GO UP

ಕಮಲ ಮಹಲ್ (ಲೋಟಸ್ ಮಹಲ್)

separator
Scroll Down

ಕಮಲ ಮಹಲ್  (ಲೋಟಸ್ ಮಹಲ್) ಹಂಪಿಯ ಪ್ರಮುಖ ಸ್ಮಾರಕವಾಗಿದೆ. ವಿಜಯನಗರ ಆಡಳಿತಗಾರ ಕೃಷ್ಣದೇವರಾಯರ ರಾಜಮನೆತನದ ಮಹಿಳೆಯರಿಗಾಗಿ  ನಿರ್ಮಿಸಲಾದ ನೈಸರ್ಗಿಕ ಹವಾನಿಯಂತ್ರಿತ ನಿವಾಸವಾಗಿದೆ. ಕಮಲ ಮಹಲ್ ಮೇಲ್ಭಾಗದಲ್ಲಿ ನೀರಿನ ತೊಟ್ಟಿಯನ್ನು ಹೊಂದಿತ್ತು- ಗೋಡೆ ಮತ್ತು ಛಾವಣಿಯೊಳಗೆ ಇರುವ ರಂಧ್ರಗಳ ಮೂಲಕ ನೀರು ಕಟ್ಟಡದ ತುಂಬಾ ಹರಿದು ಕಡು ಬೇಸಗೆಯಲ್ಲೂ ತಂಪಾಗಿರಿಸುವಲ್ಲಿ ಸಹಕರಿಸುತ್ತಿತ್ತು.  

ಕಮಲ ಮಹಲ್ ಅನ್ನು ಚಿತ್ರಾ೦ಗಿ ಮಹಲ್ ಎಂದೂ ಕರೆಯುತ್ತಾರೆ. ಇದು ಕಮಲದಂತಹ ವಿನ್ಯಾಸವನ್ನು ಹೊಂದಿದೆ ಮತ್ತು ಶತಮಾನಗಳಿಂದಲೂ ಹಾಳಾಗದೆ ಸಧೃಡವಾಗಿದೆ. ಕಮಲ ಮಹಲ್ ಮೂರು ಮಹಡಿಗಳನ್ನು ಹೊಂದಿದ್ದು, ಉದ್ದವಾದ ಚಾವಡಿಯೊಂದಿಗೆ ‌ಗೋಡೆಗಳಿಲ್ಲದ ಮುಕ್ತ ವಿನ್ಯಾಸವನ್ನು ಹೊಂದಿದೆ, ಕಮಲ ಮಹಲ್ನಲ್ಲಿ  24 ಸ್ತಂಭಗಳಿವೆ. ಕಮಲ ಮಹಲಿ ನ ಕಂಬಗಳು ಮತ್ತು ಕಮಾನುಗಳು ಸುಂದರ ಕೆತ್ತನೆಗಳನ್ನು ಹೊಂದಿವೆ. ಭಾರತೀಯ ಮತ್ತು ಇಸ್ಲಾಮಿಕ್ ವಿನ್ಯಾಸ ಶೈಲಿಯ ಮಿಶ್ರಣವನ್ನು ಕಮಲ ಮಹಲ್‌ನಲ್ಲಿ ನೋಡಬಹುದು. ಕಮಲ ಮಹಲ್‌ನಿಂದ ಸ್ವಲ್ಪ ದೂರದಲ್ಲಿ ಒಂದೆರಡು ವೀಕ್ಷಣಾ ಗೋಪುರಗಳಿವೆ ‌ಗಜಶಾಲೆ ಸ್ವಲ್ಪ ದೂರದಲ್ಲಿದೆ. ತಾಂತ್ರಿಕ ಅದ್ಭುತವಲ್ಲದೆ, ಕಮಲ ಮಹಲ್ ಛಾಯಾಚಿತ್ರ ತೆಗೆಯುವವರ ಕಣ್ಮಣಿಯೂ ಹೌದು.  

ಸಮಯ: ಕಮಲ ಮಹಲ್ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ.

ಹಂಪಿಯನ್ನು ತಲುಪುವುದು:

ಹಂಪಿ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆ, ರೈಲು ಅಥವಾ ವಾಯುಯಾನ ಮೂಲಕ ತಲುಪಬಹುದು. ವಿದ್ಯಾನಗರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಹಂಪಿಯಿಂದ 40 ಕಿ.ಮೀ) ಮತ್ತು ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಯಾನಗಳಿವೆ. ಹಂಪಿಯಲ್ಲಿ ಟ್ಯಾಕ್ಸಿ, ಬೈಕು ಅಥವಾ ಬೈಸಿಕಲ್ ಬಾಡಿಗೆಗೆ ಪಡೆದು ಕಮಲ ಮಹಲ್ ತಲುಪಬಹುದು. ಹೊಸಪೇಟೆ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಹಂಪಿಯಿಂದ 15 ಕಿ.ಮೀ). ಹಂಪಿಗೆ ತಲುಪಲು ಬೆಂಗಳೂರಿನಿಂದ ಹಲವಾರು ಬಸ್ಸುಗಳು ಲಭ್ಯವಿದೆ.

ವಸತಿ :

ಹಂಪಿ ಮತ್ತು ಹತ್ತಿರದ ಹೊಸಪೇಟೆ ಪಟ್ಟಣವು ಎಲ್ಲಾ ಬಜೆಟ್‌ಗಳಿಗೆ ಸೂಕ್ತವಾದ ವಸತಿ ಆಯ್ಕೆಗಳನ್ನು ಹೊಂದಿದೆ. ಕೆಎಸ್‌ಟಿಡಿಸಿ ಹಂಪಿಯಲ್ಲಿ ಪ್ರೀಮಿಯಂ ಹೋಟೆಲ್  ಮಯೂರ ಭುವನೇಶ್ವರಿ ಮತ್ತು ಹೊಸಪೆಟೆಯ ಟಿಬಿ ಅಣೆಕಟ್ಟು ಬಳಿ ಬಜೆಟ್ ಹೋಟೆಲ್ ಮಯೂರ ವಿಜಯನಗರವನ್ನು ನಡೆಸುತ್ತಿದೆ. ಎವೊಲ್ವ್ ಬ್ಯಾಕ್ ಹಂಪಿ ಮತ್ತು ಹಯಾಟ್ ಪ್ಲೇಸ್ ಹಂಪಿಯಲ್ಲಿ ಲಭ್ಯವಿರುವ ಅತ್ಯಂತ ಐಷಾರಾಮಿ ರೆಸಾರ್ಟ್ಗಳಾಗಿವೆ. 

    Tour Location

    Leave a Reply

    Accommodation
    Meals
    Overall
    Transport
    Value for Money