GO UP

ಕಾಪು ಕಡಲತೀರ ಮತ್ತು ದೀಪ ಸ್ಥ೦ಭ

separator
Scroll Down

ಕಾಪು ಕಡಲತೀರ ಮತ್ತು ದೀಪ ಸ್ಥ೦ಭ: ಕಾಪು ಕರಾವಳಿ ಕರ್ನಾಟಕದ ಕಡಲತೀರದ ಹಳ್ಳಿಯಾಗಿದ್ದು, ಶ್ರೀ ಕೃಷ್ಣನ ಊರಾದ ಉಡುಪಿಯಿಂದ 15 ಕಿ.ಮೀ ದೂರದಲ್ಲಿದೆ, ಕಡಲತೀರದ ಬಳಿ ಇರುವ ದೀಪ ಸ್ಥ೦ಭ‌ ಬಹಳ ಜನಪ್ರಿಯವಾಗಿದೆ.

ಕಡಲತೀರ: ಹತ್ತಿರದ ಇತರ ಕಡಲತೀರಗಳಾದ ಮಲ್ಪೆ ಬೀಚ್ ಅಥವಾ ಸುರತ್ಕಲ್ ಬೀಚ್‌ಗಳಿಗೆ ಹೋಲಿಸಿದರೆ ಕಡಿಮೆ ಜನಸಂದಣಿಯನ್ನು ಹೊಂದಿರುವುದರಿಂದ ಕಾಪು ಕಡಲತೀರ ಜನಪ್ರಿಯವಾಗಿದೆ. ದೀಪ ಸ್ಥ೦ಭದ  ಬಳಿ ಇರುವ ಬಂಡೆಗಳು ಪ್ರಮುಖ ಆಕರ್ಷಣೆಯಾಗಿವೆ. ಕಡಲತೀರದ ಹತ್ತಿರ ವಾಹನ ನಿಲ್ದಾಣ, ತೆಂಗಿನ ತೋಟ ಮತ್ತು ಲಘು ಉಪಾಹಾರ ಗೃಹಗಳಿವೆ. 

ದೀಪ ಸ್ಥ೦ಭ: ಕಾಪು ದೀಪ ಸ್ಥ೦ಭವನ್ನು 1901 ರಲ್ಲಿ ನಿರ್ಮಿಸಲಾಯಿತು. ಕಾಪು ದೀಪ ಸ್ಥ೦ಭ 27 ಮೀಟರ್ ಎತ್ತರವಿದೆ. ಬಂಡೆಯ ಮೇಲೆ ನಿರ್ಮಿಸಲಾಗಿರುವ ಈ ದೀಪ ಸ್ಥ೦ಭ ಶತಮಾನ ಕಳೆದರೂ ಸುಭದ್ರವಾಗಿ ನಿಂತಿದೆ. ಹಿಂದಿನ ಕಾಲದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲವಾದ್ದರಿಂದ ತೀರದಲ್ಲಿರುವ  ದೀಪ ಸ್ಥ೦ಭಗಳು ಹಡಗಿನ ನಾವಿಕರಿಗೆ ದಾರಿ ದೀಪವಾಗಿದ್ದವು.

ಕಾಪು ದೀಪ ಸ್ಥ೦ಭ ಪ್ರತಿದಿನ ಸಂಜೆ 4 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂದರ್ಶಕರು ಮೆಟ್ಟಿಲುಗಳ ಮೇಲೆ ಹೋಗಿ ಕಾಪು ಕಡಲತೀರ ದ ಪಕ್ಷಿನೋಟವನ್ನು ನೋಡಬಹುದಾಗಿದೆ. ಸುರಕ್ಷತಾ ಕಾರಣಗಳಿಗಾಗಿ ಭಾರೀ ಮಳೆಯ ಸಮಯದಲ್ಲಿ ದೀಪಸ್ತಂಭವನ್ನು ಸಾರ್ವಜನಿಕರಿಗೆ ಮುಚ್ಚಬಹುದು.

ಹತ್ತಿರದ ಆಕರ್ಷಣೆಗಳು: ಮಲ್ಪೆ (20 ಕಿ.ಮೀ), ಉಡುಪಿ (15 ಕಿ.ಮೀ), ಮಂಗಳೂರು (45 ಕಿ.ಮೀ), ಸಸಿಹಿತ್ಲು ಬೀಚ್ (30 ಕಿ.ಮೀ) ಕಾಪು  ಜೊತೆಗೆ ಭೇಟಿ ನೀಡಬಹುದಾದ ಕೆಲವು ಆಕರ್ಷಣೆಗಳು.

ತಲುಪುವುದು ಹೇಗೆ? ಕಾಪು ಬೆಂಗಳೂರಿನಿಂದ 400 ಕಿ.ಮೀ ಮತ್ತು ಮಂಗಳೂರಿನಿಂದ  (ಹತ್ತಿರದ ವಿಮಾನ ನಿಲ್ದಾಣ) 45 ಕಿ.ಮೀ ದೂರದಲ್ಲಿದೆ. ಉಡುಪಿ ಹತ್ತಿರದ ರೈಲು ನಿಲ್ದಾಣ (15 ಕಿ.ಮೀ). ಕಾಪು ತಲುಪಲು ಮಂಗಳೂರು ಮತ್ತು ಉಡುಪಿಯಿಂದ ನಿಯಮಿತ ಬಸ್ಸುಗಳು ಲಭ್ಯವಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money