GO UP

ಕದ್ರಿ ಮಂಜುನಾಥ ದೇವಸ್ಥಾನ

separator
Scroll Down

ಕದ್ರಿ ಮಂಜುನಾಥ ದೇವಸ್ಥಾನ: ಕದ್ರಿ ಮಂಜುನಾಥ ದೇವಸ್ಥಾನವು ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಿಸಲಾದ ಪ್ರಮುಖ ಹಿಂದೂ ದೇವಾಲಯವಾಗಿದ್ದು, ಕರಾವಳಿ ನಗರವಾದ ಮಂಗಳೂರಿನಲ್ಲಿದೆ. ಸುಂದರವಾದ ಕದ್ರಿ ಬೆಟ್ಟಗಳ ಮೇಲೆ ವಿಜಯನಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿರುವ ಕದ್ರಿ ಮಂಜುನಾಥ ದೇವಾಲಯವು ಹಿಂದೂ ಮತ್ತು ಬೌದ್ಧಧರ್ಮದ  ಸಮ್ಮಿಲನವಾಗಿದೆ. 

ಇತಿಹಾಸ: ಉತ್ತರ ಭಾರತದ ಬೌದ್ಧ ಸನ್ಯಾಸಿಗಳು 11 ನೇ ಶತಮಾನದಲ್ಲಿ ಕದ್ರಿಯನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಐತಿಹಾಸಿಕ ಸ್ಮಾರಕಗಳು ಕದ್ರಿಯನ್ನು ‘ಕಡರಿಕಾ ವಿಹಾರ’ ಎಂದು ಉಲ್ಲೇಖಿಸುತ್ತವೆ. ಸ್ಥಳೀಯ ಭೂಮಾಲೀಕರು ಮತ್ತು ಆಡಳಿತಗಾರರ ಸಹಾಯದಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯ ಸಂಕೀರ್ಣವನ್ನು 14 ನೇ ಶತಮಾನದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಯಿತು. ಶಿವನ ವಿಗ್ರಹವನ್ನು (ಮಂಜುನಾಥೇಶ್ವರ)  ಪಂಚ ಲೋಹದಿಂದ ತಯಾರಿಸಲಾಗಿದೆ. 

ಪ್ರಮುಖ ಕಾರ್ಯಕ್ರಮಗಳು:

  • ರಥೋತ್ಸವ: ಕದರಿ ಮಂಜುನಾಥ ದೇವಸ್ಥಾನದ ವಾರ್ಷಿಕ ರಥೋತ್ಸವವು ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯುತ್ತದೆ, ಇದು ಪ್ರತಿವರ್ಷ ಜನವರಿ ಮಧ್ಯದಲ್ಲಿ ಬರುತ್ತದೆ.
  • ದೀಪೋತ್ಸವ: ಕಾರ್ತಿಕ ಮಾಸ (ಸಾಮಾನ್ಯವಾಗಿ ಅಕ್ಟೋಬರ್ ತಿಂಗಳು) ಸಮಯದಲ್ಲಿ ಬೆಳಕಿನ ಹಬ್ಬವನ್ನು ನಡೆಸಲಾಗುತ್ತದೆ
  • ಕಂಬಳ: ಕದ್ರಿ ಕಂಬಳ ಒಂದು ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದೆ.

ಹತ್ತಿರ: ಕದ್ರಿ ಪಾರ್ಕ್, ಸಂಗೀತ ಕಾರಂಜಿ ಮತ್ತು ಪಾಂಡವ ಗುಹೆಗಳು ಕದ್ರಿ ಮಂಜುನಾಥ ದೇವಾಲಯದ ಪಕ್ಕದಲ್ಲಿವೆ. ಪಿಲಿಕುಳ  ನಿಸರ್ಗ ಧಾಮ, ತನ್ನೀರು  ಭಾವಿ ಬೀಚ್,ಪಣಂಬೂರು ಬೀಚ್ ಕದ್ರಿ ಮಂಜುನಾಥ ದೇವಸ್ಥಾನದಿಂದ ಕೆಲವೇ ಕಿ.ಮೀ. ದೂರದಲ್ಲಿವೆ. 

ಕದ್ರಿ ಮಂಜುನಾಥ ದೇವಸ್ಥಾನ ವನ್ನು ತಲುಪುವುದು ಹೇಗೆ?

ಕದ್ರಿ ಮಂಜುನಾಥ ದೇವಾಲಯವು ಮಂಗಳೂರು ನಗರದ ಹೃದಯಭಾಗದಲ್ಲಿದೆ. ಬೆಂಗಳೂರು 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಮಂಗಳೂರಿನಿಂದ ಆಟೋ ಅಥವಾ ಟ್ಯಾಕ್ಸಿ ಬಳಸಿ ಕದ್ರಿ ಮಂಜುನಾಥ ದೇವಸ್ಥಾನವನ್ನು ತಲುಪಬಹುದು.

ವಸತಿ: ಮಂಗಳೂರು ನಗರವು ಎಲ್ಲಾ ವರ್ಗಗಳಿಗೆ ಸೂಕ್ತವಾದ ಅನೇಕ ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

    Tour Location

    Leave a Reply

    Accommodation
    Meals
    Overall
    Transport
    Value for Money