GO UP

ಸೇಂಟ್ ಅಲೋಶಿಯಸ್ ಚಾಪೆಲ್, ಮಂಗಳೂರು

separator
Scroll Down

ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳಿಗೆ 1880 ರಲ್ಲಿ ನಿರ್ಮಿಸಲಾದ ಸೇಂಟ್ ಅಲೋಶಿಯಸ್ ಚಾಪೆಲ್ ಒಂದು ಪ್ರಮುಖ ಪ್ರಾರ್ಥನಾ ಮಂದಿರವಾಗಿದೆ. ಸೇಂಟ್ ಅಲೋಶಿಯಸ್ ಚಾಪೆಲ್‌ನ ವಿನ್ಯಾಸವು ರೋಮ್‌ನ ಸಿಸ್ಟೈನ್ ಚಾಪೆಲ್‌ಗೆ ಹೋಲುತ್ತದೆ ಎಂದು ಹೇಳಲಾಗುತ್ತದೆ. ವರ್ಣರಂಜಿತ ವರ್ಣಚಿತ್ರಗಳು ಮತ್ತು ಒಳಾಂಗಣ ಕೃತಿಗಳಿಂದಾಗಿ ಸೇಂಟ್ ಅಲೋಶಿಯಸ್ ಚಾಪೆಲ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇತಿಹಾಸ: ದಕ್ಷಿಣ ಭಾರತದಲ್ಲಿ ಕ್ರಿಶ್ಚಿಯನ್ ಮಿಷನ್‌ನ ಭಾಗವಾಗಿ ಸೇಂಟ್ ಅಲೋಶಿಯಸ್ ಚಾಪೆಲ್ ಅನ್ನು ನಿರ್ಮಿಸಲಾಯಿತು. ಸೇಂಟ್ ಅಲೋಶಿಯಸ್ ಚಾಪೆಲ್ ಸೇಂಟ್ ಅಲೋಶಿಯಸ್ ಕಾಲೇಜು ಆವರಣದ  ಒಂದು ಭಾಗವಾಗಿದೆ ಮತ್ತು ಸಮುದಾಯದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿಕೊಡಲು ಕಟಿಬದ್ಧವಾಗಿದೆ. 

ವರ್ಣಚಿತ್ರಗಳು: ಸೇಂಟ್ ಅಲೋಶಿಯಸ್ ಚಾಪೆಲ್ ಇಟಲಿಯ ವರ್ಣಚಿತ್ರಕಾರ ಆಂಟೋನಿಯೊ ಮೊಸ್ಚೆನಿ ರಚಿಸಿದ ಹಲವಾರು ಭವ್ಯವಾದ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ಹೆಚ್ಚಿನ ವರ್ಣಚಿತ್ರಗಳು ಸೇಂಟ್ ಅಲೋಶಿಯಸ್ ಗೋಂಝಗಾ  (ಬಡವರ ಉದ್ದಾರಕ್ಕಾಗಿ ತನ್ನ ಸಂಪತ್ತನ್ನು ತ್ಯಜಿಸಿದ್ದಾನೆಂದು ಹೇಳಲಾಗುವ ಶ್ರೀಮಂತ ಕ್ರಿಶ್ಚಿಯನ್) ಮತ್ತು ಅವನ ಜೀವನ ಘಟನೆಗಳನ್ನು ಬಿಂಬಿಸುತ್ತವೆ. ಇತರ ವರ್ಣಚಿತ್ರಗಳು ಯೇಸುಕ್ರಿಸ್ತನ ಜೀವನ ಘಟನೆಗಳನ್ನು ಪ್ರದರ್ಶಿಸುತ್ತವೆ- ಜನನ, ಬ್ಯಾಪ್ಟಿಸಮ್, ವಿವಾಹ ಭೋಜನ ಮತ್ತು ಯೇಸುವಿನ ಶಿಲುಬೆಗೇರಿಸುವಿಕೆ ಇತ್ಯಾದಿ. 

ಸಮಯ: ಸೇಂಟ್ ಅಲೋಶಿಯಸ್ ಚಾಪೆಲ್ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಮತ್ತು 3 ಗಂಟೆಯಿಂದ ಸಂಜೆ 5.30 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ. ವಿವರವಾಗಿ ನೋಡಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. 

ತಲುಪುವುದು ಹೇಗೆ: ಮಂಗಳೂರು ನಗರ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ. ಮಂಗಳೂರು ವಾಯು, ರೈಲು ಮತ್ತು ರಸ್ತೆಯ ಮೂಲಕ ಕರ್ನಾಟಕದ ಉಳಿದ ಭಾಗಗಳಿಂದ  ಉತ್ತಮ ಸಂಪರ್ಕ ಹೊಂದಿದೆ.  ಸೇಂಟ್ ಅಲೋಶಿಯಸ್ ಚಾಪೆಲ್ ನಗರ ಕೇಂದ್ರದಲ್ಲಿದೆ ಮತ್ತು ಮಂಗಳೂರಿನಿಂದ ಆಟೋ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆದು ತಲುಪಬಹುದು.

ವಸತಿ: ಮಂಗಳೂರು ನಗರವು ಎಲ್ಲಾ ಶ್ರೇಣಿಯಲ್ಲಿ ಹಲವಾರು ಹೋಟೆಲ್ ಆಯ್ಕೆಗಳನ್ನು ಹೊಂದಿದೆ.

.

    Tour Location

    Leave a Reply

    Accommodation
    Meals
    Overall
    Transport
    Value for Money