ಜಾನಪದ ವಸ್ತು ಸಂಗ್ರಹಾಲಯ: ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯವು ಜಾನಪದ ಕಲೆ, ಕರಕುಶಲ ಕಲೆ, ಸಂಗೀತ, ಸಾಹಿತ್ಯ ಮತ್ತು ನಾಟಕಗಳಿಗೆ ಸಂಬಂಧಿಸಿದ 6500 ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ಜಾನಪದ ವಸ್ತುಸಂಗ್ರಹಾಲಯವನ್ನು 1968ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಕರ್ನಾಟಕದ ಜಾನಪದ ವೈವಿಧ್ಯ ಮತ್ತು ಪರಂಪರೆಯ ಆಳ, ವಿಸ್ತಾರದ ಬಗ್ಗೆ ವಿವರವಾಗಿ ತಿಳಿಸಿಕೊಡುವ ವಿನೂತನ ಸಂಗ್ರಹಾಲಯವಾಗಿದೆ.
ಜಾನಪದ ವಸ್ತು ಸಂಗ್ರಹಾಲಯದಲ್ಲಿನ ಪ್ರಮುಖ ಆಕರ್ಷಣೆಗಳು
- ಮುಖವಾಡಗಳು ಮತ್ತು ಬೊಂಬೆಗಳು
- ಕಿನ್ನರಿ, ಚೌಡಿಕೆ, ತಂಬೂರಿ ಮುಂತಾದ ಜಾನಪದ ಸಂಗೀತ ವಾದ್ಯಗಳು
- ಕಥಕಲಿ ನೃತ್ಯ ವೇಷಭೂಷಣಗಳು
- ರಾಜರು, ರಾಣಿಯರು, ಸೈನಿಕರ, ದೇವರು ಮತ್ತು ದೇವತೆಯ ಸಣ್ಣ ಗಾತ್ರದ ಪುತ್ಥಳಿಗಳು.
- ಯಕ್ಷಗಾನ ವೇಷಭೂಷಣಗಳು ಮತ್ತು ಪರಿಕರಗಳು
- ಆಂಧ್ರಪ್ರದೇಶದ ಜಾನಪದ ಕಲಾವಿದರ ವಸ್ತುಗಳು ಮತ್ತು ಸೋಲಿಗ ಸಮುದಾಯದ ವಸ್ತುಗಳು
- ರೈತರು, ಕಮ್ಮಾರರು, ಅಕ್ಕಸಾಲಿಗರು , ನೇಕಾರರು ಬಳಸುವ ಉಪಕರಣಗಳು
- ಸಾಂಪ್ರದಾಯಿಕ ಮನೆಯ ಉಪಕರಣಗಳು, ಪಾತ್ರೆಗಳು
ಸಮಯ: ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ.
ಹತ್ತಿರ: ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಜಾನಪದ ವಸ್ತು ಸಂಗ್ರಹಾಲಯದಿಂದ 6 ಕಿ.ಮೀ ದೂರದಲ್ಲಿದೆ. .
ಜಾನಪದ ವಸ್ತು ಸಂಗ್ರಹಾಲಯವನ್ನು ತಲುಪುವುದು ಹೇಗೆ?
ಜಾನಪದ ವಸ್ತು ಸಂಗ್ರಹಾಲಯ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಕ್ಯಾಂಪಸ್ ಒಳಗೆ ಮೈಸೂರು ನಗರ ಕೇಂದ್ರದಿಂದ 6 ಕಿ.ಮೀ ದೂರದಲ್ಲಿದೆ. ಮೈಸೂರು ಬೆಂಗಳೂರಿನಿಂದ (150 ಕಿ.ಮೀ ದೂರದಲ್ಲಿ) ವಾಯು, ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ.
ವಸತಿ: ಮೈಸೂರು ನಗರವು ಎಲ್ಲಾ ರೀತಿಯ ವಸತಿ ಗೃಹ ಮತ್ತು ರೆಸಾರ್ಟ್‌ಗಳನ್ನು ಹೊಂದಿದೆ.