GO UP

ತುಂಗಾ ಭದ್ರಾ ಅಣೆಕಟ್ಟು

separator
Scroll Down

ತುಂಗಾ ಭದ್ರಾ ಅಣೆಕಟ್ಟು (ಟಿಬಿ ಅಣೆಕಟ್ಟು) ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತುಂಗಾ ಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಲಾದ ವಿವಿಧೋದ್ದೇಶ ಅಣೆಕಟ್ಟು. ಟಿಬಿ ಅಣೆಕಟ್ಟು  ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಹಂಪಿಗೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಟಿಬಿ ಅಣೆಕಟ್ಟಿಗೂ ಭೇಟಿ ನೀಡುತ್ತಾರೆ.

ತುಂಗಾ ಭದ್ರಾ ಜಲಾಶಯವು 101 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು, ಜಲಾನಯನ ಪ್ರದೇಶವು 28000 ಚದರ ಕಿ.ಮೀ. ವಿಸ್ತಾರವಾಗಿದೆ. ಟಿಬಿ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದ್ದು ಮತ್ತು ಸುಮಾರು 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದೆ.

ಟಿಬಿ ಅಣೆಕಟ್ಟಿ ಸಮೀಪದ ಆಕರ್ಷಣೆಗಳು

  • ಸೌಂಡ್ ಮತ್ತು ಲೈಟ್ ಶೋ: ಟಿಬಿ ಡ್ಯಾಮ್ ರಾತ್ರಿಯಲ್ಲಿ ಬೆಳಕಿನ ಅಲಂಕಾರದಿಂದ ಪ್ರಕಾಶಿಸುವಾಗ ವೀಕ್ಷಿಸಲು ಬಹಳ ಸುಂದರವಾಗಿ ಕಾಣುತ್ತದೆ.  33 ಕ್ರೆಸ್ಟ್ ಗೇಟ್‌ಗಳಿದ್ದು ಪ್ರತಿ ಗೇಟಿನಿಂದ ಧುಮ್ಮಿಕ್ಕುವ  ನೀರಿಗೆ ವಿಭಿನ್ನ ಬಣ್ಣಗಳ ಬೆಳಕಿನ ದೀಪ ಅಳವಡಿಸಲಾಗಿದ್ದು ವರ್ಣರಂಜಿತ ದೃಶ್ಯ ವೈಭವ ನೋಡಬಹುದಾಗಿದೆ. ಟಿಬಿ ಅಣೆಕಟ್ಟು ದೀಪಾಲಂಕಾರವನ್ನು  ಪ್ರತಿದಿನ ಸಂಜೆ 7.15 ರಿಂದ ರಾತ್ರಿ 8.30 ರವರೆಗೆ ನಡೆಸಲಾಗುತ್ತದೆ. ನೀರಿನ ಮಟ್ಟ ಕಡಿಮೆಯಾದಾಗ ದೀಪಾಲಂಕಾರ ನಡೆಯದೇ ಇರಬಹುದು. 
  • ಉದ್ಯಾನಗಳು: ಟಿಬಿ ಅಣೆಕಟ್ಟು ಬಳಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನಗಳಿದ್ದು ವಿಶ್ರಾಂತಿ ಪಡೆಯಲು ಉತ್ತಮ ಸ್ಥಳವಾಗಿದೆ.

ಹತ್ತಿರದಲ್ಲಿ ಇನ್ನೇನಿವೆ: 18 ಕಿ.ಮೀ ದೂರದಲ್ಲಿರುವ ಹಂಪಿ ನೋಡಲೇಬೇಕಾದ ತಾಣವಾಗಿದೆ.

ತಲುಪುವುದು ಹೇಗೆ: ಅಣೆಕಟ್ಟು ಬೆಂಗಳೂರಿನಿಂದ 330 ಕಿ.ಮೀ ದೂರದಲ್ಲಿದೆ. ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು 40 ಕಿ.ಮೀ ದೂರದಲ್ಲಿದೆ. ಹೊಸಪೇಟೆ ರೈಲ್ವೆ ನಿಲ್ದಾಣವು ಟಿಬಿ ಅಣೆಕಟ್ಟಿನಿಂದ 6 ಕಿ.ಮೀ ದೂರದಲ್ಲಿದೆ. ಟಿಬಿ ಅಣೆಕಟ್ಟು ತಲುಪಲು ಹೊಸಪೇಟೆಯಿಂದ ಆಟೋ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದಾಗಿದೆ. 

ವಸತಿ: ಕೆಎಸ್‌ಟಿಡಿಸಿ ಟಿಬಿ ಅಣೆಕಟ್ಟಿನಲ್ಲಿ ಹೋಟೆಲ್ ಮಯೂರ ವಿಜಯನಗರವನ್ನು ನಡೆಸುತ್ತಿದೆ. ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಹೊಸಪೇಟೆ ನಗರದಲ್ಲಿ ಲಭ್ಯವಿದೆ.

     

    Tour Location

     

    Leave a Reply

    Accommodation
    Meals
    Overall
    Transport
    Value for Money