Karnataka Tourism
GO UP

ಸದಾ ಜಲಪಾತಕ್ಕೆ ಚಾರಣ

separator
ಕೆಳಗೆ ಸ್ಕ್ರಾಲ್ ಮಾಡಿ

ಸದಾ ಜಲಪಾತವು ಕರ್ನಾಟಕ-ಗೋವಾ ಗಡಿಯಲ್ಲಿರುವ ಪಶ್ಚಿಮ ಘಟ್ಟದ ​​ಕಾಡುಗಳಲ್ಲಿ ಹುದುಗಿರುವ ಸುಂದರ ಜಲಪಾತವಾಗಿದೆ. ಸದಾ ಜಲಪಾತಕ್ಕೆ ಮಾರ್ಗದರ್ಶಿ ಚಾರಣವು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಹೆಸರುವಾಸಿಯಾದ ಚಟುವಟಿಕೆಯಾಗಿದೆ.

ಸದಾ ಹಳ್ಳಿಯವರೆಗೆ ರಸ್ತೆ ಜಾಲ ಲಭ್ಯವಿದ. ಹಳ್ಳಿಯಿಂದ ಸದಾ ಜಲಪಾತದ ತನಕ ಚಾರಣದ ದೂರವು ಪ್ರಾರಂಭದ ಸ್ಥಳ ಮತ್ತು ಬಳಸಿದ ಹಾದಿಯನ್ನು ಅವಲಂಬಿಸಿ 8 ರಿಂದ 18 ಕಿ.ಮೀ.ವರೆಗೆ ಇರುತ್ತದೆ. ಸದಾ ಜಲಪಾತ ಚಾರಣವು ಮಧ್ಯಮ ಸಂಕೀರ್ಣತೆಯ ಚಾರಣವಾಗಿದ್ದು, ತೊರೆಗಳನ್ನು ದಾಟುವುದು, ಬಂಡೆಗಳನ್ನು ಹತ್ತಿ ಇಳಿಯುವುದು ಮತ್ತು ಮಳೆಗಾಲದಲ್ಲಿ ಇಂಬಳಗಳಿಂದ ಕಾಪಾಡಿಕೊಳ್ಳುವುದು ಮತ್ತಿತರ ಅನುಭವಗಳನ್ನು ನೀಡುತ್ತದೆ.  

ಸದಾ ಜಲಪಾತವು 200 ಮೀಟರ್ ಎತ್ತರವಾಗಿದೆ ಮತ್ತು ಎರಡು ದೊಡ್ಡ ಬೆಟ್ಟಗಳ ನಡುವೆ ಅದ್ಭುತ ನೋಟವನ್ನು ನೀಡುತ್ತದೆ.

ಚಾರಣದ ಹಾದಿಯಲ್ಲಿ ಅನೇಕ ಗುಹೆಗಳನ್ನು ಅನ್ವೇಷಿಸಬಹುದಾಗಿದೆ. ಸದಾ ಜಲಪಾತದ ಚಾರಣದ ಸಮಯದಲ್ಲಿ ಪಕ್ಷಿಗಳು ಮತ್ತು ಕಾಡು ಪ್ರಾಣಿಗಳನ್ನು ಕಾಣಬಹುದಾಗಿದೆ. ಸದಾ ಫಾಲ್ಸ್ ಚಾರಣ ಸಮಯದಲ್ಲಿ ಸದಾ ಕೋಟೆ, ಕೆಲವು ಮೆಟ್ಟಿಲು ಬಾವಿಗಳು ಮತ್ತು ಸದಾದಲ್ಲಿನ ದೇವಾಲಯಗಳು ಸಹ ಭೇಟಿ ನೀಡಲು ಯೋಗ್ಯವಾಗಿವೆ.

ನೀರು ಮತ್ತು ಆಹಾರದಂತಹ ಎಲ್ಲಾ ಅಗತ್ಯ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ. ಪೂರ್ಣ ತೋಳಿನ ಉಡುಪನ್ನು ಶಿಫಾರಸು ಮಾಡಲಾಗಿದೆ. ತಜ್ಞ ಮಾರ್ಗದರ್ಶಿ ಇಲ್ಲದೆ ಒಂಟಿಯಾಗಿ ಹೋಗುವುದು ಸುರಕ್ಷಿತವಲ್ಲ. ಸಾದಾ ಸುತ್ತಮುತ್ತಲಿನ ಕಾಡುಗಳಲ್ಲಿ ಕ್ಯಾಂಪಿಂಗ್  ಅನುಮತಿಸಲಾಗುವುದಿಲ್ಲ, ಹಾಗಾಗಿ ಸೂರ್ಯಾಸ್ತದ ಒಳಗೆ ವಾಪಾಸ್ ಬರಬೇಕಾಗುತ್ತದೆ. 

ತಲುಪುವುದು ಹೇಗೆ: ಸದಾ ಫಾಲ್ಸ್ ಬೆಂಗಳೂರಿನಿಂದ 550 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿದೆ. ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಸದಾ ಫಾಲ್ಸ್ ತಲುಪಲು ಬೆಳಗಾವಿಯಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಅನೇಕ ಟ್ರಾವೆಲ್ ಏಜೆನ್ಸಿಗಳು ಸದಾ ಜಲಪಾತಕ್ಕೆ ಮಾರ್ಗದರ್ಶಿ ಚಾರಣವನ್ನು ಆಯೋಜಿಸುತ್ತವೆ. ಇದರಲ್ಲಿ ಬೆಳಗಾವಿಯಿಂದ ಸಾರಿಗೆ ಸೇರಿದಂತೆ ಊಟ, ಮಾರ್ಗದರ್ಶಿ (ಗೈಡ್) ಸೇವೆ ಇತ್ಯಾದಿ ಸೇರಿರುತ್ತವೆ. 

ವಸತಿ: ಸದಾ ಮತ್ತು ಸುತ್ತಮುತ್ತ ಅನೇಕ ಮನೆ ವಸತಿಗಳು ಮತ್ತು ಹೋಟೆಲ್‌ಗಳು ಲಭ್ಯವಿದೆ. ಅಥವಾ ಬೆಳಗಾವಿ ನಗರದಲ್ಲಿ ಉಳಿಯಬಹುದಾಗಿದೆ. 

Tour Location

Leave a Reply

Accommodation
Meals
Overall
Transport
Value for Money