವ ತಾಣವಾಗಿದೆ.

ಬಿಲಾಲ್ ಮಸೀದಿಯ ಮುಖ್ಯಾಂಶಗಳು:

  • ವಿಶಿಷ್ಟ ವಿನ್ಯಾಸ ಮತ್ತು ವಾಸ್ತುಶಿಲ್ಪ
  • ಉತ್ತಮವಾಗಿ ವಿನ್ಯಾಸಗೊಳಿಸಲಾದ ಒಳಾಂಗಣಗಳು
  • ಸಾಕಷ್ಟು ಎರಡು ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ  ಸೌಲಭ್ಯಗಳು

ಬಿಲಾಲ್ ಮಸೀದಿಯನ್ನು  ಸುಮಾರು 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ 1.45 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ ಮತ್ತು ಪ್ರಾರ್ಥನೆಗಾಗಿ 6500 ಜನರು ಸೇರಬಹುದಾದ ಸಾಮರ್ಥ್ಯ ಹೊಂದಿದೆ

ಹತ್ತಿರದಲ್ಲಿ ಇನ್ನೇನಿದೆ? ರಾಗಿಗುಡ್ಡ ದೇವಸ್ಥಾನ (1.3 ಕಿ.ಮೀ), ಲಾಲ್‌ಬಾಗ್ (4 ಕಿ.ಮೀ), ಬುಲ್ ಟೆಂಪಲ್ ಬಸವನಗುಡಿ (6 ಕಿ.ಮೀ), ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (15 ಕಿ.ಮೀ) ಬೆಂಗಳೂರಿನ ಬಿಲಾಲ್ ಮಸೀದಿಯೊಂದಿಗೆ ಭೇಟಿ ನೀಡಬಹುದಾದ ಇತರ ಆಕರ್ಷಣೆಗಳಾಗಿವೆ. 

ತಲುಪುವುದು ಹೇಗೆ: ಬಿಲಾಲ್ ಮಸೀದಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 42 ಕಿ.ಮೀ ಮತ್ತು ನಗರ ಕೇಂದ್ರದಿಂದ (ಮೆಜೆಸ್ಟಿಕ್ ಪ್ರದೇಶ) 10 ಕಿ.ಮೀ ದೂರದಲ್ಲಿದೆ. ರಾಷ್ಠ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ಬಿಲಾಲ್ ಮಸೀದಿಯಿಂದ 2.5 ಕಿ.ಮೀ ದೂರದಲ್ಲಿರುವ ಮೆಟ್ರೋ ನಿಲ್ದಾಣವಾಗಿದೆ. ಬಿಲಾಲ್ ಮಸೀದಿಗೆ ಬೆಂಗಳೂರು ನಗರದ ಯಾವುದೇ ಭಾಗದಿಂದ ಬಸ್, ಆಟೋ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದಾಗಿದೆ. 

ವಸತಿ: ದಕ್ಷಿಣ ಬೆಂಗಳೂರಿನಲ್ಲಿ ಎಲ್ಲಾ ಬಜೆಟ್ ವಿಭಾಗಗಳಲ್ಲಿ ಸಾಕಷ್ಟು ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money