GO UP

ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ

separator
Scroll Down

ಉಡುಪಿಯಲ್ಲಿರುವ ಶ್ರೀ ಕೃಷ್ಣ  ದೇವಸ್ಥಾನವು  ದಕ್ಷಿಣ ಭಾರತದ ಮುಖ್ಯವಾದ  ಯಾತ್ರಾಸ್ಥಳವಾಗಿದೆ. ಇಲ್ಲಿ ಸಾವಿರಾರು ಭಕ್ತರು ಉಡುಪಿಯಲ್ಲಿರುವ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಲು ದೇವಾಲಯದಕ್ಕೆ ಬರುತ್ತಾರೆ. ಉಡುಪಿಯಲ್ಲಿ ಶ್ರೀಕೃಷ್ಣನನ್ನು ಬಾಲಕೃಷ್ಣ ಅಂದರೆ ಸಣ್ಣ ಹುಡುಗ ಎಂದು ಚಿತ್ರಿಸಲಾಗಿದೆ. ಇಲ್ಲಿನ ಕೃಷ್ಣ ವಿಗ್ರಹವು ಶ್ರೀಕೃಷ್ಣನ ಅತ್ಯಂತ ಸುಂದರವಾದ ವಿಗ್ರಹ ಎಂದು ಹೇಳಲಾಗುತ್ತದೆ ಆದರೆ ವಿಗ್ರಹವನ್ನು ನೇರವಾಗಿ ನೋಡಲಾಗುವುದಿಲ್ಲ,  ನವಗ್ರಹ ಕಿಟಿಕಿ ಎಂಬ 9 ರಂಧ್ರಗಳ ಕಿಟಕಿಯ ಮೂಲಕ ಸ್ವಾಮಿಯ ದರ್ಶನವನ್ನು ಪಡೆಯಬಹುದು. ಉಡುಪಿಯನ್ನು ದಕ್ಷಿಣ ಭಾರತದ ‘ಮಥುರಾ, ಅಂದರೆ  (ಭಗವಾನ್ ಶ್ರೀ ಕೃಷ್ಣನ ಜನ್ಮಸ್ಥಳ, ಉತ್ತರ ಪ್ರದೇಶ ರಾಜ್ಯದಲ್ಲಿದೆ) ಎಂದು ಕರೆಯಲಾಗುತ್ತದೆ.
ಉಡುಪಿ ಶ್ರೀ ಕೃಷ್ಣ ದೇವಸ್ಥಾನ ಮತ್ತು ಮಠಗಳನ್ನು 13 ನೇ ಶತಮಾನದಲ್ಲಿ ಶ್ರೀ ಮಾಧ್ವಾಚಾರ್ಯರು (ಜನಪ್ರಿಯ ವೈಷ್ಣವ ಸಂತ) ಸ್ಥಾಪಿಸಿದರು.

