GO UP

ಕೊಡಚಾದ್ರಿ ಬೆಟ್ಟಗಳು

separator
Scroll Down

ಕೊಡಚಾದ್ರಿ ಬೆಟ್ಟಗಳು: ಕೊಡಚಾದ್ರಿ ಪಶ್ಚಿಮ ಘಟ್ಟದ ​​ಚಾರಣ ಸ್ನೇಹಿ ಬೆಟ್ಟವಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಕೊಡಚಾದ್ರಿ ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲೊಂದಾಗಿದೆ. ಸಂಸ್ಕ್ರತದ “ಕುಟಜಾ” ಎಂಬ ಪದದಿಂದ ಕೊಡಚಾದ್ರಿ ಹೆಸರು ಬಂದಿದೆ. ಕುಟಜಾ ಎಂದರೆ ಮಲ್ಲಿಗೆಯ ಬೆಟ್ಟ ಎಂದರ್ಥ. 

ಕೊಡಚಾದ್ರಿ ಬೆಟ್ಟದ  ಆಕರ್ಷಣೆಗಳು 

  • ನೋಟ: ಕೊಡಚಾದ್ರಿ ಪಶ್ಚಿಮ ಘಟ್ಟದ ವಿಹಂಗಮ ನೋಟಗಳನ್ನು ನೀಡುತ್ತದೆ.  ಮೋಡಗಳಿಲ್ಲದ ದಿನದಲ್ಲಿ ದೂರದ ಅರಬ್ಬೀ ಸಮುದ್ರವನ್ನು  ಮತ್ತು ಕೊಲ್ಲೂರು ಪಟ್ಟಣವನ್ನು ನೋಡಬಹುದಾಗಿದೆ. 
  • ಗಣೇಶ ಗುಹೆ: ಸಂತ ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ್ದಾರೆಂದು ಹೇಳಲಾಗುವ ಕೊಡಚಾದ್ರಿ ಬೆಟ್ಟದ ಮೇಲಿರುವ ಗಣೇಶ ಗುಹೆ ಮತ್ತು ಸರ್ವಜ್ಞ ಪೀಠ ನೋಡಲೇಬೇಕಾದ ತಾಣಗಳಾಗಿವೆ. 
  • ಹಿಡ್ಲುಮನೆ ಜಲಪಾತ: ಚಾರಣ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ. ದೂರ ಇರುವ ಹಿಡ್ಲುಮನೆ ಜಲಪಾತ ನೋಡಬಹುದಾಗಿದೆ. 
  • ಸೂರ್ಯಾಸ್ತ: ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದು ಒಂದು ಮರೆಯಲಾಗದ ಅನುಭವವಾಗಲಿದೆ. 
  • ಚಾರಣ: ಕೊಡಚಾದ್ರಿ ಬೆಟ್ಟದ ತುದಿಯವರೆಗೆ ಚಾರಣ ಮಾಡಲು ಎಲ್ಲೆಡೆಯಿಂದ ಆಸಕ್ತರು ಇಲ್ಲಿಗೆ ಬರುತ್ತಾರೆ. 

ಕೊಡಚಾದ್ರಿ ತಲುಪುವುದು ಹೇಗೆ?

ಕೊಡಚಾದ್ರಿ ತಲುಪಲು ಕೊಲ್ಲೂರು ಪಟ್ಟಣಕ್ಕೆ ಬರಬೇಕು. ಕೊಲ್ಲೂರು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 130 ಕಿ.ಮೀ ಮತ್ತು ಬೆಂಗಳೂರಿನಿಂದ 430 ಕಿ.ಮೀ ದೂರದಲ್ಲಿದೆ. ಮಂಗಳೂರು ಮತ್ತು ಕೊಲ್ಲೂರು ನಡುವೆ ದಿನವಿಡೀ ಹಲವಾರು ಖಾಸಗಿ ಬಸ್ಸುಗಳು ಚಲಿಸುತ್ತವೆ. ಬೈಂದೂರಿನ ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣ ಕೊಲ್ಲೂರಿನಿಂದ 20 ಕಿ.ಮೀ ದೂರದಲ್ಲಿದೆ.

