GO UP

ಜಾಮಿಯಾ ಮಸೀದಿ, ಶ್ರೀರಂಗಪಟ್ಟಣ

separator
Scroll Down

ಜಾಮಿಯಾ ಮಸೀದಿ ಶ್ರೀರಂಗಪಟ್ಟಣದ ಪ್ರಮುಖ ಮಸೀದಿಯಾಗಿದ್ದು, 1784 ರಲ್ಲಿ ಮೈಸೂರು ದೊರೆ ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲಿ ಕಟ್ಟಲಾಯಿತು. ಜಾಮಿಯಾ  ಮಸೀದಿಯನ್ನು ಮಸೀದಿ ಇ-ಅಲಾ ಎಂದೂ ಕರೆಯುತ್ತಾರೆ.

ಜಾಮಿಯಾ  ಮಸೀದಿ ಎರಡು ಮಹಡಿಗಳನ್ನು ಹೊಂದಿದ್ದು ಸುಂದರ ವಿನ್ಯಾಸಕ್ಕೆ  ಹೆಸರುವಾಸಿಯಾಗಿದೆ. ಸುಮಾರು 200 ಆಂತರಿಕ ಮೆಟ್ಟಿಲನ್ನು ಹೊಂದಿರುವ ಎರಡು ಭವ್ಯವಾದ ಮಿನಾರ್‌ಗಳು (ಗೋಪುರಗಳು) ಗಮನ ಸೆಳೆಯುತ್ತವೆ. ಗೋಡೆಗಳು ಮತ್ತು ಚಾವಣಿಯನ್ನು ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.

ಜಾಮಿಯಾ ಮಸೀದಿಯಲ್ಲಿ ಬಿಳಿ ಗುಮ್ಮಟ, ತೆರೆದ ಪ್ರಾಂಗಣ ಮತ್ತು ಪ್ರಾರ್ಥನಾ ಮಂದಿರವಿದೆ. ಅಲ್ಲಾಹುವಿನ  99 ವಿವಿಧ ಹೆಸರುಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಒಂದು ಶತಮಾನದ ಹಳೆಯ ದೈತ್ಯ ಗಡಿಯಾರ ಇನ್ನೂ ಸುಸ್ಥಿತಿಯಲ್ಲಿದ್ದು  ಪ್ರಾಚೀನ ಕಾಲದ ತಾಂತ್ರಿಕ ಕೌಶಲ್ಯಕ್ಕೆ  ಸಾಕ್ಷಿಯಾಗಿದೆ.

ಜಾಮಿಯಾ  ಮಸೀದಿ ಕ್ಯಾಂಪಸ್ ಒಳಗೆ ಮದರಸಾ (ಶಾಲೆ) ಸಹ ಕಾರ್ಯನಿರ್ವಹಿಸುತ್ತದೆ. ಶ್ರೀರಂಗಪಟ್ಟಣದಲ್ಲಿರುವಾಗ ಜಾಮಿಯಾ ಮಸೀದಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಸಮಯ: ಜಾಮಿಯಾ ಮಸೀದಿಯನ್ನು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಭೇಟಿ ಮಾಡಬಹುದು.

ಹತ್ತಿರ: ರಂಗನತಿಟ್ಟು ಪಕ್ಷಿಧಾಮ (6 ಕಿ.ಮೀ), ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ (1 ಕಿ.ಮೀ), ರಂಗನಾಥ ದೇವಸ್ಥಾನ (1 ಕಿ.ಮೀ), ನಿಮಿಶಾಂಬಾ ದೇವಸ್ಥಾನ (3.4 ಕಿ.ಮೀ) ಜಾಮಿಯಾ ಮಸೀದಿಯೊಂದಿಗೆ ನೋಡಬಹುದಾದ  ಶ್ರೀರಂಗಪಟ್ಟಣ ಮತ್ತು ಸುತ್ತಮುತ್ತ ಇರುವ ಪ್ರಸಿದ್ಧ ತಾಣಗಳಾಗಿವೆ.

ತಲುಪುವುದು ಹೇಗೆ: ಶ್ರೀರಂಗಪಟ್ಟಣವು ಬೆಂಗಳೂರು ನಗರದಿಂದ 135 ಕಿ.ಮೀ ಮತ್ತು ಮೈಸೂರಿನಿಂದ  (ಹತ್ತಿರದ ವಿಮಾನ ನಿಲ್ದಾಣ) 14 ಕಿ.ಮೀ ದೂರದಲ್ಲಿದೆ. ಶ್ರೀರಂಗಪಟ್ಟಣದಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಬೆಂಗಳೂರು ಮತ್ತು ಮೈಸೂರಿನಿಂದ ಅತ್ಯುತ್ತಮ ಬಸ್ ಸಂಪರ್ಕವಿದೆ.

ವಸತಿ: ಕೆಎಸ್‌ಟಿಡಿಸಿ ಶ್ರೀರಂಗಪಟ್ಟಣದಲ್ಲಿ ಹೋಟೆಲ್ ಮಯೂರ ರಿವರ್ ವ್ಯೂ ನಡೆಸುತ್ತಿದೆ. ಮೈಸೂರು ನಗರದಲ್ಲಿ (ಶ್ರೀರಂಗಪಟ್ಟಣದಿಂದ 14 ಕಿ.ಮೀ) ಎಲ್ಲಾ ರೀತಿಯ ವಸತಿ ಸೌಕರ್ಯಗಳು ಸಿಗುತ್ತವೆ.

    Tour Location

    Leave a Reply

    Accommodation
    Meals
    Overall
    Transport
    Value for Money