ಚೆಲವಾರ ಕೊಡಗು ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದೆ. ಚೆಲವಾರ ಜಲಪಾತವು ಕಾವೇರಿ ನದಿಯ ಉಪನದಿಯೊಂದು ರಚಿಸಿದ ಪ್ರಶಾಂತ ಜಲಪಾತವಾಗಿದ್ದು, ಬಂಡೆಯ ಮೇಲಿಂದ 150 ಅಡಿಗಳಷ್ಟು ಕೆಳಕ್ಕೆ ಧುಮುಕುವಾಗ ಹಾಲಿನಂತೆ ಬಿಳುಪಾಗಿ ಕಾಣುತ್ತದೆ. ಚೆಲವಾರ ಜಲಪಾತವು ರಾಜ್ಯ ಹೆದ್ದಾರಿ 90 ರಿಂದ ಸ್ವಲ್ಪ ದೂರದಲ್ಲಿರುವ ಚೆಯ್ಯಂಡನೆ ಗ್ರಾಮದಲ್ಲಿದೆ.
ಚೆಲವಾರ ಜಲಪಾತವನ್ನು ದಿನದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಆದರೆ ನೀರು ಬೀಳುವ ಜಾಗ ಸುಮಾರು 100 ಮೀಟರ್ ಆಳವಿದ್ದು ಕೆಳಗೆ ಚೂಪಾದ ಬಂಡೆಗಳಿರುವುದರಿಂದ ಸ್ನಾನ ಮಾಡಲು ಅಥವಾ ಈಜಲು ಚೆಲವಾರ ಜಲಪಾತ ಅಸುರಕ್ಷಿತವಾಗಿದೆ.
ಹತ್ತಿರ: ನಾಲ್ಕುನಾಡು ಅರಮನೆ (ತಡಿಯಾಂಡಮೋಳ್ ಚಾರಣದ ಪ್ರಾರಂಭದ ಸ್ಥಳ) 13 ಕಿ.ಮೀ ದೂರದಲ್ಲಿದೆ. ಭಾಗಮಂಡಲ (38 ಕಿ.ಮೀ), ತಲಕಾವೇರಿ (45 ಕಿ.ಮೀ) ಮತ್ತು ಮಡಿಕೇರಿ ನಗರ (37 ಕಿ.ಮೀ) ಹತ್ತಿರದ ಇತರ ಆಕರ್ಷಣೆಗಳಾಗಿವೆ.
ತಲುಪುವುದು ಹೇಗೆ?
ಚೆಲವಾರ ಜಲಪಾತ ಬೆಂಗಳೂರಿನಿಂದ 260 ಕಿ.ಮೀ ಮತ್ತು ಮಡಿಕೇರಿಯಿಂದ 37 ಕಿ.ಮೀ ದೂರದಲ್ಲಿದೆ. ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 80 ಕಿ.ಮೀ ದೂರದಲ್ಲಿದೆ. ಚೆಲವಾರ ಜಲಪಾತದಿಂದ 21 ಕಿ.ಮೀ ದೂರದಲ್ಲಿರುವ ವಿರಾಜಪೇಟೆ ಪಟ್ಟಣದವರೆಗೆ ಸಾರ್ವಜನಿಕ ಸಾರಿಗೆ ಸೌಲಭ್ಯವಿದೆ. ಚೆಲವಾರ ಜಲಪಾತವನ್ನು ತಲುಪಲು ವಿರಾಜಪೇಟೆಯಿಂದ ಜೀಪ್ ಅಥವಾ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು.
ವಸತಿ: ಚೆಲವಾರ ಜಲಪಾತದ ಕೆಲವೇ ಕಿ.ಮೀ ವ್ಯಾಪ್ತಿಯಲ್ಲಿ ಹಲವು ಹೋಂ ಸ್ಟೇಗಳು ಲಭ್ಯವಿದೆ. ಕ್ಲಬ್ ಮಹೀಂದ್ರಾ ವಿರಾಜಪೇಟೆ ಮತ್ತು ತಮಾರಾ ಕೂರ್ಗ್ ಚೆಲವಾರ ಜಲಪಾತದಿಂದ 12 ಕಿ.ಮೀ ದೂರದಲ್ಲಿರುವ ಎರಡು ಐಷಾರಾಮಿ ರೆಸಾರ್ಟ್ಗಳಾಗಿವೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.