ಕೊಲ್ಲೂರಿನಿಂದ ಪ್ರವಾಸಿಗರು ಕೊಡಾಚಾದ್ರಿ ತಲುಪಲು 4×4 ಜೀಪ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಬೆಟ್ಟದ ರಸ್ತೆಯ ಕೊನೆಯ ಕೆಲವು ಕಿ.ಮೀ ತುಂಬಾ ಕಡಿದಾಗಿದ್ದು ಸಾಮಾನ್ಯ ವಾಹನಗಳಿಗೆ ಸೂಕ್ತವಲ್ಲ. ತಮ್ಮ 4×4 ಜೀಪ್‌ಗಳಲ್ಲಿ ಅನುಭವಿ ಸ್ಥಳೀಯ ಚಾಲಕರು ಮಾತ್ರ ಪ್ರವಾಸಿಗರನ್ನು ಬೆಟ್ಟದ ಮೇಲೆ ನಿಗದಿತ ಶುಲ್ಕ ಪಡೆದು ಕರೆದೊಯ್ಯುತ್ತಾರೆ. ಅನುಭವಿ ಬೈಕು ಸವಾರರು ಸಹ ಬೆಟ್ಟದ ತುದಿಯವರೆಗೆ ಸವಾರಿ ಮಾಡುತ್ತಾರೆ. ಸ್ವಂತ ವಾಹನಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಹತ್ತಿರದ ಪಟ್ಟಣವಾದ ನಿಟ್ಟೂರು ತಲುಪಿ ನಿಟ್ಟೂರಿನಿಂದ ಚಾರಣ ಅಥವಾ ಬಾಡಿಗೆ ಜೀಪಿನ ಮೂಲಕ ಕೊಡಚಾದ್ರಿ ತಲುಪಲು ಸಾಧ್ಯವಿದೆ. ಸುರಕ್ಷತಾ ಕಾರಣಗಳಿಗಾಗಿ ಸ್ಥಳೀಯ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಲು ಮತ್ತು ಗುಂಪುಗಳಲ್ಲಿ ಚಾರಣ ಮಾಡಲು ಶಿಫಾರಸು ಮಾಡಲಾಗಿದೆ. ಮಳೆಗಾಲದಲ್ಲಿ ಇಂಬಳಗಳು ಮತ್ತು ಜಾರುವ ಹಾದಿಯ ಬಗ್ಗೆ ಎಚ್ಚರವಹಿಸುವುದು ಉತ್ತಮವಾಗಿದೆ. 

ಕೊಡಚಾದ್ರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರ (ಅಕ್ಟೋಬರ್ ನಿಂದ ಮೇ ವರೆಗೆ) ಸಮಯ. 

ಹತ್ತಿರದಲ್ಲಿ: ನಗರ ಕೋಟೆ (30 ಕಿ.ಮೀ), ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (37 ಕಿ.ಮೀ), ಸಿಗಂದೂರು ದೇವಸ್ಥಾನ (51 ಕಿ.ಮೀ) ಮತ್ತು ಜೋಗ ಜಲಪಾತ (100 ಕಿ.ಮೀ) ಹತ್ತಿರದ ಆಕರ್ಷಣೆಗಳಾಗಿದ್ದು ಕೊಡಚಾದ್ರಿಯೊಂದಿಗೆ ಭೇಟಿ ನೀಡಬಹುದು.

ವಸತಿ:

ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ ಕೊಲ್ಲೂರು (ಕೊಡಾಚಾದ್ರಿಯಿಂದ 37 ಕಿ.ಮೀ) ಹತ್ತಿರ ಆನೆಜರಿ ಚಿಟ್ಟೆ ಶಿಬಿರವನ್ನು ನಡೆಸುತ್ತದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೊಡಚಾದ್ರಿ ಸಮೀಪ ಪ್ಯಾರಡೈಸ್ ವೈಲ್ಡ್ ಹಿಲ್ ರೆಸಾರ್ಟ್ ನಡೆಸುತ್ತಿದೆ. ಹತ್ತಿರದ ಪಟ್ಟಣವಾದ ಕೊಲ್ಲೂರಿನಲ್ಲಿ ಬಜೆಟ್ ಹೋಟೆಲ್‌ಗಳು ಮತ್ತು ಹೋಂ ಸ್ಟೇಗಳು ಲಭ್ಯವಿದೆ.

ತ್ವರಿತ ಲಿಂಕ್‌ಗಳು

Marvanthe Beach
Nagara Fort

    Tour Location

    Leave a Reply

    Accommodation
    Meals
    Overall
    Transport
    Value for Money