GO UP

ಜಯಚಾಮರಾಜೇಂದ್ರ ಕಲಾ ಗ್ಯಾಲರಿ

separator
Scroll Down

ಮೈಸೂರಿನ ಐತಿಹಾಸಿಕ ಅರಮನೆ ಕಟ್ಟಡಗಳಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ಈಗ ಕಲಾ ಗ್ಯಾಲರಿಯನ್ನಾಗಿ ಪರಿವರ್ತಿಸಲಾಗಿದೆ. ಕಲಾಕೃತಿಗಳ ಸಂಖ್ಯೆ ಮತ್ತು ವೈಶಿಷ್ಟತೆಯಿಂದಾಗಿ ಜಯಚಾಮರಾಜೇಂದ್ರ ಕಲಾ ಗ್ಯಾಲರಿ ಹೆಸರುವಾಸಿಯಾಗಿದೆ. ಜಗನ್ಮೋಹನ ಅರಮನೆ ಹಿಂದೆ ರಾಜಮನೆತನದ ನಿವಾಸವಾಗಿತ್ತು, ನಂತರ ಇದನ್ನು ಕಲಾ ಗ್ಯಾಲರಿ ಮತ್ತು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು.1915 ರಲ್ಲಿ ಅಂದಿನ ಮೈಸೂರು ರಾಜರಾಗಿದ್ದ- ನಾಲ್ವಡಿ ಕೃಷ್ಣರಾಜ ಓಡೆಯರ್ ಅವರು ಸಾರ್ವಜನಿಕರಿಗೆ ಸಮರ್ಪಿಸಿದರು. 

ಪ್ರಮುಖ ಆಕರ್ಷಣೆಗಳು

ಜಯಚಾಮರಾಜೇಂದ್ರ ಕಲಾ ಗ್ಯಾಲರಿಯಲ್ಲಿ ದಕ್ಷಿಣ ಭಾರತದ ಪ್ರಮುಖ ಕಲಾಕೃತಿಗಳ ದೊಡ್ಡ ಸಂಗ್ರಹವಿದೆ. ಕಲಾಕೃತಿಗಳ ಸಂಖ್ಯೆ 2000ಕ್ಕೂ ಹೆಚ್ಚಿವೆ.

  • ರಾಜಾ ರವಿವರ್ಮ ಅವರ ವರ್ಣಚಿತ್ರಗಳು ಪ್ರಮುಖ ಹಿಂದೂ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದ ದೃಶ್ಯಗಳನ್ನು ಚಿತ್ರಿಸುತ್ತವೆ, ಇದನ್ನು ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ದಾನ ಮಾಡಿದ್ದಾರೆ
  • ಕರ್ನಲ್ ಸ್ಕಾಟ್‌ರಿಂದ ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವಿನ ಯುದ್ಧವನ್ನು ಚಿತ್ರಿಸುವ ವರ್ಣಚಿತ್ರಗಳು
  • ಅಕ್ಕಿಯ ಕಾಳಿನ ಮೇಲೆ ಮಾಡಿದ ವರ್ಣಚಿತ್ರಗಳು, ಭೂತಕನ್ನಡಿ ಬಳಸಿ ನೋಡಬಹುದಾಗಿದೆ
  • ಹಾಲ್ಡೆಂಕರ್ ಚಿತ್ರಿಸಿದ ದೀಪ ಹಿಡಿದ ಮಹಿಳೆ (ಲೇಡಿ ವಿಥ್ ದ ಲ್ಯಾಂಪ್)
  • ರವೀಂದ್ರನಾಥ ಟ್ಯಾಗೋರ್ ಅವರ ವರ್ಣಚಿತ್ರಗಳು
  • ಸಂಗೀತ ವಾದ್ಯಗಳು 
  • ಪ್ರಾಚೀನ ಕಾಲದ  ಶಿಲ್ಪಗಳು, ಹಿತ್ತಾಳೆ ವಸ್ತುಗಳು, ನಾಣ್ಯಗಳು ಮತ್ತು ನೋಟುಗಳು

ಸಮಯ: ಜಯಚಾಮರಾಜೇಂದ್ರ ಕಲಾ ಗ್ಯಾಲರಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.30 ರ ನಡುವೆ ತೆರೆದಿರುತ್ತದೆ.

ತಲುಪುವುದು ಹೇಗೆ: ಮೈಸೂರು ಬೆಂಗಳೂರಿನಿಂದ (150 ಕಿ.ಮೀ ದೂರದಲ್ಲಿ) ವಾಯು, ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಜಗನ್ಮೋಹನ ಅರಮನೆ ಮತ್ತು ಆರ್ಟ್ ಗ್ಯಾಲರಿ ಮೈಸೂರು ನಗರ ಕೇಂದ್ರದಿಂದ 2 ಕಿ.ಮೀ ದೂರದಲ್ಲಿದೆ.

ವಸತಿ: ಮೈಸೂರು ನಗರವು ಎಲ್ಲಾ ರೀತಿಯ ವಸತಿ ಗೃಹ ಮತ್ತು ರೆಸಾರ್ಟ್‌ಗಳನ್ನು ಹೊಂದಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money