GO UP

ಗೊಡಚಿನಮಲ್ಕಿ ಜಲಪಾತ

separator
Scroll Down

ಬೆಳಗಾವಿ ಜಿಲ್ಲೆಯ ಗೋಕಾಕ್ ಬಳಿಯ ಗೊಡಚಿನಮಲ್ಕಿ ಗ್ರಾಮದಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಕಣಿವೆಯೊಂದರಲ್ಲಿ  ಮಾರ್ಕಂಡೇಯ ನದಿ ಪುಟಿದೇಳುವಾಗ ಗೊಡಚಿನಮಲ್ಕಿ ಜಲಪಾತ ರೂಪುಗೊಳ್ಳುತ್ತದೆ.

ಗೊಡಚಿನಮಲ್ಕಿ ಜಲಪಾತದಲ್ಲಿ ಎರಡು ಹಂತಗಳಿವೆ. ಮೊದಲನೆಯದು 25 ಮೀಟರ್ ಎತ್ತರ ಮತ್ತು ಎರಡನೆಯದು 18 ಮೀಟರ್ ಎತ್ತರವಿದೆ. ಗೊಡಚಿನಮಲ್ಕಿ ಜಲಪಾತವನ್ನು ಮಾರ್ಕಂಡೇಯ ಜಲಪಾತ ಎಂದೂ ಕರೆಯುತ್ತಾರೆ.

ಗೊಡಚಿನಮಲ್ಕಿ ಜಲಪಾತದ ಮುಖ್ಯಾಂಶಗಳು:

  • ವಿಹಂಗಮ ನೋಟ: ದೊಡ್ಡ ತೆರೆದ ಕಣಿವೆಯ  ನಡುವೆ  ಭೋರ್ಗರಿಸುವ ಜಲಪಾತದ ದೃಶ್ಯ ವೈಭವ ವರ್ಣಿಸಲಸದಳ.  
  • ಚಾರಣದ ಅವಕಾಶ: ರಸ್ತೆಯ ಮೂಲಕ ಪ್ರವೇಶಿಸಬಹುದಾದರೂ, ಗೊಡಚಿನಮಲ್ಕಿ ಹಳ್ಳಿಯಿಂದ ಜಲಪಾತದವರೆಗೆ ಕೆಲವು ಕಿಲೋಮೀಟರ್ ಚಾರಣ ಕೈಗೊಳ್ಳುವುದು ಜನಪ್ರಿಯ ಚಟುವಟಿಕೆಯಾಗಿದೆ.

ಭೇಟಿ ನೀಡಲು ಉತ್ತಮ ಋತುಮಾನ: ಜುಲೈ ನಿಂದ ಅಕ್ಟೋಬರ್ ಗೊಡಚಿನಮಲ್ಕಿ ಜಲಪಾತವನ್ನು ಭೇಟಿ ಮಾಡಲು ಉತ್ತಮ ಋತುವಾಗಿದೆ ಏಕೆಂದರೆ ನೀರಿನ ಮಟ್ಟ ಹೆಚ್ಚಿರುತ್ತದೆ ಮತ್ತು ದೃಶ್ಯ ವೈಭವ ಗರಿಷ್ಟ ಮಟ್ಟದಲ್ಲಿರುತ್ತದೆ. 

ಹತ್ತಿರದಲ್ಲಿ ಇನ್ನೇನಿದೆ?  ಗೋಕಾಕ ಜಲಪಾತ (14 ಕಿ.ಮೀ) ಮತ್ತು ಹಿಡ್ಕಲ್ ಜಲಾಶಯ (22 ಕಿ.ಮೀ) ಗೊಡಚಿನಮಲ್ಕಿ ಜಲಪಾತದೊಂದಿಗೆ ಭೇಟಿಕೊಡಬಹುದಾದ ಹತ್ತಿರದ ಪ್ರವಾಸಿ ಸ್ಥಳಗಳಾಗಿವೆ. 

ತಲುಪುವುದು ಹೇಗೆ: ಗೊಡಚಿನಮಲ್ಕಿ ಜಲಪಾತ ಬೆಂಗಳೂರಿನಿಂದ 538 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 51 ಕಿ.ಮೀ. ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪಚಾಪುರ (9 ಕಿ.ಮೀ ದೂರದಲ್ಲಿ) ಹತ್ತಿರದ ರೈಲು ನಿಲ್ದಾಣವಾಗಿದೆ. ಗೊಡಚಿನಮಲ್ಕಿ ಜಲಪಾತವನ್ನು ತಲುಪಲು ಬೆಳಗಾವಿ ಅಥವಾ ಪಚಾಪುರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದಾಗಿದೆ. 

ವಸತಿ: ಗೋಕಾಕ್ (18 ಕಿ.ಮೀ) ನಲ್ಲಿ ಹೋಟೆಲ್‌ಗಳು ಮತ್ತು ಹೋಂ-ಸ್ಟೇಗಳು ಲಭ್ಯವಿದೆ. ಬೆಳಗಾವಿ ನಗರ (51 ಕಿ.ಮೀ) ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money