GO UP

ಕಲಬುರಗಿ ಕೋಟೆ

separator
Scroll Down

ಕಲಬುರಗಿ ಕೋಟೆ: ಕಲಬುರಗಿ ಕೋಟೆಯು ಉತ್ತರ ಕರ್ನಾಟಕದ ಗುಲ್ಬರ್ಗಾ ಎಂದೂ ಕರೆಯಲ್ಪತ್ತಿದ್ದ ಕಲಬುರಗಿ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ.

ಕಲಬುರಗಿ ಕೋಟೆಯನ್ನು ಮೂಲತಃ ವಾರಂಗಲ್ ರಾಜ ಗುಲ್ಚಂದ್ ನಿರ್ಮಿಸಿದನು ಮತ್ತು ನಂತರ ಅದನ್ನು ಅಲಾ-ಉದ್-ದಿನ್ ಬಹಮನ್ ‌ಷಾ ಬಲಪಡಿಸಿದನು. ಕಲಬುರಗಿ ಕೋಟೆಯು 20 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಅದರ ಹೊರಗಿನ ಗೋಡೆಗಳು 3 ಕಿ.ಮೀ. ಉದ್ದವಿದೆ. 14 ಮತ್ತು 16 ನೇ ಶತಮಾನದ ನಡುವೆ ಕಲಬುರಗಿಯಲ್ಲಿ ಬಹಮನಿ ಸುಲ್ತಾನರು ಸುದೀರ್ಘ ಆಡಳಿತವನ್ನು ನಡೆಸಿದ್ದರು. 

ಕಾಲಾನಂತರದಲ್ಲಿ ಕಲಬುರಗಿ ಕೋಟೆಯು ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣಿಯ ಕಲಚೂರಿಗಳು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿತ್ತು. 

ಕಲಬುರಗಿ ಕೋಟೆಯೊಳಗಿನ ಪ್ರಮುಖ ಆಕರ್ಷಣೆಗಳು

  • ವೀಕ್ಷಣಾ ಗೋಪುರಗಳು (ವಾಚ್ ಟವರ್‌ಗಳು)
  • ವಿಶ್ವದ ಅತಿ ಉದ್ದದ ಫಿರಂಗಿ, ಪಂಚಲೋಹಗಳಿಂದ ಮಾಡಿದ ಬಾರಾ ಗಾಜಿ ಟೋಫ್ ಸೇರಿದಂತೆ 26 ಫಿರಂಗಿಗಳು
  • ಸುಂದರವಾದ ಪ್ರಾಂಗಣಗಳು
  • ಜಾಮಿಯಾ ಮಸೀದಿ- ಭಾರತದ ವಿನೂತನ ಮತ್ತು ಅತಿದೊಡ್ಡ ಮಸೀದಿ.  ಸ್ಪೇನ್‌ನ ಕಾರ್ಡೋಬಾ ಮಸೀದಿಯನ್ನು ಹೋಲುತ್ತದೆ. 
  • ಖಾಜಾ ಬಂಡೆ ನವಾಜ್ ಸಮಾಧಿ

ಗುಲ್ಬರ್ಗಾ (ಕಲಬುರಗಿ) ತಲುಪುವುದು ಹೇಗೆ? ಕಲಬುರಗಿ ಕೋಟೆ ಬೆಂಗಳೂರಿನಿಂದ 575 ಕಿ.ಮೀ ದೂರದಲ್ಲಿದೆ. ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದು ನಗರ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ, ವಾರದಲ್ಲಿ 3 ಬಾರಿ ಬೆಂಗಳೂರಿನಿಂದ ವಿಮಾನ ಹಾರಾಟವಿದೆ. ಬೀದರ್ ಕಲಬುರಗಿಯಿಂದ 110 ಕಿ.ಮೀ ದೂರದಲ್ಲಿರುವ ಮತ್ತೊಂದು ವಿಮಾನ ನಿಲ್ದಾಣವಾಗಿದೆ. ಕಲಬುರಗಿಯಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಉತ್ತಮ ಬಸ್ ಸಂಪರ್ಕವಿದೆ.

ವಸತಿ: ಕಲಬುರಗಿ ಪಟ್ಟಣದಲ್ಲಿ ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳಿವೆ.

    Tour Location

    Leave a Reply

    Accommodation
    Meals
    Overall
    Transport
    Value for Money