GO UP

ಪಣಂಬೂರು ಕಡಲತೀರ

separator
Scroll Down

ಕರಾವಳಿ ಕರ್ನಾಟಕದ ಮಂಗಳೂರು ನಗರದ ಅತ್ಯಂತ ಜನಪ್ರಿಯ ಬೀಚ್‌ಗಳಲ್ಲಿ ಪಣಂಬೂರು ಕಡಲತೀರ  ಒಂದಾಗಿದೆ. ಪಣಂಬೂರು ಕಡಲತೀರವನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ ಮತ್ತು ಪಣಂಬೂರು  ಕಡಲತೀರ  ಹಲವಾರು ಮನರಂಜನಾ ಚಟುವಟಿಕೆಗಳು ಲಭ್ಯವಿವೆ.

ಪಣಂಬೂರು ಕಡಲತೀರದ ಆಕರ್ಷಣೆಗಳು

  • ಸ್ವಚ್ಛವಾದ ಬೀಚ್: ವಿವಿಧ ಸ್ವತಂತ್ರ ಸಮೀಕ್ಷೆಗಳ  ಪ್ರಕಾರ ಪಣಂಬೂರು ಭಾರತದ  ಅತ್ಯಂತ ಸ್ವಚ್ಛ ಕಡಲತೀರಗಳಲ್ಲಿ ಒಂದಾಗಿದೆ.
  • ಜೀವ ರಕ್ಷಕರು:  ಹಲವು ಜೀವ ರಕ್ಷಕರು (ಲೈಫ್‌ಗಾರ್ಡ್‌ಗಳು) ನೀರಿಗಿಳಿದ ಪ್ರವಾಸಿಗರ ಮೇಲೆ ಕಣ್ಣಿಡುವುದರಿಂದ ಪಣಂಬೂರು ಕಡಲತೀರ ಅತ್ಯಂತ ಸುರಕ್ಷಿತವಾಗಿದೆ.  ನೀರಿಗಿಳಿಯುವುದು ಸುರಕ್ಷಿತವಲ್ಲದ ಸಮಯದಲ್ಲಿ (ಪ್ರತಿಕೂಲ ಹವಾಮಾನ, ಭರತ ಇತ್ಯಾದಿ) ಪಣಂಬೂರು ಕಡಲತೀರವನ್ನು ಪ್ರವಾಸಿಗರಿಗೆ ತೆರೆಯಲಾಗುವುದಿಲ್ಲ
  • ಕುದುರೆ ಮತ್ತು ಒಂಟೆ ಸವಾರಿಯನ್ನು ಕಡಲತೀರದಲ್ಲಿ  ಆನಂದಿಸಬಹುದಾಗಿದೆ.

ಪಣಂಬೂರು ಕಡಲತೀರದಲ್ಲಿ ಪೂರ್ವಾನುಮತಿಯೊಂದಿಗೆ ರಾತ್ರಿ ಕ್ಯಾಂಪಿಂಗ್ ಸಾಧ್ಯವಿದೆ

  • ಸಾಹಸ ಚಟುವಟಿಕೆಗಳು: ಎಟಿವಿ ಸವಾರಿಗಳು, ಪ್ಯಾರಾಸೈಲಿಂಗ್, ಜೆಟ್‌ಸ್ಕಿ ಸವಾರಿಗಳು ಮತ್ತು ಸರ್ಫಿಂಗ್ ಅನ್ನು ಪಣಂಬೂರು  ಕಡಲತೀರದಲ್ಲಿ ಆನಂದಿಸಬಹುದು

ಪಣಂಬೂರು  ಕಡಲತೀರದ ಬಳಿ ಇರುವ ಉಪಾಹಾರ ಗೃಹಗಳು ಸಸ್ಯಾಹಾರಿ ಮತ್ತು ಮತ್ಸ್ಯಾಹಾರ ಭಕ್ಷ್ಯಗಳನ್ನು ಮಾರಾಟ ಮಾಡುತ್ತವೆ.

ಸಮಯ: ಪಣಂಬೂರು  ಕಡಲತೀರ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಕುಟೀರಗಳಲ್ಲಿ ಉಳಿದುಕೊಂಡಿರುವ ಅತಿಥಿಗಳು ಕಡಲತೀರಕ್ಕೆ 24 ಗಂಟೆಗಳ ಪ್ರವೇಶವನ್ನು ಹೊಂದಿರುತ್ತಾರೆ.

ಹತ್ತಿರದ ಇತರ ಆಕರ್ಷಣೆಗಳು: ಸೇಂಟ್ ಅಲೋಶಿಯಸ್ ಚಾಪೆಲ್, ಪಿಲಿಕುಳ  ನಿಸರ್ಗ ಧಾಮ, ತಣ್ಣೀರು ಭಾವಿ ಕಡಲತೀರ ಮತ್ತು ಕದ್ರಿ ಮಂಜುನಾಥ ದೇವಾಲಯವು ಮಂಗಳೂರಿನಲ್ಲಿ ಭೇಟಿ ನೀಡಬಹುದಾದ ಇತರ ಜನಪ್ರಿಯ ಆಕರ್ಷಣೆಗಳಾಗಿವೆ.

ತಲುಪುವುದು ಹೇಗೆ: ಪಣಂಬೂರು  ಕಡಲತೀರ ಮಂಗಳೂರು ನಗರದಿಂದ 9 ಕಿ.ಮೀ ದೂರದಲ್ಲಿದೆ. ಮಂಗಳೂರು ನಗರ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ  ಉತ್ತಮ ಸಂಪರ್ಕ ಹೊಂದಿದೆ. ಮಂಗಳೂರು ನಗರದಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆದು ಪಣಂಬೂರು ಕಡಲತೀರ ತಲುಪಬಹುದು.

ವಸತಿ: ಪಣಂಬೂರು ಕಡಲತೀರದಲ್ಲೇ  ಬ್ಲೂಬೇ ಬೀಚ್ ಕಬಾನಾಸ್ (ಕಾಟೇಜ್) ಲಭ್ಯವಿದೆ. ಮಂಗಳೂರು ನಗರದಲ್ಲಿ ಎಲ್ಲಾ ಬಜೆಟ್ನಲ್ಲಿ ಹಲವಾರು ವಸತಿಗೃಹಗಳಿವೆ.

    Tour Location

    Leave a Reply

    Accommodation
    Meals
    Overall
    Transport
    Value for Money