ಉಡುಪಿ ಶ್ರೀ ಕೃಷ್ಣ ದೇವಾಲಯದ ಮುಖ್ಯಾಂಶಗಳು

  • ಕನಕನ ಕಿಂಡಿ: ಶ್ರೀಕೃಷ್ಣನು ತನ್ನ  ಭಕ್ತ ಕನಕದಾಸನಿಗೆ ದರ್ಶನ ನೀಡಿದ್ದಾನೆಂದು ನಂಬಲಾದ ಸಣ್ಣ ಕಿಟಕಿ.  ಪುರಾಣದ  ಪ್ರಕಾರ, ಕನಕದಾಸ ಕೆಳಜಾತಿಯವರಾಗಿದ್ದು ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರಲಿಲ್ಲ.  ಆಗ ಕನಕದಾಸರು  ದೇವಾಲಯದ ಹಿಂದೆ ಹೋಗಿ ಗೋಡೆಯ ಸಣ್ಣ ಬಿರುಕು ಮೂಲಕ ಭಗವಂತನನ್ನು ಪ್ರಾರ್ಥಿಸಿದರು. ಅವರ ಭಕ್ತಿಯಿಂದ ಪ್ರಸನ್ನರಾದ  ಭಗವಾನ್ ಕೃಷ್ಣನ ಪ್ರತಿಮೆ ತಿರುಗಿ ಅವನಿಗೆ ದರ್ಶನ ನೀಡಿತು. ಪಕ್ಕದಲ್ಲಿಯೇ ಕನಕದಾಸ ಮಂಟಪವಿದೆ, ಇದರಲ್ಲಿ ಸಂತನ ಪ್ರತಿಮೆ ಇದೆ. 
  • ದೇವಾಲಯದ ಚಿನ್ನದ ರಥವನ್ನು ಪ್ರವಾಸಿಗರು ನೋಡಬಹುದು.
  • ಉಡುಪಿ ಪರ್ಯಾಯ  ಉತ್ಸವವು ಎರಡು ವರ್ಷಗಳಿಗೊಮ್ಮೆ ಆಚರಿಸುವ ಜನಪ್ರಿಯ ಹಬ್ಬವಾಗಿದೆ. ಪರ್ಯಾಯ ಉತ್ಸವದಲ್ಲಿ  ಉಡುಪಿಯ 8 ಮಠಗಳಲ್ಲಿ ದೇವಾಲಯದ ನಿರ್ವಹಣೆಯನ್ನು ಒಂದು  ಮಠದಿಂದ ಇನ್ನೊಂದಕ್ಕೆ ವರ್ಗಾವಣೆ ಮಾಡುತ್ತಾರೆ .
  • ಅನ್ನದಾನ:  ಶ್ರೀ ಕೃಷ್ಣ ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ  ಭಕ್ತರಿಗೂ ಅನ್ನದಾನದ ವ್ಯವಸ್ಥೆ ಇರುತ್ತದೆ .
  • ಗೋಶಲೆ ​​(ಹಸು ಕೊಟ್ಟಿಗೆ )
  • ದೇವಾಲಯ ರಥ (ಬ್ರಹ್ಮ ರಥ)

ಸಮಯ:ಉಡುಪಿ ಶ್ರೀ ಕೃಷ್ಣ ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 4.30 ರಿಂದ ರಾತ್ರಿ 9.30 ರವರೆಗೆ ತೆರೆದಿರುತ್ತದೆ

ಹತ್ತಿರದ ಸ್ಥಳಗಳು :ಉಡುಪಿ ಪಟ್ಟಣದ 5 ರಿಂದ 10  ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಲ್ಪೆ,ಕಾಪು ಬೀಚ್ ಸೆಂಟ್ ಮೇರಿಸ್ ದ್ವೀಪ ವೀಕ್ಷಿಸಬಹುದಾದ ತಾಣಗಳು

ಉಡುಪಿಯನ್ನು ತಲುಪುವುದು ಹೇಗೆ: ಉಡುಪಿ ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿದೆ. ಮಂಗಳೂರು  ಹತ್ತಿರದ ವಿಮಾನ ನಿಲ್ದಾಣ (60 ಕಿ.ಮೀ). ಉಡುಪಿಯನ್ನು ರೈಲು ಮತ್ತು ರಸ್ತೆ  ಮೂಲಕ ತಲುಪಬಹುದು , ಹಲವಾರು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಉಡುಪಿಯನ್ನು ರಾಜ್ಯದ ಇತರ ಭಾಗಗಳಿಗೆ ಸಂಪರ್ಕಿಸುತ್ತವೆ. ಶ್ರೀ ಕೃಷ್ಣ ದೇವಸ್ಥಾನವು ಉಡುಪಿ ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಇದೆ .

ಉಡುಪಿಯಲ್ಲಿ ಉಳಿಯಲು ಸ್ಥಳಗಳು:ಉಡುಪಿ ಪಟ್ಟಣದಲ್ಲಿ ಹಲವಾರು ಐಷಾರಾಮಿ ಮತ್ತು ಬಜೆಟ್ ಸೌಕರ್ಯಗಳು ಲಭ್ಯವಿದೆ.

     

    Tour Location

     

    Leave a Reply

    Accommodation
    Meals
    Overall
    Transport
    Value for Money