GO UP

ಝರಿ ಜಲಪಾತ

separator
Scroll Down

ಝರಿ ಜಲಪಾತವು ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಜನಪ್ರಿಯ ಜಲಪಾತಗಳಲ್ಲೊಂದಾಗಿದೆ. ಮುಳ್ಳಯನಗಿರಿ ಮತ್ತು ಬಾಬಾ ಬುಡನ್ ಗಿರಿಗೆ ಭೇಟಿ ಕೊಡುವ ಪ್ರವಾಸಿಗರು  ಜೊತೆಗೆ ಝರಿ ಜಲಪಾತವನ್ನು ಕೂಡ ನೋಡಲಿಚ್ಚಿಸುತ್ತಾರೆ. ದಟ್ಟ ಪರ್ವತಗಳ ಮಧ್ಯ ಉಗಮವಾಗುವ ನದಿ ನೀರು ಕಡಿದಾದ ಬಂಡೆಗಳ ಮೇಲಿನಿಂದ ಹಂತ ಹಂತವಾಗಿ ಧುಮ್ಮಿಕ್ಕುತ್ತಾ ನೋಡುಗರನ್ನು ಪುಳಕಿತಗೊಳಿಸುತ್ತದೆ. 

 ಝರಿ ಜಲಪಾತ ಮುಖ್ಯಾಂಶಗಳು:

 ಝರಿ ಜಲಪಾತವನ್ನು ಮಜ್ಜಿಗೆ ಜಲಪಾತ ಎಂದೂ ಕರೆಯುತ್ತಾರೆ

ಪ್ರಶಾಂತ ಸ್ಥಳ: ಝರಿ ಜಲಪಾತ ದಟ್ಟ ಕಾನನ ಮತ್ತು ಕಾಫಿ ತೋಟಗಳ ಮಧ್ಯದಲ್ಲಿದೆ

ಝರಿ ಜಲಪಾತದ ಬುಡದಲ್ಲಿರುವ ಕೊಳವು ಮುಳುಗೇಳಲು  ಸೂಕ್ತವಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಆಗಸ್ಟ್‌ನಿಂದ ಜನವರಿವರೆಗಿನ ಮಳೆಗಾಲದ ನಂತರ ಝರಿ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯ.

ತಲುಪುವುದು ಹೇಗೆ: ಝರಿ ಜಲಪಾತ ಬೆಂಗಳೂರಿನಿಂದ 267 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 24 ಕಿ.ಮೀ ದೂರದಲ್ಲಿದೆ. ಕಡೂರು ಜಂಕ್ಷನ್ ಹತ್ತಿರದ ರೈಲು ನಿಲ್ದಾಣ (57 ಕಿ.ಮೀ) ಮತ್ತು ಮಂಗಳೂರು ಹತ್ತಿರದ ವಿಮಾನ ನಿಲ್ದಾಣ (180 ಕಿ.ಮೀ). ಝರಿ ಜಲಪಾತವನ್ನು ತಲುಪಲು ಕಡೂರು  ಅಥವಾ ಚಿಕ್ಕಮಗಳೂರಿನಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಝರಿ ಜಲಪಾತದ  ಕೊನೆಯ ಐದು ಕಿ.ಮೀ ದೂರದಲ್ಲಿ ಸ್ಥಳೀಯ ಖಾಸಗಿ ಜೀಪ್‌ಗಳ (ನಾಲ್ಕೂ ಚಕ್ರಗಳಿಗೆ ಚಾಲನೆ ಇರುವ ೪x೪ ಜೀಪುಗಳು) ಮೂಲಕ ಅಥವಾ ಚಾರಣ  ಮಾಡುವ ಮೂಲಕ ಮಾತ್ರ ಪ್ರವೇಶಿಸಬಹುದು.

ವಸತಿ : ಝರಿ ಜಲಪಾತಕ್ಕೆ ಹತ್ತಿರ ಮತ್ತು ದಾರಿಯಲ್ಲಿ ಬಹಳ  ಮನೆ ವಸತಿ (ಹೋಂ-ಸ್ಟೇ)ಗಳು ಲಭ್ಯವಿದೆ.  ಝರಿ ಜಲಪಾತದಿಂದ 20-30 ಕಿ.ಮೀ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಚ್ಚಿನ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಲಭ್ಯವಿದೆ. 

    Tour Location

    Leave a Reply

    Accommodation
    Meals
    Overall
    Transport
    Value for Money