ಬೀದರ ಜಿಲ್ಲೆಯ ಅಸ್ತೂರು ಇಂಡೋ-ಸಾರಾಸೆನಿಕ್ ಸ್ಮಾರಕಗಳ ಪ್ರಮುಖ ಕೇಂದ್ರವಾಗಿದೆ. ಅಸ್ತೂರು ಬಹಮನ್ ಶಾಹಿ ಕಾಲದ ಹಲವಾರು ಗೋರಿಗಳಿಗೆ ನೆಲೆಯಾಗಿದೆ ಮತ್ತು ಬೀದರ್‌ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಅಸ್ತೂರಿನಲ್ಲಿ ಇರುವ ಪ್ರಮುಖ ಗೋರಿಗಳು
- ಅಹ್ಮದ್ ಷಾ ಅಲ್ ವಾಲಿ ಬಹಮಣಿಯ ಗೋರಿ: ಅಹ್ಮದ್ ಷಾ ಅಲ್ ವಾಲಿ ಬಹಮನಿಯ ಗೋರಿಯನ್ನು ಚೌಕ ವಿನ್ಯಾಸದಲ್ಲಿ ದಪ್ಪವಾದ ಗೋಡೆಗಳಿರುವ ಎತ್ತರದ ಕಟ್ಟಡದಲ್ಲಿ ನಿರ್ಮಿಸಲಾಗಿದೆ.
- ಅಹ್ಮದ್ ಷಾ ರಾಣಿಯ ಗೋರಿ: ಹೂವಿನ ವಿನ್ಯಾಸಗಳು, ಧಾರ್ಮಿಕ ಗ್ರಂಥಗಳು ಮತ್ತು ವರ್ಣಚಿತ್ರಗಳಿಂದ ಅಲಂಕರಿಸಿದ ಛಾವಣಿಗಳನ್ನು ಹೊಂದಿದೆ.
- ಸುಲ್ತಾನ್ ಅಲ್ಲಾವುದ್ದೀನ್ ಷಾ II ನ ಗೋರಿ: ಸಾಕಷ್ಟು ಟೈಲ್ ಕೆಲಸ ಮತ್ತು ನೀಲಿ, ಹಸಿರು ಮತ್ತು ಹಳದಿ ಬಣ್ಣದ ಶೃಂಗಾರವನ್ನು ಹೊಂದಿದೆ. ಮೂರು ಎತ್ತರದ ಕಮಾನುಗಳು ಮತ್ತು ಚೌಕಾಕಾರದ ಮಂಟಪ ಈ ಸಮಾಧಿಯ ಪ್ರಮುಖ ಲಕ್ಷಣಗಳಾಗಿವೆ.
- ಸುಲ್ತಾನ್ ಹುಮಾಯೂನ್ ಗೋರಿ: ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿರುವ ಹುಮಾಯೂನ್ ಗೋರಿ ದಪ್ಪವಾಗಿತ್ತು ಆದರೆ ಸಿಡಿಲು ಬಡಿದು ವಿಭಜನೆಯಾಗಿದೆ.
- ಮಲಿಕಾ-ಇ-ಜಹಾನ್ ಗೋರಿ: ಮಲ್ಲಿಕಾ ಸುಲ್ತಾನ್ ಹುಮಾಯೂನ್ ಷಾ ಅವರ ಪತ್ನಿ. ಅವಳ ಸಮಾಧಿಯು ಪ್ರವೇಶ ಕಮಾನುಗಳನ್ನು ಗಾರೆ ಕೆಲಸದಿಂದ ಸೊಗಸಾಗಿ ಅಲಂಕರಿಸಲಾಗಿದೆ.
- ಹಜರತ್ ಖಲೀಲ್ ಉಲ್ಲಾ ಅವರ ಗೋರಿ: ಸಂತ ಖಲೀಲ್-ಉಲ್ಲಾ ರಾಜಕುಮಾರರಾದ ಅಹ್ಮದ್ ಷಾ ಮತ್ತು ಅಲ್ಲಾವುದ್ದೀನ್ ಅವರ ಗುರುಗಳಾಗಿದ್ದರು. ಅವರ ಸಮಾಧಿಯು ಎರಡು ಅಂತಸ್ತಿನ ಕಟ್ಟಡವಾಗಿದ್ದು, ಎತ್ತರದ ಪಾಯದ ಮೇಲೆ ನಿರ್ಮಿಸಲಾಗಿದೆ.
- ಇತರ ಗೋರಿಗಳು: ಸುಲ್ತಾನ್ ನಿಜಾಮ್ ಶಾ, ಸುಲ್ತಾನ್ ಮುಹಮ್ಮದ್ ಷಾ III, ಮುಹಮ್ಮದ್ ಷಾ ಬಹಮನಿ, ಸುಲ್ತಾನ್ ವಾಲಿ-ಉಲ್ಲಾ ಮತ್ತು ಸುಲ್ತಾನ್ ಕಲೀಮ್ ಉಲ್ಲಾ ಅವರ ಸಮಾಧಿಗಳು.
ತಲುಪುವುದು ಹೇಗೆ: ಅಸ್ತೂರು ಬೆಂಗಳೂರಿನಿಂದ 690 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೀದರ್ ನಿಂದ 8 ಕಿ.ಮೀ. ದೂರದಲ್ಲಿದೆ. ಬೀದರ್ ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಅಷ್ಟೂರು ತಲುಪಲು ಬೀದರ್‌ನಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ವಸತಿ: ಅಷ್ಟೂರಿನಿಂದ 8 ಕಿ.ಮೀ ದೂರದಲ್ಲಿರುವ ಬೀದರ್ ನಗರದಲ್ಲಿ ಹೋಟೆಲ್‌ಗಳು ಲಭ್ಯವಿದೆ.