GO UP

ಗೋಮಟಗಿರಿ

separator
Scroll Down

ಮೈಸೂರು ಜಿಲ್ಲೆಯ ಬೆಟ್ಟದೂರಿನಲ್ಲಿರುವ ಗೋಮಟಗಿರಿ ಅದರ ಸಣ್ಣ ಗೋಮಟೇಶ್ವರ (ಬಾಹುಬಲಿ) ಪ್ರತಿಮೆಗೆ ಜನಪ್ರಿಯವಾಗಿದೆ. ಗೋಮಟಗಿರಿಯಲ್ಲಿರುವ 6 ಮೀಟರ್ ಎತ್ತರದ ಏಕಶಿಲೆಯ ಪ್ರತಿಮೆಯು 700 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಜಿಲ್ಲೆಯ ಪ್ರಮುಖ ಜೈನ ಪೂಜಾ ಕೇಂದ್ರವಾಗಿದೆ.

ಗೋಮಟಗಿರಿ ಅಥವಾ ಗೋಮಟೇಶ್ವರ ಪ್ರತಿಮೆ ಇರುವ ಬೆಟ್ಟವು ನೆಲಮಟ್ಟದಿಂದ ಸುಮಾರು 50 ಮೀಟರ್ ಎತ್ತರದಲ್ಲಿದೆ. ವಿಜಯನಗರ ಆಳ್ವಿಕೆಯಲ್ಲಿ ಒಂದೇ ಒಂದು ಅಮೃತ ಶಿಲೆ ಕಲ್ಲನ್ನು ಬಳಸಿ ಕೆತ್ತಿದ ಪ್ರತಿಮೆ ಶ್ರವಣಬೆಳಗೋಳದಲ್ಲಿರುವ ಗೋಮಟೇಶ್ವರನಿಗೆ ವಿನ್ಯಾಸದಲ್ಲಿ ಹೋಲುತ್ತದೆ ಆದರೆ ಗಾತ್ರದಲ್ಲಿ ಚಿಕ್ಕದಾಗಿದೆ (6 ಮೀಟರ್ ಮತ್ತು 17 ಮೀಟರ್)

ಗೋಮಟಗಿರಿಯ ಪ್ರಮುಖ ಮುಖ್ಯಾಂಶಗಳು:

  • ವಾರ್ಷಿಕ ಆಚರಣೆಗಳು: ವರ್ಷಕ್ಕೊಮ್ಮೆ ಗೋಮಟಗಿರಿ ಪ್ರತಿಮೆಯನ್ನು ವಿವಿಧ ವಸ್ತುಗಳನ್ನು ಬಳಸಿ  ‘ಅಭಿಷೇಕ’ ಮಾಡಲಾಗುತ್ತದೆ. ಈ ಮಹಾ ಮಸ್ತಕಾಭಿಷೇಕ ಆಚರಣೆಯು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ. 
  • ನೋಟ: ಮೈಸೂರು ನಗರದ ಸುತ್ತಮುತ್ತಲಿನ ಭಾಗಗಳ ವಿಹಂಗಮ ನೋಟವನ್ನು ಗೋಮಟಗಿರಿ ಬೆಟ್ಟದ ಮೇಲಿನಿಂದ ನೋಡಬಹುದಾಗಿದೆ . ಕೆಆರ್‌ಎಸ್ ಅನ್ನು ದೂರದಲ್ಲಿ ಕಾಣಬಹುದು

ಹತ್ತಿರ: ಕೆಆರ್‌ಎಸ್ ಅಣೆಕಟ್ಟು (20 ಕಿ.ಮೀ), ಬಲಮುರಿ ಜಲಪಾತ (18 ಕಿ.ಮೀ), ಗೋಮಟಗಿರಿ ಜೊತೆಗೆ ಭೇಟಿ ನೀಡಬಹುದಾದ ಇತರ ಕೆಲವು ಸ್ಥಳಗಳು.

ತಲುಪುವುದು ಹೇಗೆ: ಗೋಮಟಗಿರಿ ಬೆಂಗಳೂರಿನಿಂದ 153 ಕಿ.ಮೀ ಮತ್ತು ಮೈಸೂರಿನಿಂದ 22 ಕಿ.ಮೀ. ದೂರದಲ್ಲಿದೆ. ಮೈಸೂರು ವಿಮಾನ ನಿಲ್ದಾಣವು 32 ಕಿ.ಮೀ ದೂರದಲ್ಲಿದೆ ಮತ್ತು ಮೈಸೂರು ನಗರವು ಹತ್ತಿರದ ರೈಲು ನಿಲ್ದಾಣವಾಗಿದೆ. ಮೈಸೂರಿನಿಂದ ಗೋಮಟಗಿರಿ ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ.

ವಸತಿ: ಮೈಸೂರು ನಗರ (ಗೋಮಟಗಿರಿಯಿಂದ 22 ಕಿ.ಮೀ) ಬಜೆಟ್ ಹೋಟೆಲ್ ಮತ್ತು ಐಷಾರಾಮಿ ರೆಸಾರ್ಟ್‌ಗಳನ್ನು ಹೊಂದಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money