GO UP

ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ

separator
Scroll Down

ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ

ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ: ಮಂಗಟ್ಟೆ (ಹಾರ್ನ್‌ಬಿಲ್) ಒಂದು ಸುಂದರ ಪಕ್ಷಿ ಪ್ರಭೇದವಾಗಿದ್ದು ಇತರ ಪಕ್ಷಿಗಳಿಗಿಂತ ವಿಭಿನ್ನವಾಗಿವೆ. ಮಂಗಟ್ಟೆ ದೊಡ್ಡ, ವಿಶಿಷ್ಟ ಆಕಾರದ ಹಳದಿ ಬಣ್ಣದ ಕೊಕ್ಕುಗಳನ್ನು ಹೊಂದಿರುವುದರಿಂದ ಗುರುತಿಸುವುದು ಬಹಳ ಸುಲಭ ಮತ್ತು ತನ್ನ ಈ ಬಣ್ಣದ ಕೊಕ್ಕಿನಿಂದಾಗಿ ಪಕ್ಷಿ ವೀಕ್ಷಕರ ಮತ್ತು ಛಾಯಾಗ್ರಾಹಕರ ಕಣ್ಮಣಿವಾಗಿದೆ. ಮಂಗಟ್ಟೆಗಳನ್ನು ಗುರುತಿಸಲು ಕರ್ನಾಟಕದ ದಾಂಡೇಲಿ ಅತ್ಯಂತ ಜನಪ್ರಿಯ ಸ್ಥಳವಾಗಿದೆ.

ಪ್ರಪಂಚದಾದ್ಯಂತ ಸುಮಾರು 55 ವಿವಿಧ ರೀತಿಯ ಮಂಗಟ್ಟೆ‌ಗಳಿವೆ. ಭಾರತದ ಪಶ್ಚಿಮ ಘಟ್ಟದ ​​ಪ್ರದೇಶದ ಹೊರತಾಗಿ, ಆಫ್ರಿಕಾ, ಫಿಲಿಪೈನ್ಸ್ ಇತ್ಯಾದಿ ದೇಶಗಳಲ್ಲೂ ಮಂಗಟ್ಟೆ‌‌ಗಳು ಕಂಡುಬರುತ್ತವೆ. ಭಾರತವು ಸುಮಾರು 9 ಜಾತಿಯ ಮಂಗಟ್ಟೆ‌ಗಳಿಗೆ ನೆಲೆಯಾಗಿದೆ. ದಾಂಡೇಲಿಯಲ್ಲಿ ಕಂಡುಬರುವ ಮಂಗಟ್ಟೆ‌ಗಳು ಸಾಮಾನ್ಯವಾಗಿ ಮಲಬಾರ್ ಪೈಡ್ ಹಾರ್ನ್‌ಬಿಲ್, ಮಲಬಾರ್ ಗ್ರೇ ಹಾರ್ನ್‌ಬಿಲ್ ಮತ್ತು ಇಂಡಿಯನ್ ಗ್ರೇ ಹಾರ್ನ್‌ಬಿಲ್ ಪ್ರಭೇದಕ್ಕೆ ಸೇರಿದವುಗಳಾಗಿವೆ. 

ದಾಂಡೇಲಿಯಲ್ಲಿ ಮಂಗಟ್ಟೆಯನ್ನು  ಎಲ್ಲಿ ನೋಡಬಹುದು:

ಮಂಗಟ್ಟೆಗಳನ್ನು ಗುರುತಿಸಲು ಸಾಕಷ್ಟು ತಾಳ್ಮೆ, ಸ್ವಲ್ಪ ಅದೃಷ್ಟ ಮತ್ತು ಸ್ವಲ್ಪ ಸ್ಥಳೀಯ ಮಾಹಿತಿಯ ಅಗತ್ಯವಿರುತ್ತದೆ. ಗಣೇಶ ಗುಡಿಯಲ್ಲಿರುವ ಓಲ್ಡ್ ಮ್ಯಾಗಜೀನ್ ಹೌಸ್ ಮತ್ತು ದಾಂಡೇಲಿಯ ಕಾಳಿ ಸಾಹಸ ಶಿಬಿರ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಚಾರಣ / ಪಕ್ಷಿ ವೀಕ್ಷಣೆ ನಡಿಗೆಗಳನ್ನು ನಡೆಸುತ್ತದೆ, ಈ ಸಮಯದಲ್ಲಿ ಅನುಭವಿ ಮಾರ್ಗದರ್ಶಕರು ಜೊತೆಗಿರುತ್ತಾರೆ ಮತ್ತು ಮಂಗಟ್ಟೆಗಳು ಕಾಣಸಿಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ನಿಮ್ಮ ಆತಿಥೇಯರ (ಉದಾ: ಮನೆ ವಸತಿ ಮಾಲೀಕರು, ರೆಸಾರ್ಟ್ ಸಿಬ್ಬಂದಿ) ಸಹಾಯದಿಂದ ಮಂಗಟ್ಟೆಗಳು ಕಾಣಿಸಬಹುದಾದ ಹತ್ತಿರದ ಪ್ರದೇಶದ ಮಾಹಿತಿ ಪಡೆಯಬಹುದಾಗಿದೆ.  

ಹತ್ತಿರದಲ್ಲಿ ಇನ್ನೇನಿದೆ:

ಸಾಥೋಡಿ ಜಲಪಾತ, ಲಾಲ್ ಗುಲಿ ಜಲಪಾತ, ಅಟ್ಟಿವೇರಿ ಪಕ್ಷಿಧಾಮ, ಸೋಂಡಾ, ಮತ್ತು ಸಿಂಥೆರಿ ಬಂಡೆಗಳು ದಾಂಡೇಲಿಗೆ ಹತ್ತಿರವಿರುವ ಆಕರ್ಷಣೆಗಳಾಗಿವೆ. 

ದಾಂಡೇಲಿಯನ್ನು ತಲುಪುವುದು ಹೇಗೆ:

ದಾಂಡೇಲಿ ಬೆಂಗಳೂರಿನಿಂದ 460 ಕಿ.ಮೀ.ದೂರದಲ್ಲಿದೆ.  ಹುಬ್ಬಳ್ಳಿ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (65 ಕಿ.ಮೀ). ಲೋಂಡಾ, ಅಲ್ನವಾರ್ ಹತ್ತಿರದ ರೈಲು ನಿಲ್ದಾಣಗಳಾಗಿವೆ (35 ಕಿ.ಮೀ). ಕಾರವಾರ, ಹುಬ್ಬಳ್ಳಿ ಅಥವಾ ಅಲ್ನವಾರ್ ನಿಂದ ದಾಂಡೇಲಿಗೆ ಭೇಟಿ ನೀಡಲು ಟ್ಯಾಕ್ಸಿ ಪಡೆಯಬಹುದಾಗಿದೆ. 

ವಸತಿ:

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ದಾಂಡೇಲಿ- ಕಾಳಿ ಸಾಹಸ ಶಿಬಿರ ಮತ್ತು ಓಲ್ಡ್ ಮ್ಯಾಗಜೀನ್ ಹೌಸ್ ವಸತಿ ಸೌಲಭ್ಯಗಳನ್ನು ನಡೆಸುತ್ತಿದೆ. ದಾಂಡೇಲಿಯಲ್ಲಿ ಹಲವಾರು ಮನೆ ವಸತಿ ಮತ್ತು ಖಾಸಗಿ ರೆಸಾರ್ಟ್ಗಳು ಲಭ್ಯವಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money