GO UP

ಗಜೇಂದ್ರಗಡ ಕೋಟೆ

separator
Scroll Down

ಗಜೇಂದ್ರಗಡ ಕೋಟೆ ಪ್ರಸಿದ್ಧ ಮರಾಠಾ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜ್ ನಿರ್ಮಿಸಿದ ಐತಿಹಾಸಿಕ ಕೋಟೆ. ಮೇಲಿನಿಂದ ನೋಡಿದಾಗ ಆನೆಯ ಆಕಾರವನ್ನು ಹೋಲುತ್ತದೆ ಎಂಬ ಕಾರಣಕ್ಕೆ ಗಜೇಂದ್ರಗಡ ಎಂಬ ಹೆಸರು ಬಂದಿದೆ. 

ಗಜೇಂದ್ರಗಡ ಒಪ್ಪಂದ: ಮೈಸೂರು ದೊರೆ ಟಿಪ್ಪು ಸುಲ್ತಾನ್ 1876 ರಲ್ಲಿ ಗಜೇಂದ್ರಗಡನ್ನು ಮರಾಠರು ಮತ್ತು ನಿಜಾರಿಗೆ ಕಳೆದುಕೊಂಡನು. ಗಜೇಂದ್ರಗಡ ಒಪ್ಪಂದದ ಭಾಗವಾಗಿ ಬಾದಾಮಿ ಮತ್ತು ಗಜೇಂದ್ರಗಡವನ್ನು ಮರಾಠರಿಗೆ ಒಪ್ಪಿಸಲಾಯಿತು.

ಗಜೇಂದ್ರಗಡ ಕೋಟೆಯ ಮುಖ್ಯಾಂಶಗಳು

  • ಐದು ತಲೆಯ ಹಾವು ಮತ್ತು ಎರಡು ಸಿಂಹಗಳು ಪರಸ್ಪರ ಎದುರಾಗಿರುವ ಕಲಾಕೃತಿಗಳೊಂದಿಗೆ ವೈಭವವಾದ ಕೋಟೆ ಪ್ರವೇಶದ್ವಾರ 
  • ಭಗವಾನ್ ಹನುಮಾನ್ ವಿಗ್ರಹ
  • ಹಿಂದಿ ಮತ್ತು ಮರಾಠಿ ಶಾಸನಗಳು
  • ನೀರಿನ ತೊಟ್ಟಿ 
  • ಆನೆಯ ಮುಖದ ಕೆತ್ತನೆಗಳು
  • ವಿಹಂಗಮ ನೋಟ: ಕೋಟೆಯ ಮೇಲಿನಿಂದ ಕೆಳಗಿನ ಹಳ್ಳಿಯ ನೋಟ ಮತ್ತು ದೂರದಲ್ಲಿರುವ ವಿಂಡ್‌ಮಿಲ್‌ಗಳು ನಯನ ಮನೋಹರವಾಗಿ ಕಾಣಿಸುತ್ತವೆ. 
  • ಪೂಜಾ ಸ್ಥಳಗಳು- ಮಸೀದಿ ಮತ್ತು ಕಾಲಕಾಲೇಶ್ವರ ದೇವಸ್ಥಾನ
  • ಬಂಕರ್‌ಗಳು ಮತ್ತು ಗೋದಾಮುಗಳು 
  • ಅವಶೇಷಗಳು

ಹತ್ತಿರದಲ್ಲಿ: ಸೂಡಿ (11 ಕಿ.ಮೀ), ಬಾದಾಮಿ (44 ಕಿ.ಮೀ), ಐಹೊಳೆ ಮತ್ತು ಪಟ್ಟದಕಲ್ಲು (40 ಕಿ.ಮೀ), ಆಲಮಟ್ಟಿ ಅಣೆಕಟ್ಟು (82 ಕಿ.ಮೀ), ಟಿಬಿ ಅಣೆಕಟ್ಟು (86 ಕಿ.ಮೀ), ಆನೆಗುಂಡಿ (90 ಕಿ.ಮೀ) ಇತ್ಯಾದಿ ಗಜೇಂದ್ರಗಡ ಕೋಟೆಯೊಂದಿಗೆ ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳು.

ತಲುಪುವುದು ಹೇಗೆ?

ಗಜೇಂದ್ರಗಡ ಬೆಂಗಳೂರಿನಿಂದ 413 ಕಿ.ಮೀ ಮತ್ತು ಹತ್ತಿರದ ವಿಮಾನ ನಿಲ್ದಾಣವಾದ ಹುಬ್ಬಳ್ಳಿಯಿಂದ 166 ಕಿ.ಮೀ ದೂರದಲ್ಲಿದೆ. ಗದಗ ಜಂಕ್ಷನ್ (54 ಕಿ.ಮೀ) ಹತ್ತಿರದ ರೈಲು ನಿಲ್ದಾಣವಾಗಿದೆ. ಗದಗ ತಲುಪಲು ಬಸ್ಸುಗಳು ಮತ್ತು ರೈಲುಗಳು ಲಭ್ಯವಿದೆ. ಗಜೇಂದ್ರಗಡ ಕೋಟೆ ತಲುಪಲು ಗದಗ ನಗರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ : ಗಜೇಂದ್ರಗಡ ನಗರದಲ್ಲಿ ಸೀಮಿತ ಸಂಖ್ಯೆಯ ಹೋಟೆಲ್‌ಗಳಿವೆ. 54 ಕಿ.ಮೀ ದೂರದಲ್ಲಿರುವ  ಗದಗ ನಗರದಲ್ಲಿ ಹೆಚ್ಚಿನ ಆಯ್ಕೆಗಳಿವೆ.

    Tour Location

    Leave a Reply

    Accommodation
    Meals
    Overall
    Transport
    Value for Money